ರ‍್ಯಾಗಿಂಗ್: 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

Published : Aug 13, 2018, 02:00 PM ISTUpdated : Sep 09, 2018, 08:33 PM IST
ರ‍್ಯಾಗಿಂಗ್: 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಸಾರಾಂಶ

ಪ್ರಪಂಚವನ್ನು ನೋಡಬೇಕಾದ ವಿದ್ಯಾರ್ಥಿನಿಯೊಬ್ಬಳು ವಿದ್ಯಾರ್ಥಿಗಳ ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿದ್ದಾಳೆ. ಇಂಥದ್ದೊಂದು ಮನಕಲಕುವ ಘಟನೆ ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದೆ.

ಕೋಲಾರ: ರ‍್ಯಾಗಿಂಗ್ ಹಾಗೂ ಕಿರುಕುಳಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ಜಿಲ್ಲೆಯ ಕೆಜಿಎಫ್‌ ನಗರದ ಇಟಿ‌ ಬ್ಲಾಕ್‌ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಸಂಜೀವಿನಿ ಮೃತ ವಿದ್ಯಾರ್ಥಿನಿ. ಬಂಗಾರಪೇಟೆಯ ಎಸ್‌ಡಿಸಿ ಕಾಲೇಜಿನಲ್ಲಿ ಈಕೆ ದ್ವಿತೀಯ ಪಿಯುಸಿ ಓದುತ್ತಿದ್ದಳು.

ಜೋಸೆಫ್ ಹಾಗೂ ಇತರೆ ವಿದ್ಯಾರ್ಥಿಗಳ ಕಿರುಕುಳ ತಾಳಲಾರದೇ, ಮಗಳು ಸಾವಿಗೆ ಶರಣಾಗಿದ್ದಾಳೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಚಾಂಪಿಯನ್ ರೀಫ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕೋಲಾರದಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ 341 ಎಕರೆ ಅಬ್ಬಣಿ ಕಿರು ಅರಣ್ಯ ಈಗ ಕಂದಾಯ ಭೂಮಿ, ಒತ್ತುವರಿದಾರರಿಗೆ ಹಬ್ಬ
ಗುದ್ದಲಿ ಪೂಜೆ ನೆರವೇರಿಸಿ 3 ತಿಂಗಳಾದರೂ ಶುರುವಾಗದ ರಾಮಸಾಗರ ಸೇತುವೆ: ಅಸಲಿ ಕಾರಣವೇನು?