Bengaluru Rains: ಇಂದೂ ಕೂಡ ಗುಡುಗು ಸಹಿತ ಮಳೆ ಸಾಧ್ಯತೆ

Kannadaprabha News   | Asianet News
Published : Nov 25, 2021, 06:55 AM ISTUpdated : Nov 25, 2021, 07:02 AM IST
Bengaluru Rains: ಇಂದೂ ಕೂಡ ಗುಡುಗು ಸಹಿತ ಮಳೆ ಸಾಧ್ಯತೆ

ಸಾರಾಂಶ

*  ವಿರಾಮ ನೀಡಿ ಮತ್ತೆ ಮಳೆಯ ಆರ್ಭಟ *  ಹಗಲಿಡಿ ಬಿಸಿಲು ಸಂಜೆ ವೇಳೆಗೆ ಸುರಿದ ಮಳೆ *  ಬೆಂಗಳೂರಲ್ಲಿ ಮೋಡ ಮುಸುಕಿದ ವಾತಾವರಣ   

ಬೆಂಗಳೂರು(ನ.25):  ನಗರದಲ್ಲಿ ಹಗಲಿಡಿ ವಿರಾಮವಾಗಿದ್ದ ಮಳೆರಾಯ(Rain) ಸಂಜೆಯ ಹೊತ್ತು ಮತ್ತೆ ಆರ್ಭಟಿಸಿದ್ದ. ಹಗಲು ಸೂರ್ಯನ ಪ್ರಖರತೆ ಇದ್ದರೂ ಆಗಾಗ ಮೋಡಗಳ ಆರ್ಭಟವೂ ಇತ್ತು. ಸಂಜೆಯ ಹೊತ್ತು ನಗರಾದ್ಯಂತ(Bengaluru) ಹಗುರದಿಂದ ಸಾಧಾರಣ ಮಳೆಯಾಗಿದೆ.

ಬುಧವಾರ ಬೆಳಗಿನ ವಾತಾವರಣ ಕಂಡಾಗ ಮಳೆ ಇರಲಾರದು ಎಂಬ ಭಾವನೆ ಮೂಡುವಂತಿತ್ತು. ಆದರೆ ಸಂಜೆ ನಗರದಲ್ಲಿ ಮತ್ತೆ ಮಳೆ ಸುರಿಯಿತು. ಬೊಮ್ಮನಹಳ್ಳಿಯ ಗೊಟ್ಟಿಗೆರೆಯಲ್ಲಿ 1.6 ಸೆಂ.ಮೀ., ಅಂಜನಾಪುರ 1.5 ಸೆಂ.ಮೀ., ಜ್ಞಾನಭಾರತಿ ಬಿಯು ಕ್ಯಾಂಪಸ್‌, ನಾಗರಬಾವಿ ತಲಾ 1.3 ಸೆಂ.ಮೀ., ಹೆಮ್ಮಿಗೆಪುರ, ಬಾಣಸವಾಡಿ, ಹಂಪಿನಗರ ತಲಾ 1.2 ಸೆಂ.ಮೀ., ಗಾಳಿ ಆಂಜನೇಯ ಟೆಂಪಲ್‌ 1.1 ಸೆಂ.ಮೀ., ಮಳೆಯಾಗಿದೆ.

ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ 27 ಡಿಗ್ರಿ ಮತ್ತು 20.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Bengaluru International Airport) ಗರಿಷ್ಠ 26.8 ಡಿಗ್ರಿ ಮತ್ತು ಕನಿಷ್ಠ 19.9 ಡಿಗ್ರಿ ಸೆಲ್ಸಿಯಸ್‌, ಎಚ್‌.ಎ.ಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ(Temperature) ಕ್ರಮವಾಗಿ 26.8 ಡಿಗ್ರಿ ಮತ್ತು 18.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Bengaluru: ಪ್ರವಾಹ ತಡೆಯಲು 900 ಕೋಟಿ ವೆಚ್ಚದ ಹೊಸ ಪ್ಲಾನ್‌: ಸಿಎಂ ಬೊಮ್ಮಾಯಿ

ಗುರುವಾರ ನಗರದಲ್ಲಿ ಮೋಡ(Cloudy) ಮುಸುಕಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ(Department of Meteorology) ಹೇಳಿದೆ.

3 ವಾರಗಳ ಬಳಿಕ ಪ್ರಕಾಶಿಸಿದ ಸೂರ್ಯ ದೇವ

ಸುಮಾರು ಮೂರು ವಾರಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ ಸೂರ್ಯದೇವ ಇಡೀ ದಿನ ದರ್ಬಾರ್‌ ನಡೆಸಿದ. ಮುಸುಕಿದ್ದ ಮೋಡ ಸರಿದು ಮಂಗಳವಾರ ಬೆಳಗ್ಗೆಯಿಂದಲೇ ಗೋಜರಿಸಿದ ಸೂರ್ಯನ ತೇಜಸ್ಸಿಗೆ ಕಳೆದ ಕೆಲ ದಿನಗಳಿಂದ ಅಬ್ಬರಿಸಿದ್ದ ಕಾರ್ಮೋಡಗಳು ಬದಿಗೆ ಸರಿದಿದ್ದವು. ಇದರಿಂದ ಬಹಳ ದಿನಗಳ ನಂತರ ಬೆಂಗಳೂರಿಗರಿಗೆ ನೀಲಿ ಬಾನಿನ ದರ್ಶನ ಭಾಗ್ಯವಾಯಿತು.

ನಗರದ ನಾಲ್ಕೈದು ಕಡೆ ತುಂತುರು ಮಳೆ ಜಿನುಗಿದ್ದು ಬಿಟ್ಟರೆ ಉಳಿದಂತೆ ನಗರದಾದ್ಯಂತ ಶುಭ್ರ ವಾತಾವರಣ ಇತ್ತು. ಇದರಿಂದ ಕಳೆದ ಕೆಲ ದಿನಗಳಿಂದ ಭಾರಿ ಮಳೆಯ ಅಬ್ಬರಕ್ಕೆ ಸಿಲುಕಿದ್ದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Rain Compensation: 10 ಸಾವಿರ ಪರಿಹಾರ, ಸಿಎಂ ನಿಮ್ಮ ಉತ್ಸಾಹವನ್ನು ಮೆಚ್ಚಬೇಕೆಂದ ಡಿಕೆಶಿ

ಬೆಂಗಳೂರಿನ ದಕ್ಷಿಣ ಭಾಗದ ಬೊಮ್ಮನಹಳ್ಳಿ, ಆರ್‌.ಆರ್‌. ನಗರದ ಕೆಲ ಭಾಗದಲ್ಲಿ ತುಂತುರು ಮಳೆಯಾಗಿದೆ. ಆದರೆ ಒಟ್ಟಾರೆ ಬೆಂಗಳೂರಿನಲ್ಲಿ ಬೆಚ್ಚನೆ ವಾತಾವರಣವಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಉಷ್ಣತಾ ಮಾಪಕ ಕೇಂದ್ರಗಳಲ್ಲಿ ಕಳೆದ ಕೆಲ ದಿನಗಳಿಂದ 25 ಡಿಗ್ರಿ ಸೆಲ್ಸಿಯಸ್‌ನ ಸನಿಹದಲ್ಲಿದ್ದ ಗರಿಷ್ಠ ಉಷ್ಣತೆ 30 ಡಿಗ್ರಿಯ ಸನಿಹಕ್ಕೆ ಏರಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣತೆ 29.8 ಡಿಗ್ರಿ ಮತ್ತು ಕನಿಷ್ಠ ಉಷ್ಣತೆ 20.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 29.6 ಡಿಗ್ರಿ ಮತ್ತು 20.3 ಡಿಗ್ರಿ ಹಾಗೆಯೇ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಹಾಗೂ 18.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 

ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ರಾಜಕಾಲುವೆ ಅಗಲ ವಿಸ್ತರಿಸಿ, ಪುನರ್‌ ನಿರ್ಮಾಣಕ್ಕಾಗಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಬಿಬಿಎಂಪಿ ಅಧಿಕಾರಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಾಕೀತು ಮಾಡಿದ್ದು, ಈ ಯೋಜನೆಗಾಗಿ ರಾಜ್ಯ ಸರ್ಕಾರದಿಂದ(Government of Karnataka) 900 ಕೋಟಿ ಅನುದಾನ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
 

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು