ರಾಯಚೂರು: ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ನಡೆದ ಬರ ಅಧ್ಯಯನ! ಪರಿಶೀಲನೆಗೆ ರೈತರ ಆಕ್ಷೇಪ

Published : Oct 05, 2026, 07:12 AM IST
Raichur

ಸಾರಾಂಶ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಕೇಂದ್ರ ಅಧಿಕಾರಿಗಳ ತಂಡವು ತಡವಾಗಿ ಆಗಮಿಸಿ ಕತ್ತಲಲ್ಲಿ ಬರ ಸಮೀಕ್ಷೆ ನಡೆಸಿದೆ. ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕೇವಲ ರಸ್ತೆ ಬದಿಯ ಬೆಳೆ ಪರಿಶೀಲಿಸಿದ್ದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಬೆಳೆನಾಶವಾದ ಜಮೀನುಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ.

ರಾಯಚೂರು: ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ.ಮಾನಸಿಂಗ್ ನೇತೃತ್ವದ ಅಧಿಕಾರಿಗಳ ತಂಡ ಭಾನುವಾರ ರಾಯಚೂರು ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಿತು. ಮಸ್ಕಿ ತಾಲೂಕಿನ ಅಮೀನಗಡ ಗ್ರಾಮಕ್ಕೆ ಆಗಮಿಸಿದ ತಂಡ, ಕತ್ತಲಲ್ಲಿ ಬರ ಪರಿಶೀಲನೆ ನಡೆಸಿದ್ದು, ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜೆ 4.50ಕ್ಕೆ ಭೇಟಿಯ ಸಮಯ ನಿಗದಿಯಾಗಿದ್ದು, ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಕೇಂದ್ರ ತಂಡದ ಆಗಮನಕ್ಕೆ ಕಾಯುತ್ತಿದ್ದರು. ಆದರೆ, ಒಂದೂವರೆ ತಾಸು ತಡವಾಗಿ, ಸಂಜೆ 6.30ರ ವೇಳೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳು ತೊಗರಿ ಬೆಳೆ ಪರಿಶೀಲಿಸಿ, ರೈತರೊಂದಿಗೆ ಮಾಹಿತಿ ಪಡೆದರು.

ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಬರ ಪರಿಶೀಲನೆ

ಈ ವೇಳೆ ಕತ್ತಲಾಗಿದ್ದರಿಂದ ರಸ್ತೆ ಬದಿಯ ಜಮೀನುಗಳಲ್ಲಿ, ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಬರ ಪರಿಶೀಲನೆ ನಡೆಸಿದರು. ಇದಕ್ಕೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿ, ಕೇವಲ ರಸ್ತೆ ಬದಿಯ ಹೊಲಗಳಲ್ಲಿ ಬೆಳೆ ಪರಿಶೀಲನೆಗೆ ಸೀಮಿತಗೊಳಿಸದೆ, ಸಂಪೂರ್ಣ ಬೆಳೆನಾಶವಾದ ಜಮೀನುಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಬರ ಪರಿಹಾರಕ್ಕೆ ₹5 ಸಾವಿರ ಕೋಟಿ ವಿಶೇಷ ಅನುದಾನ ಕೊಡಿ: ಉಗ್ರಪ್ಪ

ತಲೆದೋರಿದ ತೀವ್ರ ಬರ ಪರಿಸ್ಥಿತಿ ಎದುರಿಸಲು ಕರ್ನಾಟಕಕ್ಕೆ ಕನಿಷ್ಠ ₹5 ಸಾವಿರ ಕೋಟಿಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಡಗೆ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಭಾನುವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ 2009ರಲ್ಲಿ ಅತಿವೃಷ್ಟಿ, ಪ್ರವಾಹ ಎದುರಾದಾಗ ಆಗಿನ ಪ್ರಧಾನಿ ವೈಮಾನಿಕ ಸಮೀಕ್ಷೆ ನಡೆಸಿ, ಸ್ಥಳದಲ್ಲೇ ಕೇಂದ್ರದಿಂದ 1500 ಕೋಟಿ ರು.ಗಳ ವಿಶೇಷ ಅನುದಾನ ನೀಡಿದ್ದರು ಎಂದರು.

PREV
Read more Articles on
click me!

Recommended Stories

ಮಧುರಖಂಡಿ-ಯಲ್ಲಟ್ಟಿ ರೈತರ ಮೊಗದಲ್ಲಿ ಮಂದಹಾಸ, ನೆಮ್ಮದಿ ತಂದ ಜಲವಿಸ್ಮಯ; ಭರ್ತಿಯಾದ ಕೆರೆ
Bengaluru ಕೋಟಿ ಕೋಟಿ ಅನುದಾನವಿದ್ದರೂ ಮೈಸೂರು ರಸ್ತೆಯ ಈ ಸೇತುವೆಗೇಕೆ ಕಠೋರ ಶಾಪ?