ಗದಗ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿ ಹೆಸರು

Kannadaprabha News   | Asianet News
Published : Nov 25, 2020, 07:55 AM IST
ಗದಗ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿ ಹೆಸರು

ಸಾರಾಂಶ

 ಗದಗ ಪಟ್ಟಣದ  ಬಸ್‌ ನಿಲ್ದಾಣಕ್ಕೆ ಪಂ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಲು ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ   ಸವದಿ ತಿಳಿಸಿದ್ದಾರೆ. 

ಬೆಂಗಳೂರು (ನ.25):  ಗದಗ ಪಟ್ಟಣದ ನವೀಕೃತ ಬಸ್‌ ನಿಲ್ದಾಣಕ್ಕೆ ಪಂ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಲು ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದ್ದಾರೆ. 

‘ಬಸ್‌ ನಿಲ್ದಾಣಕ್ಕೆ ಪಂಡಿತ್‌ ಪುಟ್ಟರಾಜ ಗವಾಯಿ ಅವರಂತಹ ಮಹಾತ್ಮರ ಹೆಸರಿಡಲು ನನಗೆ ಅವಕಾಶ ಸಿಕ್ಕಿರುವುದು ಸುಯೋಗ ಮತು ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. 

ಎಲೆಕ್ಟ್ರಿಕ್‌ ವಾಹನಗಳ ಹೆಚ್ಚು ಬಳಸಿ: ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ...

ಈ ಮೂಲಕ ಎಲ್ಲರಿಗೂ ದೊಡ್ಡ ಆದರ್ಶ ಹಾಗೂ ದಾರಿದೀಪವಾಗಿರುವ ಗವಾಯಿಗಳಿಗೆ ನಮ್ಮೆಲ್ಲರ ಭಕ್ತಿ ಹಾಗೂ ಗೌರವ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ಇತ್ತೀಚೆಗಷ್ಟೆ ಇಡಲಾಗಿತ್ತು. ಇದೀಗ ಗದಗ ಬಸ್ ನಿಲ್ದಾಣಕ್ಕೆ ಗವಾಯಿ ಹೆಸರಿಡಲಾಗುತ್ತಿದೆ. 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ