'ಬಿಜೆಪಿ ಸರ್ಕಾರ ದೇಶವನ್ನೇ ಕೊಳ್ಳೆ ಹೊಡೆಯುತ್ತಿದೆ'

Kannadaprabha News   | Asianet News
Published : Mar 13, 2021, 09:41 AM IST
'ಬಿಜೆಪಿ ಸರ್ಕಾರ ದೇಶವನ್ನೇ ಕೊಳ್ಳೆ ಹೊಡೆಯುತ್ತಿದೆ'

ಸಾರಾಂಶ

ಸೇವಾದಳ ಕಾಂಗ್ರೆಸ್‌ ಭದ್ರ ಬುನಾದಿಯಾಗಿದೆ|ನಮ್ಮ ನಾಯಕರುಗಳಲ್ಲಿ ವೈಮನಸ್ಸಿಲ್ಲ, ಭಿನ್ನಾಭಿಪ್ರಾಯಗಳಿವೆ| ಇದನ್ನು ಬಿಟ್ಟು ಪ್ರಮುಖರು ಒಮ್ಮತದಿಂದ ಹೋರಾಡಬೇಕಾಗಿದೆ| ಮುಂದಿನ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ: ಆರ್‌.ಎಚ್‌. ನಾಯ್ಕ| 

ಸಿದ್ದಾಪುರ(ಮಾ.13): ದೇಶ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದ ವೋಟು ಕೊಟ್ಟವರು ತಿರುಗಿಬಿದ್ದಿದ್ದಾರೆ. ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸೇವಾದಳದ ಜಿಲ್ಲಾಧ್ಯಕ್ಷ ಆರ್‌.ಎಚ್‌. ನಾಯ್ಕ ಹೇಳಿದ್ದಾರೆ. 

ಅವರು ತಾಲೂಕು ಸೇವಾದಳದ ಸಿದ್ದಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಗಾಂಧೀಜಿ ಅವರಿಗೆ ಅಧಿಕಾರ ಪತ್ರ ಹಸ್ತಾಂತರಿಸಿ ಮಾತನಾಡಿದರು. ಸೇವಾದಳ ಕಾಂಗ್ರೆಸ್‌ ಭದ್ರ ಬುನಾದಿಯಾಗಿದೆ. ನಮ್ಮ ನಾಯಕರುಗಳಲ್ಲಿ ವೈಮನಸ್ಸಿಲ್ಲ, ಭಿನ್ನಾಭಿಪ್ರಾಯಗಳಿವೆ. ಇದನ್ನು ಬಿಟ್ಟು ಪ್ರಮುಖರು ಒಮ್ಮತದಿಂದ ಹೋರಾಡಬೇಕಾಗಿದೆ. ಜಾತಿಭೇದವಿಲ್ಲದೆ ಪಕ್ಷ ಸಿದ್ಧಾಂತದಲ್ಲಿ ನಂಬಿಕೆ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಸೇವಾದಳ, ಎನ್‌ಸಿಯು, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಇಂಟೆಕ್‌ ಘಟಕಗಳಿಂದ ಭದ್ರಬುನಾದಿ ಇದೆ. ಮುಂದಿನ ದಿನದಲ್ಲಿ ಪಕ್ಷ ಬಲಪಡಿಸಲು ಸೇವಾದಳವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದರು.

ಹೆಣ್ಣಾ​ನೆಯ ಸಾಮೀ​ಪ್ಯಕ್ಕಾಗಿ ಹಾತೊರೆಯುತ್ತಿರುವ ಮದ​ವೇ​ರಿದ ಗಜ​ಗ​ಳು..!

ತಾಲೂಕು ಬ್ಲಾಕ್‌ ಕಮಿಟಿ ಅಧ್ಯಕ್ಷ ವಸಂತ ನಾಯ್ಕ ಮನಮನೆ, ಮಾಜಿ ಅಧ್ಯಕ್ಷ ಹನುಮಂತ ನಾಯ್ಕ ಹೊಸೂರ, ತಾಲೂಕು ಸೇವಾದಳದ ನೂತನ ಅಧ್ಯಕ್ಷ ಗಾಂಧೀಜಿ, ಜಿಲ್ಲಾ ಪಂಚಾಯತ್‌ ಸದಸ್ಯೆ ಸುಮಂಗಲ ವಸಂತ ನಾಯ್ಕ, ತಾಲೂಕು ಪಂಚಾಯತ್‌ ಸದಸ್ಯ ನಾಸಿರ ಖಾನ್‌, ಇಂಟೆಕ್‌ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಮಹಾತ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

PREV
click me!

Recommended Stories

ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್‌ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ
ಮಂಡ್ಯದಲ್ಲಿ ಅರೈ ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ಕೇಂದ್ರ ಸಚಿವ ಹೆಚ್‌ಡಿಕೆ ಪತ್ರ