ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‌ಐ ಸಸ್ಪೆಂಡ್

Published : Jun 20, 2021, 07:39 PM ISTUpdated : Jun 20, 2021, 08:01 PM IST
ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‌ಐ ಸಸ್ಪೆಂಡ್

ಸಾರಾಂಶ

* ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‌ಐ ಸಸ್ಪೆಂಡ್ * ರಾಯಚೂರು ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ಖಾನ್ ಅಮಾನತು * ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಆದೇಶ  * ಪಿಎಸ್‌ಐ ದರ್ಪದ ಸುದ್ದಿ ಪ್ರಸಾರ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು, (ಜೂನ್.20): ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು ಪಿಎಸ್‌ಐ ಅಜಂ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಇಂದು (ಭಾನುವಾರ) ಹೊರಡಿಸಿದ್ದಾರೆ. 

ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ PSI ಅಜಂ

ರಾಯಚೂರಿನ ಚಂದ್ರಮೌಳೇಶ್ವರ ವೃತ್ತದ ಬಳಿ ಭಾನುವಾರ ಏಕಾಏಕಿ ಬಂದು ಬೀದಿಯಲ್ಲಿ ಮಾರುತ್ತಿದ್ದ ತರಕಾರಿ, ಸೊಪ್ಪು ಕಾಲಿನಿಂದ ಒದ್ದು ದರ್ಪ ಮೆರೆದಿದ್ದರು.ದರ್ಪ ತೋರಿದ ಪಿಎಸ್‌ಐ ಅಜಂ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದವು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್ಗೆ ನಿಮ್ಮ ಏಷ್ಯಾನೆಟ್ ಸುವರ್ಣನ್ಯೂಸ್ ಕೂಡ ವರದಿ ಪ್ರಸಾರ ಮಾಡಿತ್ತು. ಅವರನ್ನ ಫೋನ್ ಕಾಲ್ ತಗೊಂಡು ಇದರ ಬಗ್ಗೆ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಲಾಗದೇ ಇಲ್ಲದ ಸಬೂಬು ಹೇಳಿ ಪೋನ್ ಕಟ್ ಮಾಡಿದ್ದರು.

"

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!