ಖಾಸಗಿ ಸಂಸ್ಥೆಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಪಂಗನಾಮ: ಪೊಲೀಸ್ ಠಾಣೆಗೆ ದೂರು

Published : Mar 20, 2025, 07:09 PM ISTUpdated : Mar 20, 2025, 07:10 PM IST
ಖಾಸಗಿ ಸಂಸ್ಥೆಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಪಂಗನಾಮ: ಪೊಲೀಸ್ ಠಾಣೆಗೆ ದೂರು

ಸಾರಾಂಶ

ಅದು ಬಡ ಹಾಗೂ ಮಧ್ಯಮ ರೈತರಿಗೆ ಮಾಡಿದ್ದ ಯೋಜನೆಯದ್ದು , ಆ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡ್ತೀವಿ ಅಂತಾ ಹೇಳಿದ್ದ ಖಾಸಗಿ ಕಂಪೆನಿಯೊಂದು ಸರ್ಕಾರಕ್ಕೆ ಪಂಗನಾಮ ಹಾಕಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ಸಂಸ್ಥೆ ವಿರುದ್ದ  ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.20): ಅದು ಬಡ ಹಾಗೂ ಮಧ್ಯಮ ರೈತರಿಗೆ ಮಾಡಿದ್ದ ಯೋಜನೆಯದ್ದು , ಆ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡ್ತೀವಿ ಅಂತಾ ಹೇಳಿದ್ದ ಖಾಸಗಿ ಕಂಪೆನಿಯೊಂದು ಸರ್ಕಾರಕ್ಕೆ ಪಂಗನಾಮ ಹಾಕಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ಸಂಸ್ಥೆ ವಿರುದ್ದ  ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟಿದ್ದಾರೆ. ಅಲ್ಲದೆ ಸೂಕ್ತ ಕ್ರಮಕ್ಕೆ ಕೇಂದ್ರ ಕಚೇರಿಗೂ ಪತ್ರ ಬರೆದು ಹಣ ವಂಚನೆ ಬಗ್ಗೆ ಚಿಕ್ಕಮಗಳೂರು ಮಾತ್ರವಲ್ಲ ರಾಜ್ಯಾದ್ಯಾಂತ ಯೋಜನೆಯಿಂದ ಸರ್ಕಾರಕ್ಕೆ ವಂಚನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 

ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ  ವಂಚನೆ: ಕೃಷಿ ಯಂತ್ರಧಾರೆ ಯೋಜನೆ.ಇದು 2014 ರಲ್ಲಿ ಸರ್ಕಾರದ ಮಹತ್ವದ ಯೋಜನೆ.ಬಡ ಹಾಗೂ ಮಧ್ಯಮ ರೈತರಿಗಾಗಿಯೇ ಮಾಡಿದ ಯೋಜನೆಯದು.ಈ ಯೋಜನೆಯನ್ನ ಖಾಸಗಿ ಕಂಪೆನಿಗಳಿಗೆ ನೀಡಿ ರೈತರಿಗೆ ಅನುಕೂಲ ಮಾಡುವ ಉದ್ದೇಶ ಸರ್ಕಾರದ್ದು,  ಮೊದಲ ಹಾಗೂ ಎರಡನೇ ಹಂತದಲ್ಲಿ ನೀಡಿದ ಖಾಸಗಿ ಕಂಪೆನಿಗಳು ಸಮರ್ಪಕವಾಗಿ ನಡೆಸ್ತಾ ಇದೆ.ಆದ್ರೆ ಮೂರನೇ ಹಂತದಲ್ಲಿ ನೀಡಿದ್ದ ಖಾಸಗಿ ಕಂಪೆನಿಯೊಂದು ಸಬ್ಸಿಡಿ ನೀಡಿರೊ ಕೋಟ್ಯಾಂತರ ಹಣವನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ. ಸಣ್ಣ ಮತ್ತು ಮಧ್ಯಮ ವಲಯದ ರೈತರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಅಂತಾ ಕೃಷಿ ಯಂತ್ರಧಾರೆ ಮೂಲಕ ಕೃಷಿ ಸಲಕರಣೆಗಳನ್ನು ಬಾಡಿಗೆ ದರದಲ್ಲಿ ನೀಡುವ ಯೋಜನೆ. 

ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ: ಸ್ಥಳದಲ್ಲಿಯೇ ವ್ಯಕ್ತಿ ಸಾವು, ಚಾಲಕ ಸಸ್ಪೆಂಡ್!

ಈ ಯೋಜನೆಗೆ ಸರ್ಕಾರ ಸಬ್ಸಿಡಿ ಹಣವನ್ನು ಖಾಸಗಿ ಸಂಸ್ಥೆಗೆ ನೀಡಿ ಯಂತ್ರಗಳನ್ನು ಖರೀದಿಗೆ ಅವಕಾಶ ಕಲ್ಪಿಸಿದೆ. ಆದ್ರೆ ಯಂತ್ರ ಖರೀದಿ ಮಾಡಿದ ಖಾಸಗಿ ಸಂಸ್ಥೆ ರೈತರಿಗೆ ಬಾಡಿಗೆ ಯಂತ್ರಗಳನ್ನು ನೀಡಿದೆ ಯಂತ್ರಗಳ ಜೊತೆಗೆ ಜಾಗ ಖಾಲಿ ಮಾಡಿದ್ದಾರೆ. ಇದನ್ನ ಸ್ವತಃ ಕೃಷಿ ಅಧಿಕಾರಿಗಳೇ ಒಪ್ಪಿಕೊಳ್ತಾ ಇದ್ದಾರೆ.ಜಿಲ್ಲೆಯಲ್ಲಿ 30 ಕಡೆಗಳಲ್ಲಿ ನಡೆಸಲು ಅನುಮತಿ ನೀಡಿದ್ರೆ 14 ಕಡೆ ಸರಿಯಾಗಿ ನಡೆಯುತ್ತಿದೆ.ಇನ್ನೂ ಚಿತ್ರದುರ್ಗ ಮೂಲದ ಖಾಸಗಿ ಕಂಪೆನಿ ಈಗ ಬಾಗಿಲು ಹಾಕಿಕೊಂಡಿದೆ.ಕೊಟ್ಯಾಂತರ ಹಣವನ್ನು ಸರ್ಕಾರಕ್ಕೆ  ಪಂಗನಾಮವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿತ್ರದುರ್ಗ ಮೂಲದ ಖಾಸಗಿ ಸಂಸ್ಥೆ 16 ಘಟಕವನ್ನು ಓಪನ್ ಮಾಡಿತ್ತು. ಆ ಘಟಕಗಳಿಗೆ ಸರ್ಕಾರ 4 ಕೋಟಿ 48 ಲಕ್ಷ ರೂಪಾಯಿಯನ್ನು ಸಬ್ಸಿಡಿ ರೂಪದಲ್ಲಿ ನೀಡಿತ್ತು.ಇದೀಗ 16 ಘಟಕಗಳನ್ನು ಬಂದ್ ಮಾಡಿ ಸಂಸ್ಥೆ ಜಾಗ ಖಾಲಿ ಮಾಡಿದೆ. 

ಪೊಲೀಸ್ ಠಾಣೆ, ಕೇಂದ್ರ ಕಛೇರಿಗೆ ಪತ್ರ: ಇನ್ನೂ ಯಂತ್ರಧಾರೆ ಯೋಜನೆಯಂದ್ರೆ ಭೂಮಿ ಸಿದ್ದತೆಯಿಂದ ಕಟವ್  ವರೆಗೆ ಯಂತ್ರೋಪಕರಣ ಗಳನ್ನ ಬಾಡಿಗೆ ಪಡೆಯುವ ಯೋಜನೆ.ಕಡಿಮೆ ದರದಲ್ಲಿ ರೈತರಿಗೆ ನೀಡಬೇಕು.ಸಬ್ಸಿಡಿ ಯನ್ನ ಸರ್ಕಾರ ನೀಡುತ್ತೇ..ಅದ್ರೆ ಚಿತ್ರದುರ್ಗ ಮೂಲದ ಖಾಸಗಿ ಸಂಸ್ಥೆ ಮೊದಲಿನಿಂದಲೂ ಸರಿಯಾಗಿ ಕಾರ್ಯನಿರ್ವಹಿಸಿಲ್ಲ.ಈ ಬಗ್ಗೆ ಸಭೆಯಲ್ಲಿಯೂ  ಸೂಚನೆ ನೀಡಲಾಗಿತ್ತು ಸ್ವತಃ ಜಿಲ್ಲಾ ಪಂಚಾಯ್ತಿ ಸಿಇಓ ಎಚ್ಚರಿಕೆ ನೀಡಿದ್ರಂತೆ.ಅದ್ರು ಸಮಯ ಕೇಳಿ ನಂತ್ರವೂ ಸರಿಪಡಿಸಿಕೊಳ್ಳದೇ ಇದ್ರಿಂದ ಪೊಲೀಸ್ ಕಂಪ್ಲೇಟ್ ನೀಡಲಾಗಿತ್ತು.

ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ ಮಾರ್ಮಿಕ ಹೇಳಿಕೆ

ಅದ್ರೆ ಇದೊಂದು ಸಿವಿಲ್ ಸೂಟ್ ಗೆ ಬರುತ್ತೇ ಕ್ರಿಮಿನಲ್ ಕೇಸ್ ಗೆ ಬರೋಲ್ಲ ಅಂತಾ ಪೊಲೀಸರು ಹಿಂಬರಹ ನೀಡಿದ್ದಾರೆ.ಹೀಗಾಗಿ ಈಗ ಕೇಂದ್ರ ಕಚೇರಿಗೆ ವಂಚನೆ ಮಾಡಿರುವ  ಕಂಪೆನಿ ವಿರುದ್ದ ಕ್ರಮಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ. ಒಟ್ಟಾರೆ ಬಡ ಹಾಗೂ ಮಧ್ಯಮ ರೈತರಿಗೆ ಬಾಡಿಗೆ ಅಧಾರದಲ್ಲಿ ಯಂತ್ರ ನೀಡೋ ಯೋಜನೆಯಂತೂ ಒಳ್ಳೆಯ ಯೋಜನೆಯೇ.ಮೂವತ್ತರಲ್ಲಿ ಹದಿನಾರು ಕಡೆಗಳಲ್ಲಿರೋದು ಈಗ ಮುಚ್ಚಲಾಗಿದೆ.ಅವೆಲ್ಲವೂ ಒಂದೇ ಸಂಸ್ಥೆಗೆ ಸೇರಿದ್ದು.ಈ ವಂಚನೆ ಪ್ರಕರಣ  ಕೃಷಿ ಕೇಂದ್ರ ಕಚೇರಿ ಅಂಗಳಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿಯೂ ಈ ಕಂಪೆನಿ ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕಿರೋ ಅನುಮಾನವೂ ಇದೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ