ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ

Published : Dec 01, 2019, 02:39 PM IST
ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ

ಸಾರಾಂಶ

ಕೆ.ಆರ್.ಪೇಟೆಯಲ್ಲಿ ಸ್ಟಾರ್ ಕ್ಯಾಂಪೇನ್ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ ನಡೆಸಿದ್ದು, ರಾಗಿಣಿ ನಿನ್ನೆಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ.  

ಮಂಡ್ಯ(ಡಿ.01): ಕೆ.ಆರ್.ಪೇಟೆಯಲ್ಲಿ ಸ್ಟಾರ್ ಕ್ಯಾಂಪೇನ್ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ ನಡೆಸಿದ್ದು, ರಾಗಿಣಿ ನಿನ್ನೆಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಇಂದು ಕಿಕ್ಕೇರಿ ಹೋಬಳಿಯ ಹಲವು ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದು, ಈ ಸಂದರ್ಭ ಮಾತನಾಡಿದ್ದಾರೆ. ನಿನ್ನೆ ಇವತ್ತು ಸಾಕಷ್ಟು ಹಳ್ಳಿಗಳಲ್ಲಿ ಪ್ರಚಾರ ಮಾಡ್ತಿದ್ದೇವೆ. ಜನರೊಂದಿಗೆ ಬೆರೆಯಲು ಈ ಪ್ರಚಾರ ಕಾರಣವಾಗ್ತಿದೆ. ಹೋದಲೆಲ್ಲಾ ನಮಗೆ ಪ್ರೀತಿಯ ಸ್ವಾಗತ ಸಿಗ್ತಿದೆ, ಅದ್ರಿಂದ ನಮಗೆ ಖುಷಿಯಾಗುತ್ತೆ ಎಂದು ಹೇಳಿದ್ದಾರೆ.

ಮಂಡ್ಯ: ಜೆಡಿಎಸ್‌, ಬಿಜೆಪಿ ಕಾರ‍್ಯಕರ್ತರ ಹೊಡೆದಾಟ

ಮಂಡ್ಯದ ಜನರು ಪ್ರೀತಿ ತೋರುತ್ತಿದ್ದಾರೆ. ನಾರಾಯಣಗೌಡರು ಕ್ಷೇತ್ರದಲ್ಲಿ ಎಷ್ಟೊಂದು ಅಭಿವೃದ್ಧಿ ಮಾಡಿದ್ದಾರೆ. ಈಗ ಗೆದ್ದರೆ ಮತ್ತಷ್ಟು ಅಭಿವೃದ್ಧಿ ಮಾಡಲಿದ್ದಾರೆ. ಕೆ. ಆರ್. ಪೇಟೆಯಲ್ಲಿ ಬಿಜೆಪಿ ಪರ ವಾತಾವರಣವಿದೆ. ತುಂಬಾ ವರ್ಷಗಳ ನಂತರ ಒಳ್ಳೆ ಸರಕಾರ ಬಂದಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಡಿಸೆಂಬರ್ 5ರವರೆಗೆ ಮಾತ್ರ ಬಿಜೆಪಿ ಸರ್ಕಾರ : BK ಹರಿಪ್ರಸಾದ್

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!