ಬೆಂಗ್ಳೂರಿಗರಿಗೆ ಕೊಂಚ ನಿರಾಳ: ಇಂದಿನಿಂದ ಮಳೆ ಕಡಿಮೆಯಾಗುವ ಸಾಧ್ಯತೆ!

Published : Oct 24, 2024, 12:07 PM ISTUpdated : Oct 24, 2024, 12:21 PM IST
ಬೆಂಗ್ಳೂರಿಗರಿಗೆ ಕೊಂಚ ನಿರಾಳ: ಇಂದಿನಿಂದ ಮಳೆ ಕಡಿಮೆಯಾಗುವ ಸಾಧ್ಯತೆ!

ಸಾರಾಂಶ

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಅಕ್ಟೋಬರ್ 24ರಿಂದ ಅಕ್ಟೋಬರ್ 30 ರವರೆಗೆ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ.  ಬೆಂಗಳೂರಿನಲ್ಲಿ ಅಕ್ಟೋಬರ್ 24 ಹಾಗೂ ಅಕ್ಟೋಬರ್ 26ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು(ಅ.24): ಇಂದು(ಗುರುವಾರ) ಸಂಜೆಯಿಂದ ಕರ್ನಾಟದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹೌದು, ಕನ್ಯಾಕುಮಾರಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಮಳೆರಾಯ ಆರ್ಭಟಿಸಿದ್ದ. ಆದ್ರೆ, ಇಂದು ಸಂಜೆಯ ನಂತರ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.  

ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕೊಡಗು ಭಾಗದಲ್ಲಿ ಇಂದೂ ಸಹ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.  
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಅಕ್ಟೋಬರ್ 24ರಿಂದ ಅಕ್ಟೋಬರ್ 30 ರವರೆಗೆ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ.  ಬೆಂಗಳೂರಿನಲ್ಲಿ ಅಕ್ಟೋಬರ್ 24 ಹಾಗೂ ಅಕ್ಟೋಬರ್ 26ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೆಂಗಳೂರು: ಯಲಹಂಕದಲ್ಲಿ 120 ವರ್ಷದಲ್ಲೇ ಅಧಿಕ ಮಳೆ, ಡಿ.ಕೆ.ಶಿವಕುಮಾರ್

ಬಂಗಾಳ‌‌ ಉಪ ಸಾಗರದಲ್ಲಿ ಡಾನ ಚಂಡ ಮಾರುತ ಹಿನ್ನಲೆಯಲ್ಲಿ ಡಾನಾ ಸೈಕ್ಲೋನ್ ಕರ್ನಾಟಕಕ್ಕೆ ಅಷ್ಟೇನು ಎಫೆಕ್ಟ್ ಇಲ್ಲ. ಆದರೆ, ಬೀದರ್, ಕಲ್ಬುರ್ಗಿ ಭಾಗದಲ್ಲಿ ಹಗುರದಿಂದ ಕೂಡಿದ ಮಳೆಗಾಗುವ ಸಾಧ್ಯತೆ ಇದೆ. 

ಉತ್ತರ ಒರಿಸ್ಸಾ, ಪಶ್ಚಿಮ ಬಂಗಾಳ ಕರಾವಳಿ ಸಾಗರ ದ್ವೀಪ ಹಾಗೂ ಪುರಿ ಮಧ್ಯದಲ್ಲಿ ಚಂಡ ಮಾರುತ ಹಾದು ಹೋಗಲಿದೆ. ಅಕ್ಟೋಬರ್ 24ರ ಮಧ್ಯಾರಾತ್ರಿ ಅಥ್ವಾ 25 ರ ಬೆಳಗ್ಗಿನ ಜಾವ ಹಾದು ಹೋಗಲಿದೆ. ಗಾಳಿಯ ವೇಗ ಕಿಲೋಮೀಟರ್ ಗೆ ಸುಮಾರು 100ರಿಂದ 110 ಕಿಲೋಮೀಟರ್ ಇರುವ ಸಾಧ್ಯತೆ ಇರಲಿದೆ. ಓರಿಸ್ಸಾ, ಪಶ್ಚಮ ಬಂಗಾಳ, ಹಾಗೂ ಪುರಿ ಭಾಗದಲ್ಲಿ ಹೆಚ್ಚಿನ ಎಫೆಕ್ಟ್ ಇರಲಿದೆ. ಚಂಡ ಮಾರುತದಿಂದ ಈ ಭಾಗದಲ್ಲಿ ತೀವ್ರ ಹಾನಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?