ಸಹ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಮುಖ್ಯಶಿಕ್ಷಕ ಮೆಹಬೂಬ್ ಅಲಿಗೆ ಧರ್ಮದೇಟು ಕೊಟ್ಟ ಸ್ಥಳೀಯರು.
ರಾಯಚೂರು (ಆ.13): ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಸಹ ಶಿಕ್ಷಕಿಗೆ ಮುಖ್ಯ ಶಿಕ್ಷಕನೇ ಅಶ್ಲೀಲವಾಗಿ ಮೆಸೇಜ್ ಮಾಡಿದ ಪ್ರಕರಣ ನಡೆದಿದೆ. ಈ ವಿಚಾರವನ್ನು ಸಹ ಶಿಕ್ಷಕಿ ಸ್ಥಳೀಯರ ಮುಂದೆ ಹೇಳಿಕೊಂಡಿದ್ದು, ಸ್ಥಳೀಯರು ಸೇರಿ ಮುಖ್ಯ ಶಿಕ್ಷಕನಿಗೆ ಧರ್ಮದೇಟು ಕೊಟ್ಟಿದ್ದಾರೆ. ಈ ವೇಳೆ ಜನರಿಂದ ಏಟು ತಿನ್ನಲಾಗದೇ ಸಹ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಈ ಘಟನೆ ರಾಯಚೂರು ಹೊರವಲಯದ ಆದರ್ಶ ಸ್ಕೂಲ್ ನಲ್ಲಿ ನಡೆದಿದೆ. ಇಬ್ಬರೂ ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರು. ಈಕೆ ಸಹ ಶಿಕ್ಷಕಿಯಾಗಿದ್ದರೆ, ಆತ ಮುಖ್ಯ ಶಿಕ್ಷಕನಾಗಿದ್ದಾನೆ. ಶಾಲೆಯ ಕೆಲಸದ ವಿಚಾರಕ್ಕೆ ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದಾರೆ. ಕೆಲಸದ ವಿಚಾರಕ್ಕೆ ಆಗಿಂದಾಗ್ಗೆ ಸಂದೇಶ ಕಳಿಸುತ್ತಿದ್ದ ಮುಖ್ಯ ಶಿಕ್ಷಕ ದಿನ ಕಳೆದಂತೆ ಗುಡ್ ಮಾರ್ನಿಂಗ್, ಗುಡ್ ನೈಟ್, ಊಟ, ತಿಂಡಿ ಸೇರಿ ಕುಶಲೋಪರಿ ಬಗ್ಗೆ ವಿಚಾರಿಸದ್ದಾನೆ. ಶಾಲೆಯ ಮುಖ್ಯ ಶಿಕ್ಷಕರು ಕೇರ್ ಮಾಡುವುದರಿಂದ ಸಂತಸಗೊಂಡ ಸಹ ಶಿಕ್ಷಕಿ ಕೂಡ ಅವರ ಸಾಮಾನ್ಯ ಮೆಸೇಜ್‌ಗಳಿಗೆ ರಿಪ್ಲೈ ಮಾಡಿದ್ದಾರೆ.
ಇದನ್ನು ಬಂಡವಾಳ ಮಾಡಿಕೊಂಡ ಹೆಡ್ ಮಾಸ್ಟರ್ ಪುನಃ ಸಹ ಶಿಕ್ಷಕಿಗೆ ಇರಿಸು ಮುರಿಸು ಆಗುವಂತಹ ಸಂದೇಶಗಳನ್ನು ಕಳಿಸಿದ್ದಾನೆ. ಆಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಈತ ಮಾತ್ರ ತನ್ನ ಕುಚೇಷ್ಟೆಯನ್ನು ಮುಂದುವರೆಸಿದ್ದಾನೆ. ಸಹ ಶಿಕ್ಷಕಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಲು ಮುಂದಾಗಿದ್ದಾನೆ. ದಿನ ಬೆಳಗಾದರೆ ಒಂದೇ ಶಾಲೆಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗಬೇಕಾದ ಜಾಗದಲ್ಲಿ ಮುಖ್ಯ ಶಿಕ್ಷಕ ಅಶ್ಲೀಲ ಮೆಸೇಜ್ ಕಳಿಸಿದ್ದರಿಂದ ಕೋಪಗೊಂಡು ಅವರಿಗೆ ಇಂಥ ಸಂದೇಶ ಕಳಿಸಬೇಡಿ ಎಂದು ವಾರ್ನಿಂಗ್ ಮಾಡಿದ್ದಾಳೆ.
ಇಷ್ಟಕ್ಕೂ ತನ್ನ ಕುಚೇಷ್ಟೆ ನಿಲ್ಲಿಸದ ಮುಖ್ಯ ಶಿಕ್ಷಕ ಪುನಃ ಸಹ ಶಿಕ್ಷಕಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಿದ್ದಾನೆ. ಆಗ ಮನನೊಂದ ಸಹ ಶಿಕ್ಷಕಿ ಸ್ಥಳೀಯರಿಗೆ ವಿಷಯ ತಿಳಿಸಿ ನೋವು ತೋಡಿಕೊಂಡಿದ್ದಾರೆ. ಆಗ ಶಾಲೆಗೆ ಬಂದ ಸ್ಥಳೀಯರು ಸಹ ಶಿಕ್ಷಕಿಗೆ ಕಳಿಸಿದ್ದ ಅಶ್ಲೀಲ ಮೆಸೇಜ್‌ಗಳನ್ನು ತೋರಿಸಿ ಧರ್ಮದೇಟು ಕೊಟ್ಟಿದ್ದಾರೆ. ಆತನ ಅಂಗಿ ಹರಿದು ಹೋಗುವಂತೆ ಹಲ್ಲೆ ಮಾಡಿ, ಸಹ ಶಿಕ್ಷಕಿಗೆ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ. ಆಗ ಮುಖ್ಯ ಶಿಕ್ಷಕನೇ ಸಹ ಶಿಕ್ಷಕಿ ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾನೆ.
ವಕ್ಫ್ ಕಾನೂನಿನಲ್ಲಿ ಭೂ ಕಬಳಿಕೆಗೆ ಅವಕಾಶ ಕೊಟ್ಟಿತ್ತಾ ಕಾಂಗ್ರೆಸ್? ವಕ್ಫ್ ಕಾನೂನು 1995 ಹೇಳೋದೇನು?
ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ಅಶ್ಲೀಲ ಸಂದೇಶ ಕಳಿಸಿದವರು. ಶಾಲೆಯ ಸಹ ಶಿಕ್ಷಕಿಗೆ ಸಂದೇಶ ಕಳಿಸಿದ್ದಕ್ಕೆ, ಶಿಕ್ಷಕಿಯ ಸಂಬಂಧಿಕರು ಮತ್ತು ಸ್ಥಳೀಯರು ಸೇರಿ ಥಳಿಸಿದ್ದಾರೆ. ನಂತರ ಸಹ ಶಿಕ್ಷಕಿ ಕಾಲಿಗೆ ಬಿದ್ದು ತಪ್ಪೊಪಿಕೊಂಡ ಹೆಡ್ ಮಾಸ್ಟರ್, ತಮ್ಮ ತಪ್ಪ್ನು ಒಪ್ಪಿಕೊಂಡು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ.