Chitradurga: ಶಾಸಕ ತಿಪ್ಪಾರೆಡ್ಡಿ ವಿರುದ್ದ ಮತ್ತೆ ಗುಡುಗಿದ ಗುತ್ತಿಗೆದಾರ ಮಂಜುನಾಥ್

By Suvarna News  |  First Published Jan 20, 2023, 9:41 PM IST

ಆಡಿಯೋ ಸುಳ್ಳಾಗಿದ್ರೆ ನಾನು ಕುತ್ತಿಗೆ ಕೊಯ್ದುಕೊಂಡು ಬಿಡ್ತೀನಿ ಎಂದು ಸವಾಲ್. ಈ ಕೇಸ್ ಅನ್ನು ಲೋಕಾಯುಕ್ತಗೆ ನೀಡಲಾಗುವುದು ನ್ಯಾಯ ಸಿಗದಿದ್ದಲ್ಲಿ, ಮೋದಿ ಬಳಿ ನಿಯೋಗ ಎಂದ ಮಂಜುನಾಥ್.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.20): ಕಳೆದೊಂದು ವಾರದಿಂದ ಇಡೀ ರಾಜ್ಯಾದ್ಯಂತ ಹೆಚ್ಚು ಸದ್ದು ಮಾಡ್ತಿರೋ ಗುತ್ತಿಗೆದಾರರು ಸ್ಪೋಟಗೊಳಿಸಿದ ಸುದ್ದಿ ಯಾವುದಪ್ಪ ಅಂದ್ರೆ ಅದು ಕೋಟೆನಾಡು ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಅವರ ಕಮಿಷನ್ ದಂಧೆ ವಿಚಾರ. ಬೆಂಗಳೂರಿನಲ್ಲಿ ಎಲ್ಲಾ ಗುತ್ತಿಗೆದಾರರು ಒಂದೆಡೆ ಸೇರಿ ಅದ್ರಲ್ಲೂ ಚಿತ್ರದುರ್ಗ ಗುತ್ತಿಗೆದಾರರ ಜಿಲ್ಲಾಧ್ಯಕ್ಷ ಮಂಜುನಾಥ್ ಸಿಡಿಸಿದ ಶಾಸಕ ತಿಪ್ಪಾರೆಡ್ಡಿ ಅವರ ಆಡಿಯೋ ಬಾಂಬ್ ಇಡೀ ರಾಜ್ಯದಲ್ಲಿ ಸದ್ದು ಮಾಡಿತು. ಅದಕ್ಕೆ ಪೂರಕ ಎಂಬಂತೆ ಇಂದು ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಶಾಸಕರ ವಿರುದ್ದ ಆರೋಪಗಳ ಸುರಿಮಳೆ ಮಾಡುವ ಮೂಲಕ ಮತ್ತೊಮ್ಮೆ ಶಾಸಕ ತಿಪ್ಪಾರೆಡ್ಡಿ ವಿರುದ್ದ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಗುಡುಗಿದರು.

Latest Videos

undefined

ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಅವರ ಕಮಿಷನ್ ದಂದೆಯ ಕುರಿತು ಮುಂದಿನ ವಾರ ಲೋಕಾಯುಕ್ತಕ್ಕೆ ದೂರು ನೀಡಲಿದ್ದು, ಅವರಿಂದ ನ್ಯಾಯಾ ಸಿಗದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಗುತ್ತಿಗೆದಾರರು ನಿಯೋಗ ಹೋಗಿ ರಾಜ್ಯದಲ್ಲಿ ನಡೆಯುತ್ತಿರುವ ಶಾಸಕತ ಕಮಿಷನ್ ದಂದೆ ಕುರಿತು ದೂರು ನೀಡಲಾಗುವುದು ಎಂದು ಗುತ್ತಿಗೆದಾರರು ಜಿಲ್ಲಾ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು‌. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡೆದರು ಅದಕ್ಕೆ ಸ್ಥಳೀಯರು ಟೆಂಡರ್ ಹಾಕುವಂತಿಲ್ಲ. ಬೇರೆ ಜಿಲ್ಲೆಯವರು ಅಥವಾ ಶಾಸಕ ತಿಪ್ಪಾರೆಡ್ಡಿ ಅವರ ಬೆಂಬಲಿಗರು ಟೆಂಡರ್ ಪಡೆದು ನಂತರ ಶಾಸಕರು ತಮ್ಮ ಮನೆಯಲ್ಲಿ ಮತ್ತು ಪ್ರವಾಸಿ ಮಂದಿರದಲ್ಲಿ ಇತರೆ ಗುತ್ತಿಗೆದಾರರಿಗೆ ಕಾಮಗಾರಿಗೆ ಇಂತಿಷ್ಟು ಅಂತಾ ಕಮೀಷನ್ ಹಣ ಪಡೆದು ನೀಡುತ್ತಾರೆ. ಇದನ್ನು ಪ್ರಶ್ನಿಸಿದಂತಹವರಿಗೆ ಯಾವುದೇ ಕಾಮಗಾರಿ ಇಲ್ಲ.

ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕಮೀಷನ್‌ ಕೊಟ್ಟಿದ್ದೇನೆ: ಗುತ್ತಿಗೆದಾರ ಮಂಜುನಾಥ್ ಆರೋಪ

ಹಳೇ ಕಾಮಗಾರಿಗಳ ‌ಬಿಲ್ ಪಾಸ್ ಮಾಡುವುದಿಲ್ಲ. ಇದರಿಂದ ಜಿಲ್ಲೆಯಲ್ಲಿನ ಗುತ್ತಿಗೆದಾರರು ಬೇಸತ್ತಿದ್ದು, ತಮ್ಮ ಮನೆಯಲ್ಲಿ ಹೆಂಡತಿ ಮಕ್ಕಳ ಆಭರಣಳನ್ನು ಮಾರಾಟ ಮಾಡಿ ಇವರಿಗೆ ಕಮಿಷನ್ ನೀಡಬೇಕಿದೆ ಎಂದು ಆರೋಪಿಸಿದರು. ಶಾಸಕರಿಗೆ ಹಣದ ಗಂಟು ಸಿಗಬೇಕಾದರೆ ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಗೆ ಹೋಗುತ್ತಾರೆ. ಅವರಿಂದ ಒಂದು ಕಾಮಗಾರಿಗೆ  25% ಕಮಿಷನ್ ತೆಗೆದುಕೊಳ್ಳುತ್ತಾರೆ. ಸರ್ಕಾರಕ್ಕೆ ಕಟ್ಟುವ  ಜಿಎಸ್ ಟಿ ಗೂ ನಾವು ಕಮಿಷನ್ ಕೊಡಬೇಕಿದೆ‌. ಕಳೆದ 5 ವರ್ಷದಿಂದ ಶಾಸಕರಿಗೆ ಕಮಿಷನ್ ಕೊಡುತ್ತಾ ಬಂದಿದ್ದೆವೆ. ಮೊದಲು ಸಣ್ಣ ರೂಪದಲ್ಲಿ ಕಮೀಷನ್ ಪಡೆಯುತ್ತಿದ್ದ ಶಾಸಕ ತಿಪ್ಪಾರೆಡ್ಡಿ ಅವರು ಇಂದು ಗಂಟು ಮಾಡುವ ರೂಪದಲ್ಲಿ 40% ಕಮೀಷನ್ ಕೇಳುತ್ತಾರೆ. 

ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ರಘು ಆಚಾರ್‌

ಇದಕ್ಕೆ ತಮ್ಮ ಮಗನನ್ನು ಕೂರಿಸಿಕೊಂಡು ವ್ಯಾಪಾರ ಮಾಡುತ್ತಾರೆ ಎಂದು ಹೇಳಿದ ಅವರು, ನಾನೊಬ್ಬನೆ ಶಾಸಕರಿಗೆ 90 ಲಕ್ಷ ರೂ. ಕಮಿಷನ್ ಹಣ ನೀಡಿದ್ದೆನೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ  ಮಲ್ಲೇಶಪ್ಪ, ನಿರ್ದೆಶಕ ಶ್ರೀನಿವಾಸ್, ತಿಮ್ಮಣ್ಣ, ಜಗದೀಶ್, ಸಿಎಂ.ಅಕ್ಬರ್, ವೆಂಕಟೇಶ್, ಉಮ್ಮಣ್ಣ, ಮೈಲಾರಪ್ಪ, ಜಗದೂಶ್, ತಿಪ್ಪೇಸ್ವಾಮಿ, ಮಹೇಶ್, ದೆವರಾಜ್, ದೇವೆಂದ್ರಪ್ಪ, ಪ್ರಸಾದ್ ಉಪಸ್ಥಿತರಿದ್ದರು.

click me!