ವಯಸ್ಸಾದವರನ್ನ ಮನೆ ಮೇಲಿನ ಗಿಡಗಳನ್ನ ಕೀಳಲು ಹಚ್ಚಿದ್ದಾರೆ. ಅವರ ಕೆಲಸ ಕೇವಲ ನೀರು ಬಿಡುವುದು ಅಷ್ಟೇ ಆದ್ರೆ ಮನೆಯ ಮೇಲಿನ ಕೆಲಸ ಮಾಡಲು ಹೇಳಿದ್ದಾರೆ. ಹೀಗಾಗಿ ಪರಶುರಾಮ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆಂದು ಮೃತ ಪರಶುರಾಮನ ಕುಟುಂಬಸ್ಥರು ಆರೋಪಿಸಿದ್ದಾರೆ.
ಹುಬ್ಬಳ್ಳಿ(ಜೂ.07): ಮನೆಗಳ ಮೇಲಿನ ಗಿಡಗಳನ್ನು ಕೀಳಲು ಹೋಗಿ ಪಂಪ್ ಆಪರೇಟರ್ ಸಾವನ್ನಪ್ಪಿದ ಘಟನೆ ನಗರದ ಗಿರಣಿ ಚಾಳ ಬಳಿ ಇರುವ ಪೋಸ್ಟ್ ಆಫೀಸ್ ಕ್ವಾರ್ಟರ್ಸ್‌ನಲ್ಲಿ ಇಂದು(ಶುಕ್ರವಾರ) ನಡೆದಿದೆ. ಪರಶುರಾಮ ನಿಂಗಪ್ಪ ಉಪ್ಪಾರ (60) ಮೃತ ಪಂಪ್ ಆಪರೇಟರ್. ಮೃತ ಪರಶುರಾಮ ಅವರು ಕಳೆದ 40 ವರ್ಷದಿಂದ ಪೋಸ್ಟ್ ಆಫೀಸ್ ಕ್ವಾಟರ್ಸ್‌ನಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕ್ವಾಟರ್ಸ್‌ನಲ್ಲಿರುವ ಮನೆಗಳ ಮೇಲಿನ ಗಿಡಗಳನ್ನ ಕೀಳಲು ಹೋಗಿ ಕೆಳಗೆ ಬಿದ್ದು ಪರಶುರಾಮ ಮೃತಪಟ್ಟಿದ್ದಾರೆ. ವಯಸ್ಸಾದವರನ್ನ ಮನೆ ಮೇಲಿನ ಗಿಡಗಳನ್ನ ಕೀಳಲು ಹಚ್ಚಿದ್ದಾರೆ. ಅವರ ಕೆಲಸ ಕೇವಲ ನೀರು ಬಿಡುವುದು ಅಷ್ಟೇ ಆದ್ರೆ ಮನೆಯ ಮೇಲಿನ ಕೆಲಸ ಮಾಡಲು ಹೇಳಿದ್ದಾರೆ. ಹೀಗಾಗಿ ಪರಶುರಾಮ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆಂದು ಮೃತ ಪರಶುರಾಮನ ಕುಟುಂಬಸ್ಥರು ಆರೋಪಿಸಿದ್ದಾರೆ.
ಧಾರವಾಡದಲ್ಲಿ ವರುಣನ ಅಬ್ಬರ: ಹೊಂಡದಂತಾದ ರಸ್ತೆಗಳು, ನೀರಲ್ಲೇ ನಿಂತ ವಾಹನಗಳು
ಬಿದ್ದು ನರಳಾಡಿದ್ರು ಅವರನ್ನ ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ಪರಶುರಾಮ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.