ಪುತ್ತೂರಿನಲ್ಲಿ ಎಂಜಿನಿಯರಿಂಗ್‌ ಪದವೀಧರನ ಕೃಷಿ ಸಾಧನೆ

By Kannadaprabha News  |  First Published Oct 18, 2021, 3:58 PM IST
  • ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿಯ ಹುಡಿ ಬಳಸಿ ಉತ್ತಮ ಇಳುವರಿ
  •  ಪುತ್ತೂರು ತಾಲೂಕಿನ ಎಂಜಿನಿಯರ್‌ ಪದವೀಧರ ಯುವ ಕೃಷಿಕರೊಬ್ಬರ ಸಾಧನೆ

ವರದಿ :  ಸಂಶುದ್ದೀನ್‌ ಸಂಪ್ಯ

 ಪುತ್ತೂರು (ಅ.18):  ರಾಸಾಯನಿಕ ಗೊಬ್ಬರಕ್ಕೆ (Fertiliser) ಪರ್ಯಾಯವಾಗಿ ಸೆಗಣಿಯ ಹುಡಿ (Cow Dung) ಬಳಸಿ ಉತ್ತಮ ಇಳುವರಿ ಪಡೆಯುವ ಮೂಲಕ ಪುತ್ತೂರು (Puttur) ತಾಲೂಕಿನ ಎಂಜಿನಿಯರ್‌ ಪದವೀಧರ (Engineering Graduate) ಯುವ ಕೃಷಿಕರೊಬ್ಬರು ಪ್ರಯೋಗ ನಡೆಸಿದ್ದು, ಇದರಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಚಿಂತನೆ ಮತ್ತು ಪರಿಶ್ರಮದ ಮೂಲಕ ಸಂಪೂರ್ಣ ಸಾವಯವ ಕೃಷಿ (Organic farming) ಪದ್ಧತಿಯನ್ನು ಬಯಸುವವರಿಗೆ ಈ ಯುವಕ ಮಾದರಿಯಾಗಿದ್ದಾರೆ.

Tap to resize

Latest Videos

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಹಿಂದಾರ್‌ ಎಂಬಲ್ಲಿನ ನಿವಾಸಿ ಜಯಗುರು ಆಚಾರ್‌ (Jayaguru Achar) ಸೆಗಣಿ ಗೊಬ್ಬರ ತಯಾರಿಕೆಯ ಹೊಸ ಆವಿಷ್ಕಾರದ ಜನಕ. ಎಂಜಿನಿಯರ್‌ ಪದವೀಧರರಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ (Private compeny ಉದ್ಯೋಗದಲ್ಲಿದ್ದರು. ಕೃಷಿ ಕ್ಷೇತ್ರದ ಒಲವಿನ ಹಿನ್ನಲೆಯಲ್ಲಿ 2019ರಲ್ಲಿ ತನ್ನ ಉದ್ಯೋಗವನ್ನು ತ್ಯಜಿಸಿ ಊರಿನಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಅವರು ತನ್ನ ಮನೆಯಲ್ಲಿ 130ಕ್ಕೂ ಅಧಿಕ ದನಗಳನ್ನು ಸಾಕುತ್ತಿದ್ದಾರೆ. ದಿನಕ್ಕೆ 750 ಲೀಟರ್‌ ಹಾಲು (Milk) ಡೈರಿಗೆ ಮಾರಾಟ ಮಾಡುತ್ತಿದ್ದಾರೆ.

ಸೆಗಣಿ ಗೊಬ್ಬರದ (compost) ಹೊಸ ಆವಿಷ್ಕಾರ ಮಾಡುವ ಮೂಲಕ ಜಯಗುರು ಆಚಾರ್‌ ಕೃಷಿಕರಿಗೆ ಸಾವಯವ (Organic ) ಗೊಬ್ಬರದ ಹೊಸ ರೂಪಾಂತರದ ಪರಿಚಯ ನೀಡಿದ್ದಾರೆ. ಈ ಗೊಬ್ಬರ ಭೂಮಿಯಲ್ಲಿ ಫಲವತ್ತತೆಯನ್ನು ಬೆಳೆಸುವುದರ ಜೊತೆಗೆ ಅಧಿಕ ಇಳುವರಿ ನೀಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸಿಗಡಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ ಸೈ ಎನಿಸಿಕೊಂಡ ಎಂಜಿನಿಯರ್‌

ಕೃಷಿ ತೋಟಗಳಲ್ಲಿ ರಾಸಾಯನಿಕ  ಗೊಬ್ಬರದ ಬಳಕೆ ಆರಂಭವಾದಾಗಿನಿಂದ ಭೂಮಿಯ ಫಲವತ್ತತೆ ನಾಶವಾಗ ತೊಡಗಿತು. ಈಗ ಮತ್ತೆ ಸಗಣಿ ಬಳಸುವ ಮೂಲಕ ಸಾವಯವ ಕೃಷಿಯ ಮಹತ್ವವನ್ನು ಮುನ್ನೆಲೆಗೆ ತರಬೇಕು ಎನ್ನುವುದು ಜಯಗುರು ಅವರ ಮುಖ್ಯ ಉದ್ದೇಶವಾಗಿದೆ.

ಸಗಣಿ ಹುಡಿ ಗೊಬ್ಬರ ತಯಾರಿ: ತನ್ನ ದನಗಳ (cow) ಹಟ್ಟಿಯಲ್ಲಿ ಸಿಗುವ ಸೆಗಣಿ ಸಂಗ್ರಹಿಸಿ ಅದನ್ನು ತೊಟ್ಟಿಗೆ ಹಾಕಿ ಬಳಿಕ ಪಂಪ್‌ (Pump) ಬಳಸಿ ಸಗಣಿಯಿಂದ ನೀರಿನ ಅಂಶವನ್ನು ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಲಾಗುತ್ತದೆ. ಈ ಯಂತ್ರದ ಸಹಾಯದಿಂದ ಸೆಗಣಿಯಲ್ಲಿನ ನೀರಿನ ಅಂಶ ಬೇರ್ಪಟ್ಟು ಒಂದು ಕಡೆ ಸಗಣಿಯ ಹುಡಿ ತಯಾರಾದರೆ, ಇನ್ನೊಂದು ಕಡೆ ಸಗಣಿಯ ನೀರಿನ ಅಂಶ ಪ್ರತ್ಯೇಕ ಟ್ಯಾಂಕಲ್ಲಿ (Tank) ಶೇಖರಣೆಗೊಳ್ಳುತ್ತದೆ. ಹೀಗೆ ಬೇರ್ಪಡಿಸಿದ ಈ ಹುಡಿ ಸೆಗಣಿಯೇ ಸೆಗಣಿ ಗೊಬ್ಬರವಾಗಿದೆ. ಈ ಗೊಬ್ಬರವನ್ನು ತಮ್ಮ ತೋಟಕ್ಕೆ ಬೇಕಾದಷ್ಟುಬಳಸಿ ಉಳಿದ ಹುಡಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ. ಸೆಗಣಿ ಗೊಬ್ಬರದ ತಲಾ 40 ಕೆ.ಜಿ.ಯ ಪ್ಯಾಕೆಟ್‌ಗಳನ್ನು ಮಾಡಲಾಗುತ್ತಿದ್ದು, ತಿಂಗಳಿಗೆ ಸುಮಾರು 750-1000 ಪ್ಯಾಕೆಟ್‌ ಮಾರಾಟವಾಗುತ್ತಿದೆ.

ರಸ​ಗೊ​ಬ್ಬ​ರ​ಗ​ಳಿಗೆ ಕೇಂದ್ರದ 28,655 ಕೋಟಿ ರೂ. ಸಬ್ಸಿ​ಡಿ!

ಇದರೊಂದಿಗೆ ಬೇರ್ಪಡಿಕೆ ಸಂದರ್ಭದಲ್ಲಿ ಸಿಗುವ ಸೆಗಣಿ ನೀರು ಜೊತೆಗೆ ಗೋಮೂತ್ರ, ದನಗಳನ್ನು ತೊಳೆದ ನೀರನ್ನು ಸೇರಿಸಿಕೊಂಡು ಸ್ಲರಿ ತಯಾರಿಸಲಾಗುತ್ತಿದೆ. ಟ್ಯಾಂಕ್‌ ಮೂಲಕ ಈ ಸ್ಲರಿಯನ್ನು ತಮ್ಮ ತೋಟ ಮತ್ತು ತರಕಾರಿ ಇನ್ನಿತರ ಕೃಷಿಗೆ ಬಳಕೆ ಮಾಡುತ್ತಾರೆ. ಅಲ್ಲದೆ 25 ಕಿ.ಮೀ. ಸುತ್ತಲಿನ ತೋಟಗಳಿಗೆ ಟ್ಯಾಂಕರ್‌ ಮೂಲಕ ಪೂರೈಕೆ ಮಾಡುತ್ತಿದ್ದಾರೆ.

ಸಗಣಿ ಹುಡಿಯಂತೆ ಸ್ಲರಿಗೂ ಬಹಳ ಬೇಡಿಕೆ ಇದೆ. ಸಗಣಿ ಗೊಬ್ಬರ ಬಳಸಲು ಆರಂಭಿಸಿದ ಬಳಿಕ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕುತ್ತಿಲ್ಲ. ಇದರಿಂದ ಅಡಿಕೆ ಕೊಳೆರೋಗವೂ ಇಳಿಮುಖಗೊಂಡಿದೆ ಎನ್ನುವ ಜಯಗುರು ಆಚಾರ್‌ ತನ್ನ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕು ಎಂಬ ಕನಸಿನಲ್ಲಿ ಸಾವಯವ ಪ್ರಯೋಗಕ್ಕೆ ಮುಂದಾದವರು ಇದೀಗ ಸೆಗಣಿ ಹುಡಿ ಗೊಬ್ಬರ, ಸ್ಲರಿ ತಯಾರಿಸಿ ತಮಗೂ ಬಳಸಿಕೊಂಡು ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದಕ್ಕೆ ದ್ರವರೂಪಿ ಗೊಬ್ಬರ ತಯಾರಿಸುವ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಗೋ ಆಧಾರಿತ ಕ್ಕೃಷಿ ಕ್ರಾಂತಿಗೆ ಮುಂದಡಿ ಇಟ್ಟಿದ್ದು, ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದಾರೆ.

ಸಗಣಿ ಹುಡಿ ಗೊಬ್ಬರ ಮಾಡುವುದರಿಂದ ಸಾಗಣಿಕೆಗೂ ಸುಲಭವಾಗುತ್ತದೆ. ವಾಸನೆ ಇರುವುದಿಲ್ಲ. ತೋಟಕ್ಕೆ ಸುಲಭವಾಗಿ ಬಳಸಬಹುದು. ಜೊತೆಗೆ ಗೋನಂದಾಜಲವನ್ನೂ ಕೂಡಾ ಬಳಸುತ್ತಿದ್ದು, ಇವೆಲ್ಲರ ಬಳಕೆಯಿಂದ ತೋಟದಲ್ಲಿ ಇಳುವರಿ ಹೆಚ್ಚಳಗೊಂಡಿದೆ. ಭೂಮಿಯ ಫಲವತ್ತತೆ ಅಧಿಕವಾಗಿದೆ. ಮುಂದಕ್ಕೆ ಇದೇ ಪ್ರಯೋಗಗಳನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸುವ ಉದ್ದೇಶವಿದೆ.

-ಜಯಗುರು ಆಚಾರ್‌, ಯುವ ಕೃಷಿಕ, ಹಿಂದಾರ್‌.

click me!