ಟಿಬಿ ಡ್ಯಾಂ ಗೇಟ್ ಮುರಿದಿರುವುದು ರಾಜ್ಯ ಸರ್ಕಾರಕ್ಕೆ ಅಪಶಕುನ: ಕಾರಜೋಳ

By Kannadaprabha NewsFirst Published Aug 13, 2024, 12:59 PM IST
Highlights

ರಾಜ್ಯದಲ್ಲಿ ಕಳೆದ ಒಂದೂಕಾಲು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಸರಿಯಾಗಿ ಮಾಡುತ್ತಿಲ್ಲ ಎಂಬುದಕ್ಕೆ ಡ್ಯಾಂ ಗೇಟ್ ಮುರಿದಿರೋದೇ ಸಾಕ್ಷಿ ಎಂದರು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೂರ್ಣಾವಧಿ ನೀರಾವರಿ ಸಚಿವರನ್ನು ನೇಮಕ ಮಾಡಬೇಕಿತ್ತು. ಈಗಿ ರುವವರು ಅರೆಕಾಲಿಕ ನೀರಾವರಿ ಸಚಿವರು ಎಂದು ವ್ಯಂಗ್ಯವಾಡಿದ ಬಿಜೆಪಿ ಸಂಸದ ಗೋವಿಂದ ಕಾರಜೋಳ 

ತುಮಕೂರು(ಆ.13): ತುಂಗಭದ್ರಾ ಜಲಾಶಯದ ಗೇಟ್ ಮುರಿದಿರುವುದು ರಾಜ್ಯ ಸರ್ಕಾರಕ್ಕೊಂದು ಅಪಶಕುನದ ಮುನ್ಸೂಚನೆ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದರು. 

ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಳೆದ ಒಂದೂಕಾಲು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಸರಿಯಾಗಿ ಮಾಡುತ್ತಿಲ್ಲ ಎಂಬುದಕ್ಕೆ ಡ್ಯಾಂ ಗೇಟ್ ಮುರಿದಿರೋದೇ ಸಾಕ್ಷಿ ಎಂದರು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೂರ್ಣಾವಧಿ ನೀರಾವರಿ ಸಚಿವರನ್ನು ನೇಮಕ ಮಾಡಬೇಕಿತ್ತು. ಈಗಿ ರುವವರು ಅರೆಕಾಲಿಕ ನೀರಾವರಿ ಸಚಿವರು ಎಂದು ವ್ಯಂಗ್ಯವಾಡಿದರು. 

Latest Videos

ಒಳಮೀಸಲಾತಿಯನ್ನ ಜಾರಿಗೊಳಿಸದಿದ್ದರೆ ಕಾವೇರಿಯಿಂದ-ಭೀಮಾ ನದಿಯವರೆಗೆ ಜನಾಂದೋಲನ‌: ಸಂಸದ ಕಾರಜೋಳ

ಅವರು ಆಡಳಿತಕ್ಕಿಂತ ಹೆಚ್ಚು ರಾಜಕಾರಣಕ್ಕೆ ಒತ್ತು ಕೊಡುವಂತಹ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ. ಈಗಲಾದರೂ ಸಿಎಂ ಎಚ್ಚೆತ್ತುಕೊಂಡು ನೀರಾವರಿ ಇಲಾಖೆಗೆ ಪೂರ್ಣಾವಧಿ ಮಂತ್ರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.

click me!