ಪೌರತ್ವ ಕಾಯ್ದೆಗೆ ವಿರೋಧ: SP ಮುಂದೆಯೇ ನಾಲಿಗೆ ಹರಿಬಿಟ್ಟ ಪ್ರತಿಭಟನಾಕಾರರು

By Suvarna News  |  First Published Dec 25, 2019, 12:05 PM IST

ಪೌರತ್ವ ಕಾಯ್ದೆ ವಿರುದ್ಧ ನಡೆದ ಬೃಹತ್ ‌ಪ್ರತಿಭಟನೆ ವೇಳೆ ನಾಲಿಗೆ ಹರಿಬಿಟ್ಟ ಪ್ರತಿಭಟನಾಕಾರರು| ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ| ಪೊಲೀಸರಿಗೆ ಬಳ್ಳಾರಿ ಎಸ್ಪಿ ಮುಂದೆಯೇ ಪೊಲೀಸ್ ಚೋರ್ ಹೈ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು| ಪ್ರತಿಭಟನಾಕಾರರಿಗೆ ವಾರ್ನಿಂಗ್ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ|


ಬಳ್ಳಾರಿ[ಡಿ.25]: ಪೌರತ್ವ ಕಾಯ್ದೆ ವಿರುದ್ಧ ನಡೆದ ಬೃಹತ್ ‌ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಪೋಲಿಸ್ ವಾಲಾ ಚೋರ್ ಹೈ ಎಂದ  ಚೀರಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.  

"

Tap to resize

Latest Videos

ಮಂಗಳವಾರ ನಗರದಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಬೃಹತ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲ ಪ್ರತಿಭಟನಾಕಾರರು ಪೊಲೀಸರಿಗೆ ಬಳ್ಳಾರಿ ಎಸ್ಪಿ ಮುಂದೆಯೇ ಪೊಲೀಸ್ ಚೋರ್ ಹೈ ಎಂದು ಘೋಷಣೆಗಳನ್ನ ಕೂಗಿದ್ದಾರೆ. ಬಳ್ಳಾರಿ ಎಸ್ಪಿ ಸಿ.ಕೆ ಬಾಬಾ ಮುಂದೆಯೇ ಪ್ರತಿಭಟನಾಕಾರರು ನಾಲಿಗೆ ಹರಿ ಬಿಟ್ಟಿದ್ದಾರೆ.

ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಅವರು ಪ್ರತಿಭಟನಾಕಾರರಿಗೆ ವಾರ್ನಿಂಗ್ ಮಾಡಿದ್ದಾರೆ.  ಸಿಕೆ ಬಾಬಾ ವಾರ್ನಿಂಗ್ ಕೊಟ್ಟ ಬಳಿಕ ಪರಿಸ್ಥಿತಿಯನ್ನು ಪೊಲೀಸರು ತಿಳಿ ಮಾಡಿದ್ದಾರೆ. ಪ್ರತಿಭಟನೆ 
ದೊಡ್ಡ ಮಟ್ಟಕ್ಕೆ ಹೋಗುವ ಘಟನೆಯನ್ನ ಅರಿತ  ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಕೂಲಾಗಿ  ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಎಸ್ಪಿ ಸಿ.ಕೆ ಬಾಬಾ ಅವರ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 

click me!