* ಹೊರ ಕಚೇರಿಗೆ ಶಿಫ್ಟ್ ಆಗೋದು ಯಾವಾಗ..?
* ಧಾರವಾಡದಲ್ಲಿ ಕಚೇರಿ ಹುಡುವಂತ ಪರಿಸ್ಥಿತಿ
* ಡಿಸಿ ಕಚೇರಿಯ ಕೂಗಳತೆಯ ಅಂತರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಮೇ.24): ಸರ್ಕಾರದ ಕೆಲಸ ದೇವರ ಕೆಲಸ ಅಂತಾರೆ ಆದರೆ ಸರ್ಕಾರಿ ಕೆಲಸವನ್ನ ಮಾಡಬೇಕಾದರೆ ಕಚೇರಿ ಚೆನ್ನಾಗಿರಬೇಕಲ್ವಾ. ಆದರೆ ಧಾರವಾಡದಲ್ಲಿ ಗಣಿ ಮತ್ತು ಭೂ ವಿಜ್ಞಾನ ಕಚೇರಿ ಸದ್ಯ ತಾಡಪಲ್‌ಗಳಿಂದ ರಕ್ಷಣೆಗೆ ಒಳಪಟ್ಟಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೂದಲೆಳೆ ಅಂತರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯ ಅವ್ಯವಸ್ಥೆಯನ್ನ ನೋಡಿದರೆ ಇವರೇನು ಜಿಲ್ಲೆಯಲ್ಲಿ ಕೆಲಸ ಮಾಡಲು ಮಾಡ್ತಾ ಇದಾರಾ ಇಲ್ಲವೋ ಎಂಬುದು ಅಷ್ಟೇ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಕೂಗಳತೆಯ ಅಂತರದಲ್ಲಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕಚೇರಿಯ ಅವ್ಯವಸ್ಥೆಯನ್ನ ನೋಡಿದರೆ ಸಾರ್ವಜನಿಕರು ನಾಚುವಂತಾಗಿದೆ. ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೆಲಸವನ್ನ ಮಾಡುತ್ತಿದೆ. ಜಿಲ್ಲೆಗೆ ಎಷ್ಟು ಜಲ್ಲಿ ಕಲ್ಲು ಬೇಕು, ಎಷ್ಟು ಮರಳು ಬೇಕು, ಎಂಬುದೆಲ್ಲ ಮಾಹಿತಿ ಈ ಇಲಾಖೆಗೆ ಇರುತ್ತೆ. ಆದರೆ ಏನು ಪ್ರಯೋಜನ ಹೇಳಿ ತಮ್ಮ ಕಚೇರಿ ಮಳೆಯಿಂದ ಸೋರುತ್ತಿದೆ. ಮಳೆಯ ರಕ್ಷಣೆಗಾಗಿ ಕಚೇರಿ ಹಿರಿಯ ಅಧಿಕಾರಿಗಳು ಸದ್ಯ ತಮ್ಮ ಕಚೇರಿ ತಾಡಪಲ್‌ನ್ನ ಹಾಕಿ ರಕ್ಷಣೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ ಬಳಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿ
ಇನ್ನು ಕಚೇರಿಯ ಆವರಣದಲ್ಲಿ ಅಕ್ರಮ ಮರಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮರಳನ್ನ ಹರಾಜು ಹಾಕದೆ ವರ್ಷಗಳೇ ಕಳೆದು ಹೋಗಿದೆ. ಇನ್ನು ತಮ್ಮ ಕಚೇರಿಯೊಳಗೆ ಸಿಬ್ಬಂದಿಗಳು ಹೋಗಬೇಕಾದರೆ ಕೇವಲ ಒಂದು ಕಾರ್ ಒಳಗೆ ಹೋಗುವಷ್ಟೆ ಜಾಗ ಇದೆ. ಅಕ್ಕಪಕ್ಕದಲ್ಲಿ ರಾಶಿ ರಾಶಿ, ಮರಳು ಇದ್ದು ಆ ಮರಳನ್ನ ಅಧಿಕಾರಿಗಳು ಹರಾಜು ಹಾಕುತ್ತಿಲ್ಲ, ಇನ್ನೊಂದೆಡೆ ಮರಳಿಲ್ಲ ಎಂದ ಸರ್ಕಾರಿ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ರೂ ಸದ್ಯ ಅವೆಲ್ಲ ಕಾಮಗಾರಿಗಳು ಅರ್ಧ ಮರ್ಧಕ್ಕೆ ನಿಂತಿವೆ. ಯಾಕೆ ಆ ಮರಳನ್ನ ಅಧಿಕಾರಿಗಳು ಹರಾಜು ಹಾಕುತ್ತಿಲ್ಲ ಎಂದು ಸ್ಥಳೀಯರು ಆರೋಪವಾಗಿದೆ.
ಇನ್ನು ದೇವರು ವರ ಕೊಟ್ರೆ ಪೂಜಾರಿ ವರ ಕೊಟ್ಟಿಲ್ಲ ಅನ್ನೋ ಹಾಗೆ ಆಗಿದೆ. ಆದರೆ ಸದ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಕಸದಿಂದ ಕೂಡಿದೆ. ಅಲ್ಲಿರುವ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ತಮ್ಮ ಕಚೇರಿಯನ್ನ ಮಳೆಯಿಂದ ರಕ್ಷಣೆ ಮಾಡಿಕ್ಕೊಳ್ಳಲು ತಾಡಪಲ್ ಮೊರೆ ಹೋಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಧಾರವಾಡ ಜಿಲ್ಲೆಯಲ್ಲಿ ಹುಡುವಂತ ಪರಿಸ್ಥಿತಿ ಎದುರಾಗಿದೆ. ಮುಂಗಾರು ಮೇಳೆ ಪ್ರವೇಶ ಆರಂಭವಾಯ್ತು, ಸರ್ಕಾರಿ ಕಚೇರಿಗಳು ಸದ್ಯ ಮಳೆಯಿಂದ ಸೋರುತ್ತಿವೆ. ಇನ್ನು ಸೋರುತ್ತಿರುವ ಕಚೇರಿಯನ್ನ ಮುಚ್ಚಲು ತಾಡಪಲ್ ಮೊರೆ ಹೋಗಿದ್ದಾರೆ.