ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಇಷ್ಟು ಎತ್ತರಕ್ಕೆ ಬೆಳೆಯವಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಕೊಡುಗೆ ಅಪಾರವಾಗಿದೆ.
ತುಮಕೂರು (ಆ.12): ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ 80ನೇ ಜನ್ಮದಿನದ ನಿಮಿತ್ತ ಅವರು ಮರಣ ಹೊಂದಿದ ಶ್ರೀ ಪರೆಂಬೂರಿನಿಂದ ಬಂದ ರಾಜೀವ್ ಜ್ಯೋತಿಯಾತ್ರೆಯನ್ನು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಬರಮಾಡಿಕೊಂಡರು. ಆ. 8ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮರಣ ಹೊಂದಿದ ಶ್ರೀ ಪೆರಂಬೂರಿನಿಂದ ಹೊರಟ ಯಾತ್ರೆ, ಆ. 9 ರಂದು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3ಗಂಟೆಗೆ ಜಿಲ್ಲೆಗೆ ಅಗಮಿಸಿದ್ದು, ಎಚ್.ಎಂ.ಎಸ್.ಐ.ಟಿ ಕಾಲೇಜು ಬಳಿ ರಾಜೀವ್ ಗಾಂಧಿ ಜೋತಿಯಾತ್ರೆಯನ್ನು ಸ್ವಾಗತಿಸಿ, ಬೈಕ್ ರ‍್ಯಾಲಿ ಮೂಲಕ ಸಿದ್ಧಗಂಗಾ ಮಠಕ್ಕೆ ಕರೆ ತರಲಾಯಿತು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಇಷ್ಟು ಎತ್ತರಕ್ಕೆ ಬೆಳೆಯವಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಕೊಡುಗೆ ಅಪಾರವಾಗಿದೆ. ಯುವಕರು ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ 21 ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿದಿದ್ದಾರೆ. ಪ್ರತಿಯೊಬ್ಬರು ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಭಾಗವಹಿಸುವಂತಹ ವಾತಾವರಣ ಸೃಷ್ಟಿಸಿದರು ಎಂದರು.
ಉಂಗುರದ ನಂಟಿಗೆ 8 ವರ್ಷ: ನೂರು ಜನ್ಮದಲ್ಲೂ ನೀನೇ ನನ್ನ ಇನಿಯ ಎಂದ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ!
ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ದಿ. ರಾಜೀವ್ ಗಾಂಧಿ 1991ರ ಮೇ. 21 ರಂದು ತಮಿಳುನಾಡಿನ ಶ್ರೀಪರೆಂಬದೂರಿನಲ್ಲಿ ನಡೆದ ಮಾನವ ಬಾಂಬ್‌ಗೆ ಬಲಿಯಾಗಿ ಆಸು ನೀಗಿದರು. ದೇಶದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಾಜೀವ್ ಗಾಂಧಿ ಸಂವಿಧಾನದ 73-74ನೇ ಕಲಂಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮೂಲಕ ಎಲ್ಲಾ ವರ್ಗದ ಜನರಿಗೆ ರಾಜಕೀಯ ಅಧಿಕಾರ ದೊರೆಯುವಂತೆ ಮಾಡಿದರು. ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು ನೀಡಿದ ಪರಿಣಾಮ ಇಂದು ಎಲ್ಲರ ಕೈಯಲ್ಲೂ ಮೊಬೈಲ್ ಮತ್ತು ಎಲ್ಲರ ಮನೆಯಲ್ಲಿ ಟಿವಿ ಕಾಣುವಂತಾಗಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿಯೂ ನವೋದಯ ಶಾಲೆ ತೆರೆದು ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯ ಹೊಂದಿದ್ದರು. ಪ್ರಪಂಚದಲ್ಲಿ ಶಾಂತಿ ನೆಲಸಬೇಕೆಂಬ ಉದ್ದೇಶದಿಂದ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆಯನ್ನು ಕಳುಹಿಸಿದವರು. ಇಂತಹವರ ಹೆಸರಿನ ಈ ಜ್ಯೋತಿಯಾತ್ರೆಗೆ ಶುಭವಾಗಲೆಂದು ಹಾರೈಸಿದರು. ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಆರ್. ದೊರೈ ಕಳೆದ 34 ವರ್ಷಗಳಿಂದ ಈ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ರಾಜೀವ್ ಗಾಂಧಿ ಹೆಸರಿನಲ್ಲಿ ಜೋತಿಯಾತ್ರೆಯನ್ನು ಪ್ರತಿವರ್ಷ ಆಯೋಜಿಸಿಕೊಂಡು ಬರಲಾಗುತ್ತಿದೆ. ಯಾತ್ರೆಯು 2500 ಕಿ.ಮೀ. ಸಂಚರಿಸಿ ಆ.20ರಂದು ವೀರಭೂಮಿ ತಲುಪಲಿದೆ ಎಂದರು.
ರಾಜೀವ್ ಗಾಂಧಿ ಜೋತಿಯಾತ್ರೆ ಉಪಾಧ್ಯಕ್ಷ ಐಯ್ಯರ್ ಮಾತನಾಡಿ, ಆ. 8ರಂದು ಶ್ರೀಪರೆಂಬೂರಿನಿಂದ ಹೊರಟ ಯಾತ್ರೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮೂಲಕ ಆ.19 ರಂದು ದೆಹಲಿ ತಲುಪಲಿದೆ. ಈ ಯಾತ್ರೆಯ ಭಯೋತ್ಪಾಧನಾ ವಿರೋಧಿ ಸಂದೇಶವನ್ನು ಸಾರುತ್ತದೆ. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಸಾರುವ ಉದ್ದೇಶವಾಗಿದೆ ಎಂದರು. ಮುಖಂಡರಾದ ನಯಾಜ್ ಅಹಮದ್, ಫಯಾಜ್, ವಾಲೆಚಂದ್ರಯ್ಯ, ಸಂಜೀವ್‌ಕುಮಾರ್, ಲೋಕೇಶ್, ಆದಿಲ್, ಗುರುಪ್ರಸಾದ್, ವಜಾಜ್, ಷಣ್ಮುಖಪ್ಪ, ರಾಜೀವ್ ಗಾಂಧಿ ಜೋತಿಯಾತ್ರೆಯೊದಿಗೆ ಆಗಮಿಸಿರುವ ಶ್ರೀ ನಿವಾಸಪ್ಪ, ಮಾಣಿಕ್ಯಂ, ಗೀತ, ಈಶ್ವರಿ, ಮಹದೇವಪ್ಪ ಉಪಸ್ಥಿತರಿದ್ದರು.
ಮತ್ತೆ ಭೂಕುಸಿತದ ಭೂತಕ್ಕೆ ಬೆಚ್ಚಿಬಿದ್ದ ಹಿಂದಿನ ಭೂಕುಸಿತಗಳಲ್ಲಿ ಸತ್ತು ಬದುಕಿ ಬಂದ ಜನ!
ಕೋಟ್, ಅಪರಿಮಿತ ತಾಳ್ಮೆ, ಜ್ಞಾನಕ್ಕೆ ಹೆಸರಾಗಿದ್ದ ರಾಜೀವ್ ಗಾಂಧಿ ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿ. ಭಯೋತ್ಪಾದನೆ ವಿರುದ್ಧ ಸಮರ ಸಾರಿ, ಅದರ ಮುಲೋತ್ಪಾಟನೆಗೆ ಮುನ್ನುಡಿ ಬರೆದಿದ್ದರು. ಇವರನ್ನು ಜನರಿಗೆ ಪರಿಚಯಿಸುವ ಈ ರಾಜೀವ್ ಜೋತಿಯಾತ್ರೆ ಯಶಸ್ವಿಯಾಗಲಿ.
- ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ.