ಪ್ರಾದೇಶಿಕ ಸಾರಿಗೆ ಇಲಾಖೆ ಸುಪರ್ದಿಗೆ ಖಾಸಗಿ ಬಸ್‌, ಟ್ಯಾಕ್ಸ್ ಉಳಿಸಲು ಐಡಿಯಾ

By Kannadaprabha News  |  First Published Apr 11, 2020, 11:04 AM IST

ಚಿತ್ರದುರ್ಗ ಜಿಲ್ಲೆಯಾದ್ಯಂತ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಖಾಲಿ ನಿವೇಶನ ಸಿಕ್ಕ ಕಡೆಯಲ್ಲೆಲ್ಲ ಬಸ್‌ಗಳು ಸಾಲುಗಟ್ಟಿವೆ. ಈ ಬಸ್‌ಗಳು ಮಾಲೀಕರ ವಶದಲ್ಲಿ ಇರದೆ ಪ್ರಾದೇಶಿಕ ಸಾರಿಗೆ ಇಲಾಖೆ ಸುಪರ್ದಿಗೆ ಒಳಪಟ್ಟಿವೆ ಎಂಬುದು ಚಿತ್ರದುರ್ಗದ ಮಟ್ಟಿಗೆ ವಿಶೇಷ.


ಚಿತ್ರದುರ್ಗ(ಏ.11): ಕೋವಿಡ್‌ 19 ನಿಯಂತ್ರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಸಾರಿಗೆ ಪ್ರಪಂಚ ಸ್ತಬ್ಧಗೊಂಡಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಖಾಲಿ ನಿವೇಶನ ಸಿಕ್ಕ ಕಡೆಯಲ್ಲೆಲ್ಲ ಬಸ್‌ಗಳು ಸಾಲುಗಟ್ಟಿವೆ. ಈ ಬಸ್‌ಗಳು ಮಾಲೀಕರ ವಶದಲ್ಲಿ ಇರದೆ ಪ್ರಾದೇಶಿಕ ಸಾರಿಗೆ ಇಲಾಖೆ ಸುಪರ್ದಿಗೆ ಒಳಪಟ್ಟಿವೆ ಎಂಬುದು ಚಿತ್ರದುರ್ಗದ ಮಟ್ಟಿಗೆ ವಿಶೇಷ.

280 ಬಸ್‌ಗಳಿವೆ:

Latest Videos

undefined

ಚಿತ್ರದುರ್ಗ ಜಿಲ್ಲೆ ಅರೆ ರಾಷ್ಟ್ರೀಕರಣ ಮಾರ್ಗವಾಗಿರುವುದರಿಂದ ಇಲ್ಲಿ ಖಾಸಗಿ ಬಸ್‌ಗಳದ್ದೇ ದರ್ಬಾರು. ಬೆಂಗಳೂರು, ಹುಬ್ಬಳ್ಳಿ, ಬಿಜಾಪುರದ ಕಡೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುವುದನ್ನು ಬಿಟ್ಟರೆ ಉಳಿದ ಪ್ರದೇಶಗಳಿಗೆ ಖಾಸಗಿ ಬಸ್‌ಗಳು ಪ್ರಯಾಣಿಕರ ಕರೆದೊಯ್ಯುತ್ತವೆ. ಬಳ್ಳಾರಿ, ಶಿವಮೊಗ್ಗ, ದಾವಣಗೆರೆಗೆ ಖಾಸಗಿ ಬಸ್‌ಗಳ ಓಡಾಟ ಇಲ್ಲಿ ಮಾಮೂಲು.

ಹಾಗಾಗಿ, ಜಿಲ್ಲೆಯಲ್ಲಿ ಸುಮಾರು 280 ಖಾಸಗಿ ಬಸ್‌ಗಳಿದ್ದು, ಚಿತ್ರದುರ್ಗದ ಪ್ರಾದೇಶಿಕ ಕಚೇರಿಯಲ್ಲಿ ನೋಂದಣಿಯಾಗಿವೆ. ಈ ಎಲ್ಲ ಬಸ್‌ಗಳು ಸದ್ಯಕ್ಕೆ ಓಡಾಟ ನಿಲ್ಲಿಸಿವೆ. ದುಬಾರಿ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಎಲ್ಲ ಮಾಲೀಕರು ಬಸ್‌ಗಳ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸರೆಂಡರ್‌(ಆದ್ಯರ್ಪಿತ) ಮಾಡಿದ್ದಾರೆ.

ಏನಿದು ಸರೆಂಡರ್‌:

ಖಾಸಗಿ ಬಸ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ 47,855 ರು.ರೋಡ್‌ ಟ್ಯಾಕ್ಸ್‌ ಕಟ್ಟುತ್ತವೆ. ಬಸ್‌ ಸಂಚರಿಸಿದರೆ ಮಾತ್ರ ತೆರಿಗೆ ವ್ಯಾಪ್ತಿಗೆ ಅನ್ವಯಿಸುತ್ತದೆ. ಹಾಗಾಗಿ, ಲಾಕ್‌ಡೌನ್‌ ಜಾರಿಯಾದ ತಕ್ಷಣ ಖಾಸಗಿ ಬಸ್‌ಗಳ ಮಾಲೀಕರು ಪ್ರಾದೇಶಿಕ ಸಾರಿಗೆ ಇಲಾಖೆಗೆ ಎಡ ತಾಕಿದ್ದಾರೆ. ಮಾರ್ಚ್‌ 31ರಂದೇ ಬಸ್‌ಗೆ ಸಂಬಂಧಿಸಿದ ಆರ್‌ಸಿ ಪುಸ್ತಕ, ಎಫ್‌ಸಿ, ತೆರಿಗೆಕಾರ್ಡ್‌ , ಇನ್ಸೂರೆನ್ಸ್‌ ಸೇರಿದ ಎಲ್ಲ ಒರಿಜಿನಲ್‌ ದಾಖಲಾತಿಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೈಗೆ ಕೊಟ್ಟು ಬಸ್‌ಗಳ ಸರೆಂಡರ್‌ ಮಾಡಿದ್ದಾರೆ. ಸಾಲದೆಂಬಂತೆ ಬಸ್‌ಗಳ ಎಲ್ಲಿ ನಿಲ್ಲಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ ಪತ್ರ ಬರೆದು ಕೊಟ್ಟು ಬಂದಿದ್ದಾರೆ.

ಔಷಧಿ ಸಿಗದೆ ನರಳಾಟ, ಟಿಕ್‌ಟಾಕ್‌ನಲ್ಲಿ ಮನವಿ: ಮಾನವೀಯತೆ ಮೆರೆದ ಸಿಎಂ !

ಈ ರೀತಿ ಬಸ್‌ಗಳ ಸರೆಂಡರ್‌ ಮಾಡಿದ್ದರಿಂದ ಏಪ್ರಿಲ್‌ ತಿಂಗಳ ತೆರಿಗೆ ಕಟ್ಟುವುದರಿಂದ ಅವರು ಬಚಾವ್‌ ಆಗಿದ್ದಾರೆ. ಹೆಚ್ಚು ಕಡಿಮೆ 18 ಸಾವಿರ ರು.ತೆರಿಗೆ ಹೊರೆ ತಪ್ಪಿಸಿಕೊಂಡಂತಾಗಿದೆ. ಸದ್ಯದ ಸ್ಥಿತಿಯಲ್ಲಿ ಏಪ್ರಿಲ್‌ 30ರವರೆಗೆ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆಗಳಿವೆ. ಹಾಗಾಗಿ, ಮೂರು ತಿಂಗಳಿಗೊಮ್ಮೆ ಕಟ್ಟುವ ತೆರಿಗೆಯಲ್ಲಿ ಖಾಸಗಿ ಬಸ್‌ಗಳ ಮಾಲೀಕರಿಗೆ ಒಂದು ತಿಂಗಳ ರಿಯಾಯಿತಿ ದೊರೆಯುತ್ತದೆ.

click me!