ಸೇನೆಯ ಫೈಟರ್ ಜೆಟ್‌ಗೆ ಕೊಡಗಿನ 'ಪುಣ್ಯ' ಪೈಲಟ್..!

By Kannadaprabha News  |  First Published Jul 1, 2020, 1:28 PM IST

ಕೊಡಗು ಮೂಲದ ಯುವತಿ ಪುಣ್ಯ ನಂಜಪ್ಪ ಅವರು ಈಗ ಭಾರತೀಯ ಸೇನೆಯ ಫೈಟರ್‌ ಜೆಟ್‌ನ ಪೈಲಟ್‌ ಆಗಿ ನೇಮಕವಾಗಿದ್ದಾರೆ. ವಾಯುಸೇನೆಯಲ್ಲಿ ತರಬೇತಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಣ್ಯ ಈಗ ವಾಯುಸೇನೆಯ ಪೈಲಟ್‌ ಆಗಿ ಆಯ್ಕೆಯಾಗುವ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಬಾಲ್ಯದ ಕನಸನ್ನು ಸಾಕಾರ ಗೊಳಿಸಿದ್ದಾರೆ.


ಮಡಿಕೇರಿ(ಜು.01): ಕೊಡಗು ಮೂಲದ ಯುವತಿ ಪುಣ್ಯ ನಂಜಪ್ಪ ಅವರು ಈಗ ಭಾರತೀಯ ಸೇನೆಯ ಫೈಟರ್‌ ಜೆಟ್‌ನ ಪೈಲಟ್‌ ಆಗಿ ನೇಮಕವಾಗಿದ್ದಾರೆ. ವಾಯುಸೇನೆಯಲ್ಲಿ ತರಬೇತಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಣ್ಯ ಈಗ ವಾಯುಸೇನೆಯ ಪೈಲಟ್‌ ಆಗಿ ಆಯ್ಕೆಯಾಗುವ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಬಾಲ್ಯದ ಕನಸನ್ನು ಸಾಕಾರ ಗೊಳಿಸಿದ್ದಾರೆ.

ಕೊಡಗಿನ ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಮೂಲದ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧ ನಂಜಪ್ಪ ದಂಪತಿ ಪುತ್ರಿ ಪುಣ್ಯ ನಂಜಪ್ಪ, ಹುಟ್ಟಿಬೆಳೆದದ್ದು ಮೈಸೂರಿನಲ್ಲಿ. ತಾಯಿ ಅನುರಾಧ ವಿಜಯನಗರದಲ್ಲಿರುವ ಸೆಂಟ್‌ ಜೋಸೆಫ್‌ ಸೆಂಟ್ರಲ್‌ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ತಂದೆ ದಿವಂಗತ ನಂಜಪ್ಪ ಅವರು ಮೈಸೂ​ರಿನ ಪ್ರಭಾ ಚಿತ್ರಮಂದಿರದ ಮ್ಯಾನೇಜರ್‌ ಆಗಿದ್ದರು.

Tap to resize

Latest Videos

ಶುಕ್ರವಾರ ಸಂಜೆ 6ರ ನಂತರ ಸಾರ್ವಜನಿಕ ಸಂಚಾರವಿಲ್ಲ: ಸಚಿವ ಸೋಮಶೇಖರ್

ಮೈಸೂರು ವಿಜಯನಗರದ ಸೆಂಟ್‌ ಜೋಸೆಫ್‌ ಸೆಂಟ್ರಲ್‌ ಸ್ಕೂಲ್‌ನಲ್ಲಿ ಹೈಸ್ಕೂ​ಲ್‌ವರೆಗೆ ವಿದ್ಯಾಭ್ಯಾಸ ಮಾಡಿರುವ ಪುಣ್ಯ ನಂಜಪ್ಪ, ಸರಸ್ವತಿ ಪುರಂನ ವಿಜಯ ವಿಠಲ ಶಾಲೆಯಲ್ಲಿ ಪಿಯುಸಿ, ಎನ್‌ಐಇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಪದವಿ ಮುಗಿಯುತ್ತಿದ್ದಂತೆ 2018ರಲ್ಲಿ ನಡೆದ ಭಾರತೀಯ ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದರು. ಫ್ಲೈಯಿಂಗ್‌ ಬ್ರಾಂಚ್‌, ಗ್ರೌಂಡ್‌ ಡ್ಯೂಟಿ ಟೆಕ್ನಿಕಲ್‌, ನಾನ್‌ ಟೆಕ್ನಿಕಲ್‌, ಲಾಜಿಸ್ಟಿಕ್ಸ್‌, ಅಕೌಂಟ್ಸ್‌, ಎಜುಕೇಷನ್‌…, ಮಿಟಿಯೋರಾಲಜಿ ವಿಭಾಗಗಳ ಒಟ್ಟು 114 ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪುಣ್ಯ ನಂಜಪ್ಪ ಫ್ಲೈಯಿಂಗ್‌ ಬ್ರಾಂಚ್‌ಗೆ ಆಯ್ಕೆಯಾಗಿ ಕೆಲಸ ಮಾಡಿದ್ದರು.

click me!