'ರಮೇಶ ಜಾರಕಿಹೊಳಿ‌ ಉತ್ತರ ಕರ್ನಾಟಕದ ಹೀರೋ'

By Web DeskFirst Published Nov 20, 2019, 3:29 PM IST
Highlights

ಯಡಿಯೂರಪ್ಪ ಅವರನ್ನ ಸಿಎಂ ಮಾಡಲು ರಮೇಶ್ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ ಎಂದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ| ರಮೇಶ ಜಾರಕಿಹೊಳಿ‌ ಒಬ್ಬರೇ ಅಲ್ಲ ಅವರ ಜೊತೆ 17 ಜನ ಶಾಸಕರು ತ್ಯಾಗ ಮಾಡಿದ್ದಾರೆ| ರಮೇಶ ಮಂತ್ರಿ ಪದವಿ ತೆಗೆದು ಹಾಕುವ ಮೂಲಕ ಸಮ್ಮಿಶ್ರ ಸರ್ಕಾರ ಅಪಮಾನ ಮಾಡಿತ್ತು| ಹೀಗಾಗಿ ರಮೇಶ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು| 

ಗೋಕಾಕ್(ನ.20): ಗೋಕಾಕ್ ಉಪಚುನಾವಣೆ ಜಾರಕಿಹೊಳಿ‌ ಕುಟುಂಬಕ್ಕೆ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಜಾರಕಿಹೊಳಿ‌ ಅವರು ಮಂತ್ರಿಯಾಗಿ ಇರಬಹುದಿತ್ತು. ಮೂರು ತಿಂಗಳು ಕೋರ್ಟ್ ಓಡಾಡುವ ಪರಿಸ್ಥಿತಿ ಇರಲಿಲ್ಲ ಎಂದು ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಲು ರಮೇಶ್ ಜಾರಕಿಹೊಳಿ‌ ಅವರು ತ್ಯಾಗ ಮಾಡಿದ್ದಾರೆ. ರಮೇಶ ಜಾರಕಿಹೊಳಿ‌ ಒಬ್ಬರೇ ಅಲ್ಲ ಅವರ ಜೊತೆ 17 ಜನ ಶಾಸಕರು ಕೂಡ ತ್ಯಾಗ ಮಾಡಿದ್ದಾರೆ. ರಮೇಶ ಅವರ ಮಂತ್ರಿ ಪದವಿ ತೆಗೆದು ಹಾಕುವ ಮೂಲಕ, ಮೈತ್ರಿ ಸರ್ಕಾರ ಅಪಮಾನ ಮಾಡಿತ್ತು. ಹೀಗಾಗಿ ರಮೇಶ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಮೇಶ ಅವರಿಗೆ ಕೆಲವರು ತೋಳ ಬಂತು ತೋಳ ಎಂದು ಅಪಹಾಸ್ಯ ಮಾಡಿದ್ದರು. ಬಹಳ ಚಾಣಾಕ್ಷತನಿಂದ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ರಮೇಶ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹೀರೋ ಇದ್ದ ಹಾಗೆ ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

ಕೆಲ ವಿಷಪೂರಿತ ಹಾವುಗಳ ರಮೇಶ ಜಾರಕಿಹೊಳಿ‌ ವಿರುದ್ಧ ಹೊಂಚು‌ ಹಾಕುತ್ತಿವೆ. ಇವನ್ನು ಒಳಗೆ ಬರದಂತೆ ನೋಡಿಕೊಳ್ಳಬೇಕು. ಇದು ರಮೇಶ ಜಾರಕಿಹೊಳಿ‌ ಚುನಾವಣೆ ಅಲ್ಲ, ಇದು ಬಿಜೆಪಿ ಕಾರ್ಯಕರ್ತರ ಚುನಾವಣೆಯಾಗಿದೆ. ರಮೇಶ್ ಜಾರಕಿಹೊಳಿ‌ ಗೆದ್ದರೆ ರಾಜ್ಯದ ಉಪಮುಖ್ಯಮಂತ್ರಿ ಆಗಲಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಕೆಲಸ ಆಗುತ್ತವೆ ಹೀಗಾಗಿ ರಮೇಶ ಅವರನ್ನು ಪ್ರಚಂಡ ಬಹುಮತದಿಂದ ಗಲ್ಲಿಸಬೇಕು ಎಂದು ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ. 

ಕಾಂಗ್ರೆಸ್ ಗೆ ವೋಟ್ ಕೊಟ್ಟರೆ ಏನೂ ಸಿಗುತ್ತೆ, ಏನೂ ಸಿಗಲ್ಲ, ಜೆಡಿಎಸ್ ಪಕ್ಷ ಅಂತು ಆಟಕ್ಕುಂಟು ಲೆಕ್ಕಕ್ಕಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಡೆಪಾಸಿಟ್ ಕೂಡ ಬರಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

click me!