ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಬಂದ್‌

By Kannadaprabha NewsFirst Published Apr 23, 2021, 11:33 AM IST
Highlights

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಕೊರೋನಾ ಹಿನ್ನೆಲೆ 14 ದಿನಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ. 

ಗೊರವನಹಳ್ಳಿ (ಏ.23): ಕರುನಾಡಿನ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಸರಕಾರದ ಕೊವೀಡ್‌-19 ಮಾರ್ಗಸೂಚಿ ಆದೇಶದ ಅನ್ವಯ ಮೇ 4ರವರೆಗೆ ಬಂದ್‌ ಮಾಡಲಾಗಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಮತ್ತು ದಾಸೋಹ ನಿಲಯಕ್ಕೆ ಭಕ್ತಾ​ದಿಗಳಿಗೆ ಮತ್ತು ಸಾರ್ವಜನಿಕರಿಗೆ 14 ದಿನಗಳ ಕಾಲ ನಿರ್ಬಂ​ಧಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕಾಧಿ​ಕಾರಿ ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಮನಿಸಿ : ನಾಡಿನ ಪ್ರಮುಖ ದೇಗುಲಗಳಿಗೆ ಸಾರ್ವಜನಿಕ ಪ್ರವೇಶ ಬಂದ್‌

ಸರಕಾರದ ಆದೇಶ ಮತ್ತು ಮುಂದಿನ ಮಾರ್ಗಸೂಚಿ ಬರುವ ತನಕ ಭಕ್ತಾದಿ​ಗಳು ದೇವಾಲಯಕ್ಕೆ ಬರುವುದು ಬೇಡ. ಕೊರೋನಾ ರೋಗ ತಡೆಗೆ ಭಕ್ತಾದಿ​ಗಳ ಸಹಕಾರ ಅಗತ್ಯವಾಗಿದೆ. ಪುಣ್ಯಕ್ಷೇತ್ರಕ್ಕೆ ಬಂದು ದರ್ಶನ ಇಲ್ಲದೇ ಹೋಗುವುದು ಬೇಡ ಎಂದು ಪತ್ರಿಕೆಯೊಂದಿಗೆ ಮನವಿ ಮಾಡಿದ್ದಾರೆ.
 

click me!