ರನ್ನ ಕಾರ್ಖಾನೆ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ಗ್ಯಾರಂಟಿ: ಸಚಿವ ಆರ್.ಬಿ.ತಿಮ್ಮಾಪುರ

Published : Nov 15, 2023, 11:09 AM IST
ರನ್ನ ಕಾರ್ಖಾನೆ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ಗ್ಯಾರಂಟಿ: ಸಚಿವ ಆರ್.ಬಿ.ತಿಮ್ಮಾಪುರ

ಸಾರಾಂಶ

ರನ್ನ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳುವ ಮೂಲಕ ಮಾಜಿ ಸಚಿವ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದರು. 

ಬಾಗಲಕೋಟೆ (ನ.15): ರನ್ನ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳುವ ಮೂಲಕ ಮಾಜಿ ಸಚಿವ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ತಿಮ್ಮಾಪೂರ, ಮಾಜಿ ಸಚಿವ ಕಾರಜೋಳರ ಅವಧಿಯಲ್ಲಿ ಕಾರ್ಖಾನೆಯಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟರು. ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಲ್ಲಿವರೆಗೂ ಆಗಿರುವ ವಿಷಯಗಳ ಕುರಿತು ಚರ್ಚಿಸಿ ಸಮಗ್ರ ತನಿಖೆ ನಡೆಸಲು ನಾನು ಮತ್ತು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಮಾಜಿ ಸಚಿವ ಕಾರಜೋಳ ಅವರು ಕಾರ್ಖಾನೆ ವಿಷಯದಲ್ಲಿ ಜನರ ದಿಕ್ಕುತಪ್ಪಿಸುವ ಕೆಲಸ ನಡೆಸಿದ್ದಾರೆ. ಅವರ ಹಾಗೂ ಅವರ ಬೆಂಬಲಿಗರ ಆಡಳಿತ ಅವಧಿ ಯಲಿಯೇ ಕಾರ್ಖಾನೆ ದಿವಾಳಿ ಅಂಚಿಗೆ ತಲುಪಿ ಸ್ಥಗಿತಗೊಂಡಿದೆ. ಹಿರಿಯ ರಾಜಕಾರಣಿಯಾಗಿದ್ದ ಮಾಜಿ ಸಂಸದ ದಿವಂಗತ ಎಸ್.ಟಿ.ಪಾಟೀಲರ ಶ್ರಮದಿಂದ ಕಾರ್ಖಾನೆ ಆರಂಭಗೊಂಡಿದೆ. ಪಾಟೀಲ ಕಾರ್ಯಕ್ಕೆ ತಾವು ಕೂಡಾ ಸಾಥ್ ನೀಡಿದ್ದನ್ನು ಸ್ಮರಿಸಿದ ತಿಮ್ಮಾಪೂರ, ಮಾಜಿ ಸಚಿವ ಕಾರಜೋಳ ಸುಳ್ಳುಗಾರ, ನಾಟಕ ಮಾಡುವವ ಎಂದು ಜರಿದರು. ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ರಾಮಣ್ಣ ತಳೇವಾಡ ಅಧ್ಯಕ್ಷರಾಗಿದ್ದ ವೇಳೆ ಕಾರ್ಖಾನೆಯು ನಷ್ಟ ಅನುಭವಿಸಿದೆ. ಅಲ್ಲಿಯ ಕಾರ್ಮಿಕರಿಗೆ, ರೈತರ ಸರಿಯಾಗಿ ಸ್ಪಂದಿಸದೇ ಕಾರ್ಮಿಕರ ಹೆಸರಿನಲ್ಲಿ ಸಾಲ ತೆಗೆದುಕೊಂಡಿದ್ದಾರೆ. 

ಪಕ್ಷದ ಸಂಘಟನೆಗಾಗಿ ಶ್ರದ್ಧೆಯಿಂದ ದುಡಿದಿದ್ದೇನೆ: ನಿರ್ಗಮಿತ ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್

ನಾನು ಸಕ್ಕರೆ ಸಚಿವನಾಗಿದ್ದ ವೇಳೆ ಕಾರ್ಖಾನೆ ಬಗ್ಗೆ ಸ್ಪಂದನೆ ಮಾಡಿದ್ದೇನೆ. ಜೊತೆಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿದರೂ ಆಡಳಿತ ಮಂಡಳಿಯವರು ಒಂದು ಮನವಿಯನ್ನೂ ಸಹಿತ ನೀಡಲಿಲ್ಲ. ರೈತರ ಬಗ್ಗೆ ಇವರಿಗೆ ಏನಾದರೂ ಕಾಳಜಿ ಇದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದರು. ಕಾರ್ಖಾನೆಯಲ್ಲಿ ನಡೆದಿ ರುವ ಅವ್ಯವಹಾರಗಳ ತನಿಖೆಗಿಂತಲೂ ರೈತರ ಹಿತದೃಷ್ಠಿಯಿಂದ ಕಾರ್ಖಾನೆಯನ್ನು ಪುನಾರಂಭಿಸುವ ಮೊದಲ ಆದ್ಯತೆ ನನ್ನದಾಗಿದೆ. ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಸಿದ್ದು ಕಾರ್ಖಾನೆ ಆರಂಭಿಸಲು ಬ್ಯಾಂಕ್‌ ಸೆಕ್ಯೂರಿಟಿ ಹಾಗೂ ₹40 ಕೋಟಿ ನೀಡಲು ಸರ್ಕಾರ ಮುಂದಾಗಿದೆ. ಶೀಘ್ರ ಕಾರ್ಖಾನೆ ಆರಂಭಿಸಲಾಗುವುದು ಎಂದರು.

PREV
Read more Articles on
click me!

Recommended Stories

ದರ್ಶನ್ ಇಲ್ದೇ ಇರುವಾಗ ಕೆಲವೊಬ್ರು ಏನೇನೋ ಮಾತಾಡ್ತಾರೆ: ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ಕೊಟ್ರಾ ವಿಜಯಲಕ್ಷ್ಮಿ
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ