ಒಂದು ಕಾಲದಲ್ಲಿ ಕಿಂಗ್‌ ಮೇಕರ್‌ ಆಗಿದ್ದ ಪುಟ್ಟಣ್ಣ ಕಣಗಾಲ್‌

By Kannadaprabha News  |  First Published Dec 2, 2022, 5:15 AM IST

ಕಿಂಗ್‌ ಮೇಕರ್‌ ಆದ ಪುಟ್ಟನ ಕಣಗಾಲ್‌ ಅವರನ್ನ ಮರೆತಿದ್ದಾರೆ. ಕೇವಲ ಮೈಕ್‌ನಲ್ಲಿ ಪುಟ್ಟಣ್ಣ ಬೆಳೆಸಿದರು ಎನ್ನುತ್ತಾರೆ. ಆದರೆ ಅವರ ಹೆಸರನ್ನು ಉಳಿಸಿ ಬೆಳಸಿ ಯುವ ನಿರ್ದೇಶಕರಿಗೆ ಮಾದರಿಯನ್ನಾಗಿಸಲು ಎಲ್ಲೂ ಮುಂದಾಗದಿರುವುದು ಬೇಸರದ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ತಿಳಿಸಿದರು.


  ಮೈಸೂರು (ಡಿ. 02): ಕಿಂಗ್‌ ಮೇಕರ್‌ ಆದ ಪುಟ್ಟನ ಕಣಗಾಲ್‌ ಅವರನ್ನ ಮರೆತಿದ್ದಾರೆ. ಕೇವಲ ಮೈಕ್‌ನಲ್ಲಿ ಪುಟ್ಟಣ್ಣ ಬೆಳೆಸಿದರು ಎನ್ನುತ್ತಾರೆ. ಆದರೆ ಅವರ ಹೆಸರನ್ನು ಉಳಿಸಿ ಬೆಳಸಿ ಯುವ ನಿರ್ದೇಶಕರಿಗೆ ಮಾದರಿಯನ್ನಾಗಿಸಲು ಎಲ್ಲೂ ಮುಂದಾಗದಿರುವುದು ಬೇಸರದ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ತಿಳಿಸಿದರು.

ಕೆಎಂಪಿಕೆ (KMPk)  ಚಾರಿಟಬಲ್‌ ಟ್ರಸ್ಟ್‌ ಹಾಗೂ ಅಭಿಮಾನಿ ಬಳಗವು ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಯರ ರಾಮಚಂದ್ರ ರಾವ್‌ ಉದ್ಯಾನವನದಲ್ಲಿ ಗುರುವಾರ ಆಯೋಜಿಸಿದ್ದ ಎಸ್‌.ಆರ್‌. ಪುಟ್ಟಣ್ಣ ಕಣಗಾಲ್‌ ಅವರ 89ನೇ ಜನ್ಮದಿನೋತ್ಸವದ ಅಂಗವಾಗಿ ಚಿತ್ರ ಬ್ರಹ್ಮನ ನೆನಪು ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

Latest Videos

undefined

ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನ (Movies)  ನೋಡುತ್ತಿದ್ದ ಪ್ರೇಕ್ಷಕರನ್ನ ಸಾಮಾಜಿಕಗಳ ಬಳಿ ಸಾಲುಗಟ್ಟಿಟಿಕೆಟ್‌ ಪಡೆಯಲು ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್‌. ಇಡೀ ದೇಶವೇ ಚಪ್ಪಾಳೆ ಹೊಡೆಯುವ ಹಾಗೇ ಮಾಡಿ ಅತ್ಯುತ್ತಮ ಚಿತ್ರ ನಿರ್ದೇಶಕರಾಗಿ ಬೆಳೆದು ನಿಂತರು. ಕಣಗಾಲ್‌ ಪ್ರಭಾಕರ್‌ ಶಾಸ್ತಿ್ರ ಮತ್ತು ಪುಟ್ಟಣ್ಣ ಕಣಗಾಲ್‌ ಎಂದರೆ ಡಾ. ರಾಜಕುಮಾರ್‌ ಅವರಿಗೆ ಎಲ್ಲಿಲ್ಲದ ಪ್ರೀತಿ. ಗುರುಗಳ ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು, ಪುಟ್ಟಣ್ಣನವರ ಗರಡಿಯಲ್ಲಿ ಬೆಳೆದ ಅನೇಕರು ಕಿಂಗ್‌ ಆಗಿ ಚಿತ್ರರಂಗದಲ್ಲಿ ಮುನ್ನಡೆದರು ಎಂದು ಅವರು ಹೇಳಿದರು.

ಸಮಾಜ ಸೇವಕ ಕೆ. ರಘುರಾಮ್‌ ಮಾತನಾಡಿ, ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್‌ ಅವರ ಪಾತ್ರ ಪ್ರಮುಖವಾದದ್ದು. ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದರು. ಅವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬ ಪ್ರಧಾನವಾಗಿದ್ದವು ಎಂದು ಸ್ಮರಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಮಾತನಾಡಿ, ನಾಯಕರ ಕಾಲ್‌ಶೀಟ್‌ ಮತ್ತು ಬ್ಯಾನರ್‌ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ, ನಿರ್ಮಾಣ ಕಾಣುತ್ತಿದ್ದ ಸಂಧರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆಯೇ ಅವಲಂಬಿತವಾಗಿ ಚಿತ್ರಗಳು ಶತದಿನಗಳ ಪ್ರದರ್ಶನ ಕಾಣುತ್ತಿತ್ತು ಎಂದರೆ ಪುಟ್ಟಣ್ಣ ಕಣಗಾಲ್‌ ಅವರ ವಿಶೇಷತೆ ಎಂದು ಹೇಳಿದರು.

ನಗರ ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್‌, ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮಾ ನಂದೀಶ್‌, ಕಾಂಗ್ರೆಸ್‌ ಮುಖಂಡ ಎನ್‌.ಎಂ. ನವೀನ್‌ಕುಮಾರ್‌, ಕೆ.ಆರ್‌. ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌, ಮುಖಂಡರಾದ ವಿನಯ್‌ ಕಣಗಾಲ್‌, ಅಜಯ್‌ ಶಾಸ್ತಿ್ರ, ಮಿರ್ಲೆ ಪನೀಶ್‌, ಎಸ್‌.ಎನ್‌. ರಾಜೇಶ್‌, ರಾಕೇಶ್‌, ಯೋಗೇಶ್‌, ಸುಚೇಂದ್ರ, ಅಪೂರ್ವ ಸುರೇಶ್‌ ಇದ್ದರು.

ಭಾರತದ ಚಿತ್ರರಂಗದ ದೊಡ್ಡಣ್ಣ

ಮೈಸೂರು

ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಕಂಡ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ ಅವರದು ಹೆಸರಷ್ಟೇ ಪುಟ್ಟಣ್ಣನಾದರೂ ಬಣ್ಣದ ಲೋಕದ ದೈತ್ಯ ಪ್ರತಿಭೆಯಾಗಿದ್ದ ಅವರು ಬೆಳ್ಳಿ ತೆರೆಯ ದೊಡ್ಡಣ್ಣ ಎಂದು ಸಾಹಿತಿ ಬನ್ನೂರು ಕೆ. ರಾಜು ಬಣ್ಣಿಸಿದರು.

ನಗರದ ಪಡುವಾರಹಳ್ಳಿ ಸ್ನೇಹ ಬಳಗದಿಂದ ಅಭಿಮಾನ ಪೂರ್ವಕವಾಗಿ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಏರ್ಪಡಿಸಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್‌.ಆರ್‌. ಪುಟ್ಟಣ್ಣ ಕಣಗಾಲರ ಜನ್ಮದಿನೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಪುಟ್ಟಣ್ಣ ಅವರು ಖ್ಯಾತ ಚತ್ರೋದ್ಯಮಿ ಬಿ.ಆರ್‌. ಪಂತುಲು ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಪಳಗಿ ‘ಬೆಳ್ಳಿಮೋಡ’ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ತಮ್ಮ ಚಿತ್ರ ಪಯಣ ಆರಂಭಿಸಿ ‘ಮಸಣದ ಹೂ’ ಚಿತ್ರದ ತನಕ ಅಮೂಲ್ಯವಾದ 24 ಕನ್ನಡ ಚಿತ್ರಗಳನ್ನು ಹಾಗೂ ತಮಿಳಿನಲ್ಲಿ ಮೂರು, ತೆಲುಗಿನಲ್ಲಿ ಮೂರು, ಮಲಯಾಳಂನಲ್ಲಿ ಆರು, ಹಿಂದಿಯಲ್ಲಿ ಒಂದು ಸೇರಿದಂತೆ ಇತರೆ ಭಾಷೆಗಳಲ್ಲಿ 13 ಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತ ಬಹುಭಾಷಾ ಚಿತ್ರ ನಿರ್ದೇಶಕರೆಂದು ದೇಶದ ಗಮನ ಸೆಳೆದಿರುವುದಾಗಿ ಅವರು ಹೇಳಿದರು.

ಕನಸಿನಲ್ಲೂ ನನಗೆ ಕ್ಯಾಮರಾನೇ ಕಾಣುತ್ತದೆ ಎನ್ನುತ್ತಿದ್ದ ಪುಟ್ಟಣ್ಣ ಸಿನಿಮಾ ಬದುಕಿನಲ್ಲಿ ಅಷ್ಟೊಂದು ಮಗ್ನರಾಗಿದ್ದವರು. ಒಂದು ರೀತಿ ಸಿನಿಮಾದಲ್ಲಿ ಅವರದ್ದು ಧ್ಯಾನಸ್ಥ ಮನಸ್ಸು. ಅದೇ ಅವರ ತಪಸ್ಸು. ಇಂಥ ಚಿತ್ರ ತಪಸ್ವಿಯಿಂದ ಬೆಳ್ಳಿತೆರೆಯಲ್ಲಿ ಮೂಡಿಬಂದ ಪ್ರತಿಯೊಂದು ಚಿತ್ರಗಳೂ ಕನ್ನಡ ಚಿತ್ರ ಚರಿತ್ರೆಯಲ್ಲಿ ಸುವರ್ಣ ಪುಟಗಳಲ್ಲಿ ದಾಖಲಾಗಿರುವ ವಂಥ ಅಮೂಲ್ಯ ರತ್ನಗಳು ಎಂದು ಅವರು ಅಭಿಪ್ರಾಯಪಟ್ಟರು.

ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕ ಪಡುವಾರಹಳ್ಳಿ ಎಂ. ರಾಮಕೃಷ್ಣ ಮಾತನಾಡಿ, ಪಡುವಾರಹಳ್ಳಿ ಪಾಂಡವರು ಎಂಬ ಚಲನಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಮ್ಮ ಪಡುವಾರಹಳ್ಳಿಯನ್ನು ಸಿನಿಮಾ ಲೋಕದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಸ್ಥಾಯಿಗೊಳಿಸಿದ ಕೀರ್ತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಿ. ರೇವಣ್ಣ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್‌. ಕೃಷ್ಣಕುಮಾರ್‌, ಬಿ. ಕುಮಾರ್‌, ಕೇಬಲ್‌ ಕಿಟ್ಟಿ, ವಿಜಿಲಿ®್ಸ… ಸಮಿತಿ ಸದಸ್ಯ ಎಂ. ಶಿವಪ್ರಕಾಶ್‌, ರಾ. ಸಿದ್ಧರಾಮು, ಸುರೇಂದ್ರ ಕುಮಾರ್‌, ಸಿ. ಸಂತೋಷ್‌, ಈ. ಬಸವರಾಜು ಇದ್ದರು.

click me!