ಹಿಂದಿ ಭಾರತದ ರಾಷ್ಟ್ರಭಾಷೆ ಹೇಳಿಕೆ: ದೊಡ್ಡರಂಗೇಗೌಡ ವಿರುದ್ಧ ಕಸಂಸ ತೀವ್ರ ಆಕ್ರೋಶ

By Kannadaprabha NewsFirst Published Jan 25, 2021, 8:24 AM IST
Highlights

ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಸಂಪರ್ಕ ಭಾಷೆ ಮಾತ್ರ| ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಒಪ್ಪಿಕೊಂಡಿರುವ ಎಲ್ಲ ಭಾಷೆಗಳಿಗೂ ಅಷ್ಟೇ ಮನ್ನಣೆ ನೀಡಬೇಕು| ರಾಷ್ಟ್ರ ಭಾಷೆ ಎಂಬ ಪರಿಭಾಷೆಯೇ ತಪ್ಪು: ಡಾ. ಕೋ.ವೆಂ.ರಾಮಕೃಷ್ಣೇಗೌಡ| 

ಬೆಂಗಳೂರು(ಜ.25): ‘ಹಿಂದಿ’ ಭಾರತದ ರಾಷ್ಟ್ರಭಾಷೆ ಎಂಬ ಸಾಹಿತಿ ಡಾ. ದೊಡ್ಡರಂಗೇಗೌಡ ಅವರ ಹೇಳಿಕೆಯನ್ನು ಕನ್ನಡ ಸಂಘರ್ಷ ಸಮಿತಿ ಖಂಡಿಸಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಅದು ಕೇವಲ ಸಂಪರ್ಕ ಭಾಷೆ ಮಾತ್ರ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಒಪ್ಪಿಕೊಂಡಿರುವ ಎಲ್ಲ ಭಾಷೆಗಳಿಗೂ ಅಷ್ಟೇ ಮನ್ನಣೆ ನೀಡಬೇಕು. ರಾಷ್ಟ್ರ ಭಾಷೆ ಎಂಬ ಪರಿಭಾಷೆಯೇ ತಪ್ಪು ಎಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಕೋ.ವೆಂ.ರಾಮಕೃಷ್ಣೇಗೌಡ ಹೇಳಿದ್ದಾರೆ.

ಭಾರತವು ಭಾಷಿಕ ರಾಷ್ಟ್ರಗಳ ಒಕ್ಕೂಟವೇ ಹೊರತು ಏಕಭಾಷೆ, ಏಕ ಸಂಸ್ಕೃತಿಯ ರಾಷ್ಟ್ರವಲ್ಲ. ಕನ್ನಡ ಭಾಷೆಯ ಪ್ರಾಚೀನತೆಯನ್ನು ಹಿಂದಿಯೊಡನೆ ಹೋಲಿಸಿ ನೋಡಿದರೆ, ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿ ಭಾಷೆಗೆ ಕೇವಲ 500 ವರ್ಷಗಳ ಇತಿಹಾಸವಿದೆ. ಹಿಂದಿಯನ್ನು ನಾವು ಭಾಷೆಯಾಗಿ ವಿರೋಧಿಸಬಾರದು, ಬದಲಾಗಿ ಅದರ ಆಕ್ರಮಣಕಾರಿ ಧೋರಣೆ ಮತ್ತು ಭಾಷೆಗಳ ಕತ್ತು ಹಿಸುಕುವ ಮನೋಭಾವವನ್ನು ವಿರೋಧಿಸಬೇಕು. ದೊಡ್ಡರಂಗೇಗೌಡ ಅವರು ಕನ್ನಡದ ಅನನ್ಯ ಅಭಿಮಾನಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಿಂದಿ ಪರವಾದ ಅವರ ನಿಲುವನ್ನು ಒಪ್ಪಲಾಗದು ಎಂದಿದ್ದಾರೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೊಡ್ಡರಂಗೇಗೌಡ್ರು ಆಯ್ಕೆ..!

ಭಾಷಾಂತರ ತರಬೇತಿ

ಬೆಂಗಳೂರು: ನಗರದ ಭಾಷಾಂತರ ಸಂಸ್ಥೆ ಗೃಹಿಣಿಯರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, ವಕೀಲರು ಹಾಗೂ ಇತರೆ ಆಸಕ್ತರಿಗಾಗಿ 60 ದಿನಗಳ ದೂರಶಿಕ್ಷಣ ಭಾಷಾಂತರ ತರಬೇತಿ ವ್ಯವಸ್ಥೆ ಮಾಡಿದೆ. ತರಬೇತಿ ಪೂರ್ಣಗೊಳಿಸಿದವರು, ಆಸಕ್ತಿ ಇದ್ದರೆ ಅನುವಾದದ ವೃತ್ತಿ ಕೈಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಭಾಷಾಂತರ ಸಂಸ್ಥೆ, ನಂ.88, ಉಲ್ಲಾಳು ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಯೂನಿವರ್ಸಿಟಿ ಕ್ವಾರ್ಟರ್ಸ್‌ಹತ್ತಿರ, ಜ್ಞಾನಜ್ಯೋತಿನಗರ, ಬೆಂಗಳೂರು ಅಥವಾ ದೂ.ಸಂ. 9916994485 ಸಂಪರ್ಕಿಸಬಹುದು.

ಉಚಿತ ಐಟಿಐ ಶಿಕ್ಷಣ

ಬೆಂಗಳೂರು: ಸುವರ್ಣ ನಾಗರಾಜು ಎಜುಕೇಷನಲ್‌ಟ್ರಸ್ಟ್‌ಪ್ರತಿಭಾವಂತ ಹಾಗು ಬಡ ವಿದ್ಯಾರ್ಥಿಗಳಿಗೆ ಉಚಿತ ಐಟಿಐ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನಿಸಿದೆ. ಟೂಲ್‌ಆ್ಯಂಡ್‌ಡೈ ಮೇಕಿಂಗ್‌(ಡೈಸ್‌ಆ್ಯಂಡ್‌ಮೌಲ್ಡ್‌ಹಾಗೂ ಜಿಗ್ಸ್‌ಆ್ಯಂಡ್‌ಫಿಕ್ಸಚ​ರ್‍ಸ್), ಫಿಟ್ಟರ್‌, ಎಲೆಕ್ಟ್ರಾನಿಕ್‌ಮೆಕ್ಯಾನಿಕ್‌, ಟರ್ನರ್‌, ಕಂಪ್ಯೂಟರ್‌ಆಪರೇಟರ್‌ಆ್ಯಂಡ್‌ಪ್ರೋಗ್ರಾಮಿಂಗ್‌ಅಸಿಸ್ಟೆಂಟ್‌ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ ಫೇಲಾದವರಿಗೂ ಅವಕಾಶವಿದೆ. ಆಸಕ್ತರು ಮೊ. 9886629502, 9611203390 ಸಂಪರ್ಕಿಸಬಹುದು.
 

click me!