ಪಿಯುಸಿ ಪರೀಕ್ಷೆ: ಆರಂಭದ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಲೀಕ್!

Suvarna News   | Asianet News
Published : Mar 04, 2020, 02:37 PM IST
ಪಿಯುಸಿ ಪರೀಕ್ಷೆ: ಆರಂಭದ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಲೀಕ್!

ಸಾರಾಂಶ

ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ಆರಂಭ| ಆರಂಭದ ದಿನವೇ ದ್ವಿತೀಯ ವರ್ಷದ ಪ್ರಶ್ನೆಪತ್ರಿಕೆ ಲೀಕ್| ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ಪಿಯು ಕಾಲೇಜಿನಲ್ಲಿ ನಡೆದ ಘಟನೆ|ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಬಹಿರಂಗ| 

ವಿಜಯಪುರ(ಮಾ.04): ಇಂದು(ಬುಧವಾರ) ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಆರಂಭದ ದಿನವೇ ದ್ವಿತೀಯ ವರ್ಷದ ಪ್ರಶ್ನೆಪತ್ರಿಕೆ ಸೋರಿಕೆಯಾದ ಘಟನೆ ಇಂಡಿ ಪಟ್ಟಣದ ಶಾಂತೇಶ್ವರ ಪಿಯು ಕಾಲೇಜಿನಲ್ಲಿ ನಡೆದಿದೆ.ಮೊದಲ ದಿನವಾದ ಇಂದು ಪರೀಕ್ಷೆ ಆರಂಭವಾಗಿ ಒಂದೇ ಗಂಟೆಯಲ್ಲಿ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ. 

ಪ್ರಶ್ನೆ ಪತ್ರಿಕೆ ನೀಡಿದ ಬೆನ್ನಲ್ಲೇ ಮೊಬೈಲ್‌ ನಲ್ಲಿ ಫೋಟೋ ಲೀಕ್ ಆಗಿದೆ. ಪರೀಕ್ಷಾ ಕೊಠಡಿಯಲ್ಲಿ ಕುಳಿತ ಪರೀಕ್ಷಾರ್ಥಿಯ ಕೈನಲ್ಲಿನ ಪ್ರಶ್ನೆ ಪತ್ರಿಕೆಯನ್ನ ಕಿಡಿಗೇಡಿಗಳು ಕ್ಲಿಕ್ಕಿಸಿಕೊಂಡಿದ್ದಾರೆ. ಕಾಲೇಜಿನ ಸಿಬ್ಬಂದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. 

ಪರೀಕ್ಷೆ ದಿನವೇ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪರೀಕ್ಷಾ ಕೇಂದ್ರ ಸುತ್ತ ಬಿಗಿ ಭದ್ರತೆ ಇದ್ರೂ ಕೂಡ ಪ್ರಶ್ನೆ ಪತ್ರಿಕೆ ಹೇಗೆ ಸೋರಿಯಾಗಿದೆ ಎಂದು ಹಲವರ ಪ್ರಶ್ನೆಯಾಗಿದೆ. 


 

PREV
click me!

Recommended Stories

ರಾಯಚೂರು: ಎರಡು ಬುಲೆರೋಗಳ ನಡುವೆ ಭೀಕರ ಡಿಕ್ಕಿ; ಅಪ್ಪ-ಮಗ ಸೇರಿ ಐವರು ಬಲಿ, ಹಲವರು ಗಾಯ, ಮೂರು ಕುರಿಗಳು ಸಾವು!
ವೇಗವಾಗಿ ಬಂತು ಹೊಸ ಕಾರು, ಹೋಯ್ತು ಮಗುವಿನ ಪ್ರಾಣ: ತರಬೇತಿ ಇಲ್ಲದ ಚಾಲಕನ ಹುಚ್ಚಾಟಕ್ಕೆ 5 ವರ್ಷದ ಬಾಲಕ ಬಲಿ!