ಹಿಂದೂ ದೇವಾಲಯಗಳನ್ನು ರಕ್ಷಿಸಿ: ಆಸ್ಟ್ರೇಲಿಯಾ ಸಚಿವರ ಬಳಿ ಪುತ್ತಿಗೆ ಶ್ರೀ ಆಗ್ರಹ

By Girish Goudar  |  First Published Jan 20, 2023, 10:32 PM IST

ಇತ್ತೀಚಿಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಆಕ್ರಮಣ ಮಾಡಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಪೂಜ್ಯ ಶ್ರೀಪಾದರು 


ಉಡುಪಿ(ಜ.20): ಆಸ್ಟ್ರೇಲಿಯಾ ವಲಸೆ ನೀತಿ ಕೇಂದ್ರ ಸಚಿವರು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದರು. ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ  ಅನಿವಾಸಿ ವಲಸೆ ಸಚಿವ ಆಂಡ್ರೂ ಗೈಲ್ಸ್  ಇವರು  ತಮ್ಮ ನಿವಾಸಕ್ಕೆ  ಕರೆಯಿಸಿ ಆಶೀರ್ವಾದ ಪಡಕೊಂಡಿದ್ದಾರೆ.  ಈ ಸಂದರ್ಭದಲ್ಲಿ  ಪೂಜ್ಯ ಶ್ರೀಪಾದರು ಇತ್ತೀಚಿಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಆಕ್ರಮಣ ಮಾಡಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಾನ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತು, ಶ್ರೀಗಳ ಸಲಹೆಯನ್ನು ಪಡೆದುಕೊಂಡರು. ಭಾರತೀಯರಿಗೆ ವೀಸಾ ಕಾರ್ಯಗಳ ಶೀಘ್ರ ವಿಲೇವಾರಿ ಬಗ್ಗೆಯೂ ಪ್ರಸ್ತಾವಿಸಲಾಯಿತು. ಸಚಿವರು ಈ ಬಗ್ಗ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತರು. ಪೂಜ್ಯ ಶ್ರೀಪಾದರು ಮುಂಬರುವ ತಮ್ಮ ಪರ್ಯಾಯಕ್ಕೆ ಪ್ರೀತಿಯಿಂದ ಆಹ್ವಾನಿಸಿದರು. ಸಚಿವರು ತಮ್ಮ ಮಾತಿನಲ್ಲಿ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಸುಗುಣೇಂದ್ರ ತೀರ್ಥರಯ, ವಿಶ್ವಬ್ರಾತೃತ್ವ ವನ್ನು ಸಾರುವ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

Tap to resize

Latest Videos

undefined

10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿದ್ದೀರಾ?, ಹಾಗಾದ್ರೆ ಈ ಕೆಲಸ ಮಾಡ್ಲೇಬೇಕು?

ಕ್ಯಾಬಿನೆಟ್ ಸಚಿವರೊಂದಿಗೆ ಪುತ್ತಿಗೆ ಶ್ರೀ ಮಾತುಕತೆ

ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ ಸರಕಾರದ ಕ್ಯಾಬಿನೆಟ್ ಸಚಿವರಾದ ಬಿಲ್ ಶಾರ್ಟನ್ (ಸರಕಾರಿ ಸವಲತ್ತು ಸಹಕಾರ ಖಾತೆ) ತಮ್ಮ ನಿವಾಸಕ್ಕೆ ಕರೆಯಿಸಿ ಆಶೀರ್ವಾದ ಪಡೆದುಕೊಂಡರು.

ಶ್ರೀಪಾದರು ಮುಂಬರುವ ತಮ್ಮ ಪರ್ಯಾಯಕ್ಕೆ ಪ್ರೀತಿಯಿಂದ ಆಹ್ವಾನಿಸಿದರು. ಸಚಿವರು ತಮ್ಮ ಮಾತಿನಲ್ಲಿ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಶ್ರೀಪಾದರು ಭಗವದ್ಗೀತಾ ಪುಸ್ತಕ, ಶಾಲು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

click me!