ದೆಹಲಿಯಿಂದ ಸೋಗಾನೆ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ ವಿಶೇಷ ಭದ್ರತಾ ಪಡೆ!

By Kannadaprabha News  |  First Published Feb 24, 2023, 9:26 AM IST

ಪ್ರಧಾನಿ ಭದ್ರತಾ ಪಡೆಯ ಮೊದಲ ತಂಡ ಗುರುವಾರ ಶಿವಮೊಗ್ಗಕ್ಕೆ ಆಗಮಿಸಿದೆ. ವಾಯುಪಡೆ ವಿಮಾನದಲ್ಲಿ ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.


ಶಿವಮೊಗ್ಗ (ಫೆ.24) : ಪ್ರಧಾನಿ ಭದ್ರತಾ ಪಡೆಯ ಮೊದಲ ತಂಡ ಗುರುವಾರ ಶಿವಮೊಗ್ಗಕ್ಕೆ ಆಗಮಿಸಿದೆ. ವಾಯುಪಡೆ ವಿಮಾನದಲ್ಲಿ ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಭಾರತೀಯ ವಾಯು ಸೇನೆ(Indian Air Force)ಯ ಕ್ಯಾರಿಯರ್‌ ವಿಮಾನದಲ್ಲಿ ದೆಹಲಿಯಿಂದ ಭದ್ರತಾ ಪಡೆಗಳ ತಂಡ(security forces team) ಆಗಮಿಸಿತು. ವಿಮಾನದಲ್ಲಿ ನಾಲ್ಕು ಕಾರುಗಳ ಸಹಿತ ಹಲವು ಸಿಬ್ಬಂದಿ ಆಗಮಿಸಿದರು. ವಾಯುಸೇನೆಯ ಇಲ್ಯೂಷಿನ್‌ 76 ವಿಮಾನದಿಂದ ನಾಲ್ಕು ಕಾರುಗಳನ್ನು ಕೆಳಗಿಳಿಸಿ ಪರಿಶೀಲನೆ ಆರಂಭಿಸಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಸೇರಿ ಪ್ರಮುಖ ಅಧಿಕಾರಿಗಳನ್ನು ಎಸ್‌ಪಿಜಿ ತಂಡ ಭೇಟಿಯಾಯಿತು. ಬಳಿಕ ವಿಮಾನ ನಿಲ್ದಾಣದ ಟರ್ಮಿನಲ್‌ ಪರಿಶೀಲನೆ ನಡೆಸಿತು. ಅಲ್ಲಿಂದ ನೇರವಾಗಿ ತಮ್ಮ ವಾಹನಗಳ ಮೂಲಕವೇ ಶಿವಮೊಗ್ಗ ನಗರಕ್ಕೆ ತಂಡ ತೆರಳಿತು.

Tap to resize

Latest Videos

Shivamogga airport: ಉದ್ಘಾಟನೆಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಆಹ್ವಾನಿಸಿದ ಕೇಂದ್ರ ವಿಮಾನಯಾನ ಸಚಿವ

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಫೆ.27ರಂದು ವಿಮಾನ ನಿಲ್ದಾಣದ ಉದ್ಘಾಟನೆ(Shivamogga airport inauguration) ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಸೋಗಾ​ನೆಗೆ ಬಂದ 2ನೇ ವಿಮಾನ:

ವಿಮಾನ ನಿಲ್ದಾಣಕ್ಕೆ ಗುರುವಾರ ಆಗ​ಮಿ​ಸಿದ ಇಂಡಿಯನ್‌ ಏರ್‌ಫೋ​ರ್ಸ್ ಎರಡನೇ ವಿಮಾನವಾಗಿದೆ. ರಷ್ಯಾ ನಿರ್ಮಿತ ಇಲ್ಯೂಷಿನ್‌ 76(Illusion 76) ಮಾದರಿಯ ವಿಮಾನ. ಭಾರತೀಯ ವಾಯು ಸೇನೆಯಲ್ಲಿ ಕ್ಯಾರಿಯರ್‌ ವಿಮಾನ ಇದಾ​ಗಿ​ದೆ. ಸೇನೆಗೆ ಅಗತ್ಯವಿರುವ ಸರಕು ಸಾಗಣೆಗೆ ಈ ವಿಮಾನ ಬಳಕೆ ಆಗುತ್ತದೆ. ಬೆಳಗ್ಗೆ 11.30ರ ಹೊತ್ತಿಗೆ ವಿಮಾನವು ಶಿವಮೊಗ್ಗಕ್ಕೆ ಆಗಮಿಸಿತು. ಫೆ.21ರಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಾಯುಸೇನೆ ಇಂಡಿಯಾ-1 ವಿಮಾನ ಆಗಮಿಸಿತ್ತು. ದೆಹಲಿಯಿಂದ ಬಂದಿದ್ದ ಇಂಡಿಯಾ-1 ವಿಮಾನ(India-1 flight) ರನ್‌ ವೇ ಮೇಲೆ ವಿವಿಧ ಬಗೆಯ ಲ್ಯಾಂಡಿಂಗ್‌ ಪರೀಕ್ಷೆಗಳ​ನ್ನು ನಡೆಸಿತ್ತು. ಮೊದಲ ಟ್ರಯಲ್‌ ರನ್‌ ಯಶಸ್ವಿಯಾಗಿದೆ. ಇವತ್ತು ಎರಡನೇ ವಿಮಾನ ಬಂದಿಳಿದಿದೆ.

Kuvempu Airport: ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

click me!