'ಮತ್ತೆ ವಿವಾದ : ಚಂದನ್‌ ಶೆಟ್ಟಿ ವಿರುದ್ಧ ಪ್ರತಿಭಟನೆ'

Kannadaprabha News   | Asianet News
Published : Aug 26, 2020, 11:56 AM ISTUpdated : Aug 26, 2020, 12:54 PM IST
'ಮತ್ತೆ ವಿವಾದ : ಚಂದನ್‌ ಶೆಟ್ಟಿ ವಿರುದ್ಧ ಪ್ರತಿಭಟನೆ'

ಸಾರಾಂಶ

ಚಂದನ್ ಶೆಟ್ಟಿ ನಿರ್ಮಾಣದ ಮತ್ತೊಂದು ಹಾಡು ಇದೀಗ ವಿವಾದಕ್ಕೆ ಒಳಗಾಗಿದ್ದು, ಪ್ರತಿಭಟನೆ ನಡೆಸಲಾಗಿದೆ. ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಮೈಸೂರು (ಆ.26): ಮಲೈ ಮಹದೇಶ್ವರ ಸ್ವಾಮಿ ಕುರಿತು ಅವಹೇಳನಕಾರಿ ಹಾಡು ಚಿತ್ರೀಕರಿಸಿರುವ ಗಾಯಕ ಚಂದನ್‌ ಶೆಟ್ಟಿವಿರುದ್ಧ ಜಾನಪದ ಕಲಾವಿದರು ಮತ್ತು ಕನ್ನಡ ಕ್ರಾಂತಿದಳದವರು ಮೈಸೂರಿನ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.

"

ಗಾಯಕ ಚಂದನ್‌ ಶೆಟ್ಟಿವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಅವರಿಗೆ ಇನ್ನು ಮುಂದೆ ಯಾವುದೇ ವೇದಿಕೆ ಕಲ್ಪಿಸಬಾರದು. ವೇದಿಕೆ ಕಲ್ಪಿಸಿದರೆ ಮಸಿ ಬಳಿದು ವಿರೋಧಿಸುತ್ತೇವೆ ಎಂದು ಅವರು ಎಚ್ಚರಿಸಿದರು. ಕಂಸಾಳೆ ರವಿ , ಕನ್ನಡ ಕ್ರಾಂತಿದಳ ಅಧ್ಯಕ್ಷ ತೇಜಸ್ವಿ ಕುಮಾರ್‌ ಪಾಟೀಲ್, ಮುಖಂಡರಾದ ಶಶಿರಾಜ್‌, ಪುರುಷೊತ್ತಮ್‌, ನವೀನ್‌ ಮೊದಲಾದವರು ಇದ್ದರು.

ಚಂದನ್ ಶೆಟ್ಟಿ ವಿವಾದಕ್ಕೆ ಸಿಲುಕುತ್ತಿರುವುದು ಇದೆ ಮೊದಲಲ್ಲ, ಇನ್ನು ಮೂರಿವೆ!

ಚಂದನ್‌ ಶೆಟ್ಟಿತಮ್ಮ ಲಾಭಕ್ಕಾಗಿ ಮಲೈಮಹದೇಶ್ವರ ಇತಿಹಾಸ ಸಾರುವ ಸುಂದರ ಹಾಡಿನಲ್ಲಿ ಶರಣೆ ಸಂಕಮ್ಮ ಬಗ್ಗೆ ಕೆಟ್ಟದಾಗಿ ಚಿತ್ರಿಸಿ ಮೈಸೂರು, ಚಾಮರಾಜನಗರ ಜನತೆ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗೀತ ನಿರ್ದೇಶಕ, ಕನ್ನಡ ಚಂದನ್‌ ಶೆಟ್ಟಿತಿಳಿದೋ, ತಿಳಿಯದೇನೋ ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಾರೆ. ತಮ್ಮ ಹೊಸ ಆಲ್ಬಂಗೆ ಸಂಬಂ​ಧಿಸಿದಂತೆ ಅವರು ಇದೀಗ ಮತ್ತೆ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.

ಕಾಸ್ಟ್ಯೂಮ್ ಇಮ್ಯಾಜಿನೇಷನ್ ತಪ್ಪಾಯ್ತು': ಕೋಲುಮಂಡೆ ಸಾಂಗ್ ಬಗ್ಗೆ ಚಂದನ್ ಹೇಳಿದ್ದಿಷ್ಟು.

ಚಂದನ್‌ ಶೆಟ್ಟಿಕಂಪೋಸ್‌ ಮಾಡಿರುವ ಹೊಸ ಸಾಂಗ್‌ ’ಕೋಲುಮಂಡೆ’ ಗಣೇಶ ಹಬ್ಬದಂದು ಬಿಡುಗಡೆಯಾಗಿತ್ತು. ಈ ಹಾಡಿಗೆ ಈಗ ವಿರೋಧ ವ್ಯಕ್ತವಾಗಿದೆ. ಚಂದನ್‌ ಶೆಟ್ಟಿಕೊಲುಮಂಡೆ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸುವ ಮೂಲಕ ಮೈಸೂರು, ಚಾಮರಾಜನಗರ ಭಾಗದ ಜನರ

ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಚಂದನ್‌ ಶೆಟ್ಟಿವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌