ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕ್ರಮಕ್ಕೆ ಪ್ರಧಾನಿ ಮೋದಿಗೆ ದೂರು

Kannadaprabha News   | Asianet News
Published : Sep 06, 2020, 12:17 PM IST
ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕ್ರಮಕ್ಕೆ ಪ್ರಧಾನಿ ಮೋದಿಗೆ ದೂರು

ಸಾರಾಂಶ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೊಲೆ ಬೆದರಿಕೆ| ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ ರಾಘವ ಅಣ್ಣಿಗೇರಿ| ಯತ್ನಾಳ್‌ ಮಾತನಾಡಿದರೆ ಮನೆ ಹೊಕ್ಕು ಕಡಿಯುವುದಾಗಿ ಯುವಕನೊಬ್ಬ ಕೊಲೆ ಬೆದರಿಕೆ ಒಡ್ಡಿದ ವಿಡಿಯೋ ವೈರಲ್‌ ಆಗಿತ್ತು|  

ವಿಜಯಪುರ(ಸೆ.06):  ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಯುವಕನೊಬ್ಬ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. 

ಅಂಬೇಡ್ಕರ್‌ ಹಾಗೂ ಅಂಬೇಡ್ಕರವರ ಕಾನೂನುಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿದರೆ ಮನೆ ಹೊಕ್ಕು ಕಡಿಯುವುದಾಗಿ ಯುವಕನೊಬ್ಬ ಕೊಲೆ ಬೆದರಿಕೆ ಒಡ್ಡಿದ ವಿಡಿಯೋ ವೈರಲ್‌ ಆಗಿತ್ತು.

'ಪೊಲೀಸ್ ಠಾಣೆಯಲ್ಲೇ ಶಾಸಕ ಯತ್ನಾಳ್‌ಗೆ ಕೊಲೆ ಬೆದರಿಕೆ'

ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತರಾಗಿ ತಪ್ಪಿತಸ್ಥನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಣ್ಣಿಗೇರಿ ಮನವಿ ಮಾಡಿದ್ದಾರೆ.

PREV
click me!

Recommended Stories

'ಬೆಂಗಳೂರು ಬಿಡ್ತಿರೋದು ಬೆಸ್ಟ್‌ ನಿರ್ಧಾರ..' ಹೈದ್ರಾಬಾದ್‌ ಯುವತಿಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಸಿಡಿದೆದ್ದ ಕನ್ನಡಿಗರು
ತಾಯಿಯ ಆರೈಕೆಗಾಗಿ ರೇ*ಸ್ಟ್‌ ಪೊಲೀಸ್‌ ಶಿಕ್ಷೆ ಕಡಿತ