ರಾಜಾಜಿನಗರದ ಎಲೆಕ್ಟ್ರಿಕ್ ಶೋ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 20 ವರ್ಷದ ಸಿಬ್ಬಂದಿ ಪ್ರಿಯಾ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಎಲೆಕ್ಟ್ರಿಕ್ ಬೈಕ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಬೆಂಗಳೂರು (ನ.19): ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಮಂಗಳವಾರ ಅಗ್ನಿ ಅವಗಢ ಸಂಭವಿಸಿದ್ದು, ಎಲೆಕ್ಟ್ರಿಕ್ ಶೋ ರೂಮ್ ಧಗಧಗನೆ ಉರಿದಿದೆ. ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ. ಎಲೆಕ್ಟ್ರಿಕ್ ಬೈಕ್ ಶೂ ರೂಂ ನಲ್ಲಿ ಅಗ್ನಿ ಅವಘಡ ನಡೆದಿದ್ದು, 20 ವರ್ಷದ ಪ್ರಿಯಾ ಎನ್ನುವ ಸಿಬ್ಬಂದಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾಳೆ.. ಎಲೆಕ್ಟ್ರಿಕ್ ಬೈಕ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಬೆನ್ನಲ್ಲಿಯೇ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು. ಬೈಕ್ ಹೊತ್ತಿ ಉರಿದ ಪರಿಣಾಮ ಶೋ ರೂಮ್ ಧಗಧಗನೆ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಶೋ ರೂಂ ಒಳಗೆ ಒಬ್ಬ ಯುವತಿ ಸಿಲುಕಿದ್ದು ಆಕೆಯನ್ನು ಹೊರತರುವ ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಿಲ್ಲ. ಇದರಿಂದಾಗಿ ಸ್ಥಳಕ್ಕೆ ಆಂಬ್ಯುಲೆನ್ಸ್ ಕೂಡ ಕರೆಸಿಕೊಳ್ಳಲಾಗಿತ್ತು. ಬೆಂಕಿಗಾಹುತಿಯಾದ ಯುವತಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಕಾರ್ಯಾಚರಣೆ ವೇಳೆಯಲ್ಲಿಯೇ ಸಿಬ್ಬಂದಿ ತಿಳಿಸಿದ್ದರು. 20 ವರ್ಷದ ಪ್ರಿಯಾ ಶೋ ರೂಮ್‌ನಲ್ಲಿ ಬೈಕ್ ಸೇಲ್ಸ್ ಗರ್ಲ್ ಹಾಗೂ ರಿಸಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
Bengaluru: ಪ್ರಯಾಣಿಕರ ಎದುರು ಸ್ಟಾರ್ಟ್‌ಅಪ್ ಕನಸು ಬಿಚ್ಚಿಟ್ಟ ಬೆಂಗಳೂರಿನ ಆಟೋ ಡ್ರೈವರ್!
undefined
ರಾಜಾಜಿನಗರದಲ್ಲಿರುವ ಮೈ ಇವಿ ಶೋರೂಂನಲ್ಲಿ ಪ್ರಿಯಾ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆಯ ವೇಳೆಗೆ ಅವಗಢ ಸಂಭವಿಸಿದೆ. ಎಲೆಕ್ಟ್ರಿಕ್ ಬೈಕ್ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಅಗ್ನಿ ಅವಗಢ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ರಭಸಕ್ಕೆ ಶೋ ರೂಮ್‌ನಲ್ಲಿದ್ದ ಎಲ್ಲಾ ಬೈಕ್‌ಗಳು ಭಸ್ಮವಾಗಿದೆ.
73 ಎಲೆಕ್ಟ್ರಿಕ್ ಬೈಕ್ ಗಳು ಬೆಂಕಿಗಾಹುತಿಯಾಗಿದೆ. 23 ವರ್ಷದ ಪ್ರಿಯಾ ಎಂಬಾಕೆಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಜೆ 5.30 ಕ್ಕೆ ಇವಿ ಬೈಕ್ ಶೋ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸಿಬ್ಬಂದಿಗಳೆಲ್ಲ ಹೊರ ಬಂದಿದ್ದರು. ಆದರೆ, ಪ್ರಿಯಾ ಮಾತ್ರ ಶೋ ರೂಮ್ ಒಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕದ ದಳದ ಸಿಬ್ಬಂದಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಪ್ರಿಯಾ ಸುಟ್ಟು ಕರಕಲಾಗಿದ್ದಾಳೆ.
ಪ್ರಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನು ಒಂದು ಮಗು ಒಳಗೆ ಸಿಲುಕಿದೆ ಎನ್ನುವ ಅನುಮಾನವಿದೆ. ನಿನ್ನೆಯಷ್ಟೆ ಹೊಸ ಗಾಡಿ ಸರ್ವಿಸ್‌ಗೆ ಇಟ್ಟಿದ್ದ ವ್ಯಕ್ತಿ, ಗಾಡಿ ತೆಗೆದುಕೊಂಡು ಹೋಗಲು ಶೋ ರೂಮ್ ಬಳಿ ಬಂದಿದ್ದಾರೆ. ಈ ವೇಳೆ ಶೋ ರೂಮ್ ಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಯುವತಿಯ ತಂದೆ ಕಣ್ಣೀರು: ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿ ಪ್ರಿಯಾಳ ತಂದೆ ಆರ್ಮುಗಂ ಶೋ ರೂಮ್ ಹಾಗೂ ಮಗಳಿಗೆ ಆಗಿರುವ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ನನ್ನ ಮಗಳು ಮೂರು ವರ್ಷ ದಿಂದ ಇಲ್ಲೇ ಕೆಲಸ ಮಾಡುತ್ತಿದ್ದಳು. ಏನಾಯಿತು ಅಂತ ಗೊತ್ತಿಲ್ಲ ನನ್ನ ಪ್ರೆಂಡ್ ಕಾಲ್ ಮಾಡಿ ಇಲ್ಲಿಗೆ ಬಾ ಅಂತ ಹೇಳಿದ ಅದಕ್ಕೆ ಬಂದೆ. ಏನಾಯ್ತು ಇಲ್ಲಿ ನನ್ನ ಮಗಳು ಎಲ್ಲಿದ್ದಾಳೆ ಅಂತ ಯುವತಿಯ ತಂದೆ ಆರ್ಮುಗಂ ಕಣ್ಣೀರಿಟ್ಟಿದ್ದಾರೆ.
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಗಿಂತ ಈಗ ಇವರೇ ಶ್ರೀಮಂತರು, 38,500 ಕೋಟಿ ಮೌಲ್ಯ!
: A fire broke out at an electric vehicle (EV) store on Dr. Rajkumar Road in Rajajinagar's Navrang area. Two fire engines were dispatched to the scene to extinguish the blaze. pic.twitter.com/GpmGt9e7aK
— Nithya Mandyam (@Nithya_Mandyam)