ನಿಮ್ಮ ಬೋರ್‌ನಲ್ಲಿ ನೀರುಕ್ಕಲು ಹೀಗೆ ಮಾಡಿ

By Kannadaprabha NewsFirst Published Sep 18, 2019, 9:35 AM IST
Highlights

ನಿಮ್ಮ ಬಾವಿ ಹಾಗೂ ಬೋರ್‌ವೆಲ್ ಗಳಲ್ಲಿ ಹೆಚ್ಚಿನ ನೀರು ಉಕ್ಕಬೇಕೇಂದರೆ  ಈ ರೀತಿಯಾದ ಕ್ರಮ ಅಳವಡಿಸಿಕೊಳ್ಳಬೇಕು. 

ಮಂಡ್ಯ [ಸೆ.18]:  ಅಂತರ್ಜಲ ಮಟ್ಟತೀವ್ರವಾಗಿ ಕುಸಿದಿರುವ ತಾಲೂಕುಗಳಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟಹೆಚ್ಳಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮಂಗಳವಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್‌ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟಕುಸಿದಿರುವ ಕಡೆ ಕೊಳವೆ ಬಾವಿಗಳ ಸುತ್ತ ಅಂತರ್ಜಲ ಜಲ ಮರು ಪೂರಣ ಯೋಜನೆಯ ಕ್ರಮಗಳನ್ನು ಅಳವಡಿಸಿಕೊಂಡು ಅಂರ್ತಜಲ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ವಾಡಿಕೆ ಮಳೆ ಏಪ್ರಿಲ್ ನಿಂದ ಸೆ.15 ರ ವರೆಗೆ ಶೇಕಡ 9 ರಷ್ಟು ಮಳೆ ಹೆಚ್ಚಾಗಿ ಬಂದಿದೆ. ಬೆಳೆವಾರು ಹಾಗೂ ಬಿತ್ತನೆಯ ಪ್ರಗತಿ ಸಾಧಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು. ಜಿಲ್ಲೆಯ ಇಲಾಖೆಗಳಲ್ಲಿನ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಗಳಲ್ಲಿ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗವಾಗುವಂತೆ ಅಗತ್ಯ ಕ್ರಮವಹಿಸುವ ಜೊತೆಗೆ ಫಲಾನುಭವಿಗಳ ಆಯ್ಕೆ ಮಾಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

click me!