ಮಳೆಹಾನಿ : ಅರ್ಹ ಫಲಾನುಭವಿಗಳ ಹೆಸರನ್ನು ಕೈ ಬಿಟ್ಟಿರುವ ಅಧಿಕಾರಿಗಳು

By Kannadaprabha News  |  First Published Oct 26, 2022, 4:56 AM IST

ಈ ಬಾರಿ ಸುರಿದ ಭಾರಿ ಮಳೆಗೆ ಹಲವಾರು ಮನೆಗಳನ್ನು ಕಳೆದುಕೊಂಡಿದ್ದು, ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಆನ್‌ಲೈನ್‌ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ, ಜಿಲ್ಲಾಧಿಕಾರಿಗಳು ಪರಿಹಾರ ನೀಡುವಂತೆ ಮನೆ ಕಳೆದುಕೊಂಡ ನಿವಾಸಿಗಳು ಮನವಿ ಮಾಡಿದ್ದಾರೆ.


 ಸರಗೂರು (ಆ.26):  ಈ ಬಾರಿ ಸುರಿದ ಭಾರಿ ಮಳೆಗೆ ಹಲವಾರು ಮನೆಗಳನ್ನು ಕಳೆದುಕೊಂಡಿದ್ದು, ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಆನ್‌ಲೈನ್‌ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ, ಜಿಲ್ಲಾಧಿಕಾರಿಗಳು ಪರಿಹಾರ ನೀಡುವಂತೆ ಮನೆ ಕಳೆದುಕೊಂಡ ನಿವಾಸಿಗಳು ಮನವಿ ಮಾಡಿದ್ದಾರೆ.

ತಾಲೂಕಿನ ಎಂ.ಸಿ. ತಳಲು ಗ್ರಾಪಂ ವ್ಯಾಪ್ತಿಯ ಜಯಲಕ್ಷ್ಮೇಪುರ, ಚನ್ನಗುಂಡಿ ಕಾಲೋನಿ, ಮೂಗುತನಮೂಲೆ, ಶಿವಪುರ ಗ್ರಾಮಗಳಲ್ಲಿ ಮಳೆಗೆ ವಾಸದ ಮನೆಗಳು ಸಂಪೂರ್ಣವಾಗಿ ಸುಮಾರು 19 ಮನೆಗಳುಗೆ (Rain)  ನೆಲೆಕ್ಕುರುಳಿವೆ.

Latest Videos

undefined

ಆದರೆ ಅಧಿಕಾರಿಗಳು (Online) ಪಟ್ಟಿಯಿಂದ ಅರ್ಹ ಪಲಾನುಭವಿಗಳನ್ನು ಕೈ ಬಿಟ್ಟಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕೆಂದು ಕೋರಿದ್ದಾರೆ.

ಮೂಗುತನಮೂಲೆ ಗ್ರಾಮದಲ್ಲಿ ಸಾಯಿರಾ ಭಾನು, ನಾಗಮಣಿ, ಪದ್ಮಾವತಿ, ಜಯಲಕ್ಷ್ಮೇ ಪುರ ಗ್ರಾಮದಲ್ಲಿ ರಾಧಿಕ ಗಣೇಶ್‌, ಚಂದ್ರಕಲಾ, ಸುಂದರಮ್ಮ, ಗೋವಿಂದರಾಜು, ರತ್ನಮ್ಮ, ನಿಂಗರಾಜು, ಸದಾಶಿವ, ಶಿವಪುರ ಗ್ರಾಮದಲ್ಲಿ ತಿಮ್ಮಮ್ಮ ನಾಗಭೋವಿ, ಪರಮೇಶ್‌, ಗೌರಮ್ಮ, ಚನ್ನಗುಂಡಿ ಕಾಲೋನಿಯಲ್ಲಿ ಮಲ್ಲೇಶ್‌, ರಾಜು, ಮಂಗಳಮ್ಮ, ಪದ್ಮ, ರಾಧಾ ಎಂಬವವರ ಮನೆಗಳು ಸಂಪೂರ್ಣ ಕುಸಿದಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಮನೆ ಕಳೆದುಕೊಂಡು ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಯ್ಕೆಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಆದರೆ, ತನಿಖಾ ತಂಡ ಪರಿಶೀಲಿಸಿ, ಅರ್ಹ ಪಲಾನುಭವಿಗಳನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದೆ. ಹೀಗಾಗಿ ಮನೆಗಳನ್ನು ಕಳೆದುಕೊಂಡ ಫಲಾನುಭವಿಗಳಿಗೆ ತುಂಬಾ ತೊಂದರೆಯಾಗಿದ್ದು, ವಾಸಿಸಲು ಯೋಗ್ಯ ಮನೆ ಇಲ್ಲದಂತಾಗಿದೆ ಎಂದು ಅವರು ದೂರಿದ್ದಾರೆ.

 28ಕ್ಕೆ ಮಣ್ಣು ಸಂಗ್ರಹ ವಾಹನಗಳಿಗೆ ಸಚಿವ ಎಸ್‌ಟಿಎಸ್‌ ಚಾಲನೆ

ಮೈಸೂರು :  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ ನಡೆಯಲಿದ್ದು ಜಿಲ್ಲೆಯಲ್ಲಿ ಈ ಸಂಬಂಧ ಅಧಿಕಾರಿಗಳು ಸಿದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ತಿಳಿಸಿದರು.

ಜಿಪಂನ ಡಿ. ದೇವರಾಜ ಅರಸು ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಪಂಗಳಿಂದ ಮಣ್ಣು ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಪ್ರತಿ ಜಿಲ್ಲೆಗಳಿಂದ ಮಣ್ಣು ಸಂಗ್ರಹ ಅಭಿಯಾನವನ್ನು ಜಿಲ್ಲೆಯಾದ್ಯಂತ ಗೌರವಪೂರ್ವಕವಾಗಿ ನಡೆಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಣ್ಣು ಸಂಗ್ರಹ ಅಭಿಯಾನವನ್ನು ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಅತ್ಯಂತ ಗೌರವ ಪೂರ್ವಕವಾಗಿ 2022ರ ಅ. 28 ರಿಂದ ನ. 7ರವರೆಗೆ ನಗರವ್ಯಾಪ್ತಿಯೂ ಸೇರಿದಂತೆ ಪ್ರತಿ ಗ್ರಾಪಂಗಳಲ್ಲಿ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಅ. 28 ರಂದು ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನ ವಾಹನಗಳಿಗೆ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಚಾಮುಂಡಿಬೆಟ್ಟದಲ್ಲಿ ಚಾಲನೆ ನೀಡುವರು.

ಮಣ್ಣು ಸಂಗ್ರಹ ಅಭಿಯಾನವನ್ನು ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಅತ್ಯಂತ ಗೌರವ ಪೂರ್ವಕವಾಗಿ ಅ. 28 ರಿಂದ ನ. 7 ರವರೆಗೆ ಪ್ರತಿ ಗ್ರಾಪಂಗಳಲ್ಲಿ ಮಣ್ಣು ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ರೂಟ್‌ ಮ್ಯಾಪ್‌ ಅನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಮಣ್ಣು ಸಂಗ್ರಹಣೆಗಾಗಿ 3 ವಾಹನಗಳು ಜಿಲ್ಲೆಗೆ ಆಗಮಿಸಿದ್ದು 28 ರಂದು ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಕುಂಭಮೇಳ ಕಳಸದೊಂದಿಗೆ ವಾಹನಗಳಿಗೆ ಚಾಲನೆ ನೀಡಲಾಗುವುದು. ನಂತರ ಈ ವಾಹನವು ಮೈಸೂರು, ಟಿ. ನರಸೀಪುರ, ನಂಜನಗೂಡು ಮಾರ್ಗದಲ್ಲಿ ಚಲಿಸಲ್ಲಿದ್ದು 2ನೇ ವಾಹನ ಹುಣಸೂರು, ಎಚ್‌.ಡಿ. ಕೋಟೆ, ಸರಗೂರು ಮಾರ್ಗದಲ್ಲಿ ಹಾಗೂ 3ನೇ ವಾಹನ ಕೆ.ಆರ್‌. ನಗರ, ಪಿರಿಯಾಪಟ್ಟಣ, ಮಾರ್ಗದಲ್ಲಿ ಮಣ್ಣು ಸಂಗ್ರಹಣೆ ಮಾಡಿಕೊಂಡು ನಂತರ ಕೊಡಗು ತಲುಪುವುದು ಎಂದು ತಿಳಿಸಿದರು.

click me!