ಉಡುಪಿ, ಕಾರ್ಕಳದಲ್ಲಿ ಮಳೆ ಹಿಮ್ಮುಖ

By Kannadaprabha NewsFirst Published Aug 27, 2019, 11:57 AM IST
Highlights

ರಾಜ್ಯಾದ್ಯಂತ ಹಲವೆಡೆ ಪ್ರವಾಹಕ್ಕೆ ಕಾರಣವಾಗಿದ್ದ ಮಳೆ ಇಳಿಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಸಾಕಷ್ಟು ನಷ್ಟವನ್ನು ತಂದಿಟ್ಟಿದ್ದ ಮಳೆ ಇದೀಗ ಕಡಿಮೆಯಾಗುತ್ತಿದೆ. ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಮಳೆ ತೀರಾ ಕಡಿಮೆಯಾಗಿದ್ದು, ಸೋಮವಾರ ಒಳ್ಳೆಯ ಬಿಸಿಲಿನ ವಾತಾವರಣವಿತ್ತು.

ಉಡುಪಿ(ಆ.27): ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಮಳೆ ಹಿಮ್ಮುಖವಾಗಿದ್ದು, ಸೋಮವಾರ ಒಳ್ಳೆಯ ಬಿಸಿಲಿನ ವಾತಾವರಣವಿತ್ತು. ಭಾನುವಾರ ರಾತ್ರಿ ಕುಂದಾಪುರದಲ್ಲಿ ಅಸ್ಪಸ್ವಲ್ಪ ಮಳೆಯಾಗಿತ್ತು.

ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಮಳೆ ತೀರಾ ಕಡಿಮೆಯಾಗಿತ್ತು. ಸೋಮವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ವಾಡಿಕೆಯ 25.70 ಮಿ.ಮೀ.ಗಿಂತಲೂ ಕಡಿಮೆ ಸರಾಸರಿ 19.90 ಮಿ.ಮೀ. ಮಾತ್ರ ಮಳೆಯಾಗಿತ್ತು.

ಉಡುಪಿ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಡುಪಿ ತಾಲೂಕಿನಲ್ಲಿ 22.40 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 39.00 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 19.90 ಮಿ.ಮೀ. ಮಳೆಯಾಗಿದೆ. ರಾಜ್ಯದ ಹಲವೆಡೆ ಪ್ರವಾಹಕ್ಕೆ ಕಾರಣವಾದ ಮಳೆ ಇಳಿಮುಖವಾಗಿದ್ದು, ಜನ ನಿರಾಳರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಸಾಕಷ್ಟು ನಷ್ಟ ತಂದಿಟ್ಟ ಮಳೆ ಈಗ ಇಳಿಕೆಯಾಗಿದೆ.

click me!