ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 25 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಶೋರೂಂನಲ್ಲಿದ್ದ 73 ಬೈಕ್‌ಗಳು ಸುಟ್ಟು ಭಸ್ಮವಾಗಿವೆ.
ಬೆಂಗಳೂರು (ನ.19): ಎಲೆಕ್ಟ್ರಿಕ್ ಬೈಕ್‌ಗಳ ಅವಾಂತರಗಳ ನಡುವೆ ಮಂಗಳವಾರ ಬೆಂಗಳೂರಿನ ಹೃದಯಭಾಗವಾದ ರಾಜಾಜಿನಗರದ ನವರಂಗ್ ಪ್ರದೇಶದ ಬಳಿ ಎಲೆಕ್ಟ್ರಿಕ್ ಶೋ ರೂಮ್‌ಗೆ ಬೆಂಕಿಗೆ ಆಹುತಿಯಾಗಿದೆ. ಶೋ ರೂಮ್‌ನಲ್ಲಿ 73 ಬೈಕ್‌ಗಳು ಸುಟ್ಟು ಭಸ್ಮವಾಗಿದ್ದು, 25 ವರ್ಷದ ಯುವತಿಯೋರ್ವಳು ಕೂಡ ಸುಟ್ಟು ಕರಕಲಾಗಿದ್ದಾಳೆ. ಆಕೆಯ ತಂದೆ-ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರೀನ್ ಸಿಟಿ ಮೋಟಾರ್ಸ್ ರೂಮ್‌ನಲ್ಲಿ ಎಲೆಕ್ಟ್ರಿಕ್ ಬೈಕ್‌ವೊಂದರ ಶಾರ್ಟ್ ಸರ್ಕ್ಯೂಟ್‌ನಿಂದ ಅವಗಢ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಶೋ ರೂಮ್‌ನಲ್ಲಿ ಸೇಲ್ಸ್ ಗರ್ಲ್ ಹಾಗೂ ರಿಸಪ್ಶನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾಳ ಶವವನ್ನು ಶೋ ರೂಮ್‌ನಿಂದ ಹೊರತೆಗೆಯಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಯುವತಿಯ ತಂದೆ, ತಾಯಿ ಆಗಮಿಸಿ ಕಣ್ಣೀರಿಟ್ಟಿದ್ದಾರೆ.
ನಾಳೆ 26ನೇ ವರ್ಷದ ಜನ್ಮದಿನವನ್ನು ಯುವತಿ ಆಚರಿಸಿಕೊಳ್ಳಬೇಕಿತ್ತು. ಬೆಂಕಿಗಾಹುತಿಯಾದ ಯುವತಿ ಪ್ರಿಯಾ, ಓಕಳಿಪುರಂ ನಿವಾಸಿಯಾಗಿದ್ದು, ನಾಳೆ ಹುಟ್ಟು ಹಬ್ಬದ ಸಂಭ್ರಮವಾಗಿತ್ತು. ಅದಕ್ಕೂ ಒಂದು ದಿನ ಮುನ್ನವೇ ಆಕೆ ಮಸಣದ ಹಾದಿ ಹಿಡಿದಿದ್ದಾಳೆ.
ನವೆಂಬರ್ 20ಕ್ಕೆ ಆಕೆ ಬರ್ತ್‌ಡೇ ಸಾರ್. ಏನ್ ಹೇಳೋದು ಅಂತಾನೆ ಅರ್ಥವಾಗ್ತಿಲ್ಲ. ಬರ್ತ್‌ಡೇ ಅಂದ್ಕೊಂಡು ಬಟ್ಟೆ ಎಲ್ಲಾ ತರಿಸಿ ಇಟ್ಟಿದ್ದೆ ಸರ್. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ಲು. ಏನು ಅರ್ಥ ಆಗ್ತಿಲ್ಲ ಸರ್. ಅದರ ಓನರ್ ಎಲ್ಲಿದ್ದಾನೆ ಸರ್ ಅವನು. 6.30ಗೆ ನನ್ನ ಮಗನಿಗೆ ಫೋನ್ ಮಾಡಿದ್ದಾರೆ. ಮಾಮೂಲಿ 7 ಅಥವಾ 7.30 ಹಾಗೆ ಮನೆಯಲ್ಲಿ ಇರ್ತಾ ಇದ್ದಳು. ನನ್ನ ಫ್ರೆಂಡ್ ಫೋನ್ ಮಾಡಿ ನನಗೆ ವಿಚಾರ ತಿಳಿಸಿದರು. 5.15 ಬೆಂಕಿ ಬಿದ್ದಿದೆ. ಯಾರೂ ತಿಳಿಸಲಿಲ್ಲ. 20 ಜನ ಇಲ್ಲಿ ಕೆಲಸ ಮಾಡ್ತಾರೆ. ಇನ್ನೂ ಅವಳ ಬಾಡಿ ತೋರಿಸಿಲ್ಲ ಎಂದು ಪ್ರಿಯಾಳ ತಂದೆ ಆರ್ಮುಗಂ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಡೆಪ್ಯುಟಿ ಡೆರೆಕ್ಟರ್ ಯೂನಿಸ್ ಅಲಿ ಕೌಸರ್ ಭೇಟಿ ಪರಿಶೀಲನೆ ಮಾಡಿದ್ದಾರೆ. 'ಘಟನೆ ಹೇಗಾಗಿದೆ, ಏನಾಗಿದೆ ಅಂತ ನೋಡಬೇಕು. ನಮಗೆ ಮೊದಲ ಪ್ರಾಶಸ್ತ್ಯ ಬೆಂಕಿ ನಂದಿಸುವುದು. ಆ ಕೆಲಸ ಮಾಡಿದ್ದೇವೆ. ಘಟನೆ ಹೇಗಾಯ್ತು ಅಂತ ಇನ್ನಷ್ಟೆ ನೋಡಬೇಕು. ಮುನ್ನೆಚ್ಚರಿಕೆ ಕ್ರಮ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಆ ಬಗ್ಗೆ ವಿಚಾರಣೆ ನಡೆಸುತ್ತೇವೆ. ಘಟನೆಯಲ್ಲಿ 25 ವಾಹನಗಳು ಸುಟ್ಟು ಕರಕಲಾಗಿದ್ದು ಗೊತ್ತಾಗಿದೆ. ಘಟನೆಯಲ್ಲಿ ಒಬ್ಬ ಹೆಣ್ಣು ಮಗಳು ಸತ್ತಿದ್ದಾಳೆ. ಸದ್ಯ ಘಟನಾ ಸ್ಥಳ ಪರಿಶೀಲನೆ ನಡೆಸುತ್ತೇವೆ. ಘಟನೆಗೆ ಏನು ಕಾರಣ ಅಂತ ನಂತರದಲ್ಲಿ ತಿಳಿಯಲಿದೆ. ಎಷ್ಟು ನಷ್ಟ ಆಗಿದೆ ಅನ್ನೋದು ನಂತರ ತಿಳಿಯಲಿದೆ' ಎಂದು ತಿಳಿಸಿದ್ದಾರೆ.
ರಾಜಾಜಿನಗರದಲ್ಲಿ ಅಗ್ನಿ ಅವಗಢ; ಧಗಧಗನೆ ಉರಿದ ಎಲೆಕ್ಟ್ರಿಕ್ ಶೋ ರೂಮ್, ಯುವತಿ ಸಜೀವ ದಹನ
ಬೆಂಕಿ ಅವಗಢದಲ್ಲಿ ಶೋ ರೂಮ್‌ನ ಸಿಬ್ಬಂದಿ ದಿಲೀಪ್ ಎನ್ನುವವನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಎರಡೂ ಕೈಗಳಿಗೆ ಬ್ಯಾಂಡೇಜ್ ಹಾಕಲಾಗಿದೆ. ಉತ್ತರ ವಿಭಾಗದ ಡಿಸಿಪಿ ಸೈದುಲ್ ಅಡಾವತ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಗಿಂತ ಈಗ ಇವರೇ ಶ್ರೀಮಂತರು, 38,500 ಕೋಟಿ ಮೌಲ್ಯ!