ಬುಲೆರೋ ಪಿಕಪ್ ವಾಹನ ಅಪಘಾತದ ಸಂದರ್ಭದಲ್ಲಿ ವಾಹನದಲ್ಲಿ 60ಕ್ಕೂ ಅಧಿಕ ಕರುಗಳನ್ನ ರಕ್ಷಣೆ ಮಾಡಲಾಗಿದೆ. ಕರುಗಳ ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದು ಕರುಗಳನ್ನ ಹೇರಿಕೊಂಡ ಹೋಗುತ್ತಿದ್ದ ಖದೀಮರು.
ವಿಜಯಪುರ(ಸೆ.16): ಬುಲೆರೋ ವಾಹನದಲ್ಲಿ ಕರುಗಳ ಸಾಗಾಟ ವೇಳೆ ಅಪಘಾತವಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಬಳಿ ಇಂದು(ಶನಿವಾರ) ನಡೆದಿದೆ. ಗೋವು ಸಾಗಾಟ ಮಾಡ್ತಿದ್ದ ಖದೀಮರು ಸ್ಥಳೀಯ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬುಲೆರೋ ಪಿಕಪ್ ವಾಹನ ಅಪಘಾತದ ಸಂದರ್ಭದಲ್ಲಿ ವಾಹನದಲ್ಲಿ 60ಕ್ಕೂ ಅಧಿಕ ಕರುಗಳನ್ನ ರಕ್ಷಣೆ ಮಾಡಲಾಗಿದೆ. ಕರುಗಳ ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದು ಕರುಗಳನ್ನ ಹೇರಿಕೊಂಡ ಹೋಗುತ್ತಿದ್ದ ಖದೀಮರು.
ಮಹಾರಾಷ್ಟ್ರದ ಸಾತಾರಾ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ವಾಹನ ಬರುತ್ತಿತ್ತು. ವಾಹನದಲ್ಲಿ ಮಾರಕಾಸ್ತ್ರಗಳೂ ಸಹ ಪತ್ತೆಯಾಗಿವೆ.
undefined
Ramanagara: ಹೊರ ರಾಜ್ಯಕ್ಕೆ ಅಕ್ರಮ ಗೋ ಸಾಗಾಟ, ಮೂವರ ಬಂಧನ
ಕರುಗಳನ್ನ ಕತ್ತರಿಸಲು ಮಾರಕಾಸ್ತ್ರ ತಂದಿರುವ ಶಂಕೆ ವ್ಯಕ್ತವಾಗಿದೆ. ಅಪಘಾತವಾದ ಬಳಿಕ ವಾಹನ ಸ್ಥಳದಲ್ಲಿಯೇ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ.
ಕರುಗಳ ಸಾಗಾಟಕ್ಕೆ ವಾಹನದ ಮೇಲೆ ಸ್ವಾಮಿ ಸಮರ್ಥ ಎಂದು ಖದೀಮರು ಬರೆದಿದ್ದಾರೆ. ಅಕ್ರಮ ಗೋ ಸಾಗಾಟಕ್ಕೆ ವಾಹನದ ಮೇಲೆ ಹಿಂದೂ ದೇವರ, ದಾರ್ಶನಿಕರ ಫೋಟೋ, ಹೆಸರು ಬಳಕೆ ಮಾಡಲಾಗಿದೆ. ಖದೀಮರ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.