ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ರಚನೆಗೊಂಡರೂ ರಾಯಚೂರು ಜಿಲ್ಲೆಗೆ ಮಾತ್ರ ಮಲತಾಯಿ ಧೋರಣೆ ತಪ್ಪುತ್ತಿಲ್ಲ.ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಹುಬ್ಬಳ್ಳಿ-ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದರು ಇದೀಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರಂಭದಲ್ಲಿಯೇ ಕಲಬುರಗಿಗೆ ಏಮ್ಸ್ ಪಡೆಯುವ ಹುನ್ನಾರಕ್ಕೆ ಮುಂದಾಗಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಸಿಡಿದಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಜೂ.8) : ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ರಚನೆಗೊಂಡರೂ ರಾಯಚೂರು ಜಿಲ್ಲೆಗೆ ಮಾತ್ರ ಮಲತಾಯಿ ಧೋರಣೆ ತಪ್ಪುತ್ತಿಲ್ಲ.ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಹುಬ್ಬಳ್ಳಿ-ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದರು ಇದೀಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರಂಭದಲ್ಲಿಯೇ ಕಲಬುರಗಿಗೆ ಏಮ್ಸ್ ಪಡೆಯುವ ಹುನ್ನಾರಕ್ಕೆ ಮುಂದಾಗಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಸಿಡಿದಿದೆ.
undefined
ಹೊಸ ಸರ್ಕಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಚಿವರಾದ ನಂತರ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಗೆ ಆಗಮಿಸಿ ಹಲವು ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡಿದ್ದು, ಈ ವೇಳೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸುವುದಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿಕೆ ನೀಡಿರುವುದಕ್ಕೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ
ಏಮ್ಸ್ಗಾಗಿ ಐತಿಹಾಸಿಕ ಹೋರಾಟ:
ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಳೆದ 2022 ಮೇ 12ರಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಾಯಚೂರು ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನಿರಂತರ ಹೋರಾಟವನ್ನು ಆರಂಭಿಸಿದ್ದು, ಇಂದಿಗೆ ಹೋರಾಟವು 391 ದಿನ ಪೂರೈಸಿದೆ. ಒಂದು ವರ್ಷಕ್ಕು ಹೆಚ್ಚು ದಿನಗಳ ಕಾಲ ನಡೆಯುತ್ತಿರುವ ಹೋರಾಟವು ತೀವ್ರ ಸ್ವರೂಪ ಪಡೆಯುತ್ತಲೇ ಬಂದಿದೆ. ಉದ್ದೇಶ ಒಂದೇಯಾದರೂ ಅನೇಕ ಆಯಾಮಗಳಿಂದ ಸರ್ಕಾರಗಳ ಮೇಲೆ ಒತ್ತಡ ಹೇರಲು ಹೋರಾಟಗಾರರು ಇನ್ನಿಲ್ಲದ ಪ್ರಯಾಸಪಡುತ್ತಲೇ ಬರುತ್ತಿದೆ. ಹಲವಾರು ಪ್ರತಿಭಟನಾ ಮೆರವಣಿಗೆ, ಜನಪ್ರತಿನಿಧೀಗಳ ಭಾವಚಿತ್ರ ದಹಿಸಿ ಆಕ್ರೋಶ, ಪತ್ರ ಚಳವಳಿ, ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಪತ್ರ ಹಾಗೂ ಸರದಿ ಉಪವಾಸ ಸತ್ಯಾಗ್ರಹದಂತಹ ಕಾರ್ಯಕ್ರಮ ಇದರ ಜೊತೆಗೆ ಮುಖ್ಯಮಂತ್ರಿ, ಸಚಿವರು, ರಾಹುಲ್ ಗಾಂಧಿ ಹೀಗೆ ಜಿಲ್ಲೆಗೆ ಬಂದ ರಾಜಕೀಯ ಧುರೀಣರನ್ನು ಸೆಳೆಯುವ ನಿಟ್ಟಿನಲ್ಲಿ ಹೋರಾಟಗಾರರು ನಿರಂತರ ಪ್ರಯತ್ನದಲ್ಲಿದ್ದರು. ಅರಕೇರಾದಲ್ಲಿ ಕಂದಾಯ ಸಚಿವ ಆರ್.ಅಶೊಕ ವಾಸ್ತವ್ಯ ಹೂಡಿದಾಗಲೂ ಇಲ್ಲಿಂದ ಪಾದಯಾತ್ರೆ ನಡೆಸಿ ಒತ್ತಾಯ ಮಾಡಲಾಯಿತು. ಗಣ್ಯರಿಗೆ ಕಪ್ಪು ಪಟ್ಟಿಗಳ ಪ್ರದರ್ಶನ ಮಾಡಲಾಗಿತ್ತು. ಇತ್ತೀಚೆಗೆ ಅಕಾಲಿಕವಾಗಿ ಸುರಿದ ಭಾರಿ ಮಳೆ ಗಾಳಿಗೆ ಹೋರಾಟದ ಪೆಂಡಾಲ್ ನೆಲಕ್ಕುರುಳಿದರು ಸಹ ಎದೆಗುಂದದೆ ಐತಿಹಾಸಿಕ ಹೋರಾಟವನ್ನು ನಡೆಸಲಾಗುತ್ತಿದೆ.
ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ:
ಇತ್ತೀಚೆಗೆ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿತ್ತು. ಇದೀಗ ಅದೇ ಕೈ ಪಕ್ಷದ ಸಚಿವರು ಕಲಬುರಗಿಗೆ ಏಮ್ಸ್ ತರುವ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಹೋರಾಟ ನಡೆಯುತ್ತಿರುವುದರ ಬಗ್ಗೆ ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್‌ನ ಭರವಸೆ ಕೊಟ್ಟಿರುವುದು ಗಮನಕ್ಕಿದ್ದರು ಸಹ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಕಲಬುರಗಿಗೆ ಏಮ್ಸ್ ತೆಗೆದುಕೊಂಡು ಹೋಗುವ ಪ್ರಾಸ್ತಾಪವನ್ನು ಮಂಡಿಸಿರುವುದು ರಾಯಚೂರಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Karnataka Budget 2023: ರಾಯಚೂರಿಗೆ ಜಿಲ್ಲೆಗೆ ಕಹಿಯಾದ ಕೊನೆ ಬಜೆಟ್
ಕಾಂಗ್ರೆಸ್ ಪಕ್ಷವೇ ತಮ್ಮ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದನ್ನು ಗಮನಿಸದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿರುವುದು ಬೇಜವಬ್ದಾರಿ ತನ್ಕಕೆ ಸಾಕ್ಷಿಯಾಗಿದೆ. ರಾಯಚೂರಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
-ಡಾ.ಬಸವರಾಜ ಕಳಸ, ಪ್ರಧಾನ ಸಂಚಾಲಕ, ಏಮ್ಸ್ ಹೋರಾಟ ಸಮಿತಿ