Shivamogga: ಕುವೆಂಪು ವಿವಿ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕ

By Govindaraj S  |  First Published Jul 28, 2023, 11:59 PM IST

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕವಾಗಿದ್ದಾರೆ. ಈ ಹಿಂದೆ ಅವರು ಕುವೆಂಪು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. 


ಶಿವಮೊಗ್ಗ (ಜು.28): ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕವಾಗಿದ್ದಾರೆ. ಈ ಹಿಂದೆ ಅವರು ಕುವೆಂಪು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರೊ. ಪಿ.ಕಣ್ಣನ್‌ ಅವರು ಮೂಲತಃ ವಿಜಯಪುರ ಜಿಲ್ಲೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್‌ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿದ್ದರು. ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರೊ. ಕಣ್ಣನ್‌ ಅವರಿಗೆ ಕುವೆಂಪು ವಿವಿ ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ಶುಭಾಶಯ ತಿಳಿಸಿದರು.

ವರ​ದಿ​ಗಾ​ರನಿಗೆ ಭಾಷೆ ಮೇಲೆ ಹಿಡಿತ ಇರ​ಬೇ​ಕು: ಪತ್ರಿಕೆಯಲ್ಲಿ ವರದಿಗಾರನ ಜವಾಬ್ದಾರಿ ಮಹತ್ವ ಪೂರ್ಣವಾದುದು. ಪತ್ರಿಕೆಯ ವರದಿಗಾರನಿಗೆ ಭಾಷೆಯ ಮೇಲಿನ ಹಿಡಿತ ದೃಢವಾಗಿರಬೇಕು ಎಂದು ಹಿರಿಯ ಪತ್ರಕರ್ತ ಡಾ.ಪದ್ಮರಾಜ ದಂಡಾವತಿ ಹೇಳಿದರು. ಇಲ್ಲಿನ ಶಂಕರಘಟ್ಟಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪತ್ರಿಕಾ ಭಾಷೆ ಕುರಿತು ಉಪನ್ಯಾಸ ನೀಡಿದರು. 

Tap to resize

Latest Videos

ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ

ಸಾಹಿತ್ಯ ಓದಿನಿಂದ ಜೀವನ ಮೌಲ್ಯ ಮತ್ತು ಅನುಭವ ಪಡೆಯಬಹುದು. ಸಾಹಿತ್ಯ ಓದಲು ಪೂರ್ವಸಿದ್ಧತೆ ಬೇಕು. ಆದರೆ, ಪತ್ರಿಕೆ ಓದಲು ಯಾವುದೇ ಸಿದ್ಧತೆ ಬೇಡ. ಪತ್ರಿಕೋದ್ಯಮ ಎಂಬುದು ಅಪರಿಪೂರ್ಣ ಶಾಪವಿರುವ ವೃತ್ತಿ. ಅದನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುವುದೇ ದೊಡ್ಡ ಸವಾಲು. ಅದಕ್ಕೆ ಕಠಿಣ ಶ್ರಮ, ಶ್ರದ್ಧೆ ಬೇಕು ಎಂದರು.

ಪತ್ರಿಕೋದ್ಯಮದ ಭಾಷೆ ಎದೆಯ ಮಟ್ಟದ್ದಾಗಿರಬೇಕು. ಅಂದರೆ ಪತ್ರಿಕೆಯಲ್ಲಿನ ವರದಿಗಳು ಹೃದಯಕ್ಕೆ ಸಂವಾದ ಮಾಡಬೇಕು. ಸಮಾಜದಲ್ಲಿ ಪರಿಣಾಮ ಬೀರಬೇಕು. ಎಲ್ಲಾ ವರದಿಗಳನ್ನು ಓದುಗರು ಸ್ವೀಕರಿಸಬೇಕು. ಇದೆಲ್ಲದರಲ್ಲಿ ಪತ್ರಕರ್ತನ ಬರವಣಿಗೆಯ ಶ್ರೇಷ್ಠತೆ ಅಡಗಿರುತ್ತದೆ. ಪತ್ರಿಕೆಯ ವರದಿಗಾರ ಅಥವಾ ವಿದ್ಯಾರ್ಥಿಗಳಲ್ಲಿ ಪ್ರಚಲಿತ ವಿಧ್ಯಮಾನದ ಕುರಿತು ಅರಿವಿರಬೇಕು. ಕೇವಲ ಒಂದು ವಲಯಕ್ಕೆ ಸೀಮಿತ ಆಗಿರಬಾರದು. 

ಉತ್ತರ ಕನ್ನಡ: ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಬ್ಯಾನ್

ದೇಶ ವಿದೇಶದ ವರ್ತಮಾನವನ್ನೂ ವಿದ್ಯಾರ್ಥಿಗಳು ತಿಳಿದಿರಬೇಕು. ಆಗ ಪತ್ರಿಕೆಯಲ್ಲಿ ಘಟನೆಯ ವರದಿ ವಿಶ್ಲೇಷಣೆ ಮಾಡಲು ಸಹಾಯಕ. ಪತ್ರಿಕೆ ಓದಿ ಮಾಹಿತಿ ಹಾಗೂ ಭಾಷೆಯನ್ನು ಕಲಿತ ಜನರು ಸಾಕಷು ಜನರಿದ್ದಾರೆ ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಎಂ.ಆರ್‌.ಸತ್ಯಪ್ರಕಾಶ್‌, ಪ್ರಾಧ್ಯಾಪಕರಾದ ಪಿ.ಎ.ವರ್ಗೀಸ್‌, ಸತೀಶ್‌ ಕುಮಾರ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಇದ್ದರು.

click me!