PM Narendra Modi: ಇಂದು ಕೊಡೇಕಲ್‌ ಗ್ರಾಮಕ್ಕೆ ಪ್ರಧಾನಿ ಮೋದಿ ಆಗಮನ; ಜಿಲ್ಲಾಧಿಕಾರಿ ಸ್ನೇಹಲ್‌ ಸುದ್ದಿಗೋಷ್ಠಿ

By Kannadaprabha NewsFirst Published Jan 19, 2023, 8:10 AM IST
Highlights

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜ.19 ರಂದು ಗುರುವಾರ ಯಾದಗಿರಿ ಜಿಲ್ಲೆಯ ಕೊಡೇಕಲ್‌ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸರಕಾರದ ವಿವಿಧÜ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ. ಸ್ನೇಹಲ್‌ ಆರ್‌. ತಿಳಿಸಿದರು.

ಕೊಡೇಕಲ್‌/ಹುಣಸಗಿ (ಜ.19) : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜ.19 ರಂದು ಗುರುವಾರ ಯಾದಗಿರಿ ಜಿಲ್ಲೆಯ ಕೊಡೇಕಲ್‌ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸರಕಾರದ ವಿವಿಧÜ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ. ಸ್ನೇಹಲ್‌ ಆರ್‌. ತಿಳಿಸಿದರು.

ಪ್ರಧಾನಿ ಮೋದಿ(PM Narendra Modi) ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಕುರಿತು ಕೊಡೇಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.19 ರಂದು ಬೆ.11ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋಟ್‌(Thawarchand GehlotThawarchand Gehlot) ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಒಟ್ಟು 10,500 ಕೋಟಿ ರು.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಕಲಬುರಗಿಗೆ ಮೋದಿ ಆಗಮನ ಹಿನ್ನೆಲೆ; ಇದು ಚುನಾವಣೆ ಗಿಮಿಕ್ ಎಂದ ರಾಠೋಡಕಲಬುರಗಿಗೆ ಮೋದಿ ಆಗಮನ ಹಿನ್ನೆಲೆ; ಇದು ಚುನಾವಣೆ ಗಿಮಿಕ್ ಎಂದ ರಾಠೋಡ

ದೇಶದಲ್ಲಿಯೇ ಪ್ರಥಮವಾಗಿ ಸ್ಕಾಡಾ ತಂತ್ರಜ್ಞಾನ ಬಳಸಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ 5.50 ಲಕ್ಷ ಹೆಕ್ಟೇರ್‌ ರೈತರ ನೀರಾವರಿ ಪ್ರದೇಶಗಳಿಗೆ ನೀರುಣಿಸಲು ನೆರವಾದ ಎಡದಂಡೆ ಕಾಲುವೆಯ ಜಾಲದ ವಿಸ್ತರಣೆ ಮತ್ತು ಅತ್ಯಾಧುನಿಕ ರಿಮೋಟ್‌ ತಂತ್ರಜ್ಞಾನದ ಗೇಟ್‌ಗಳ 4699 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಮಗಾರಿಯ ಉದ್ಘಾಟನೆ ಹಾಗೂ ಜಲಧಾರೆ ಯೋಜನೆ ಅಡಿಯಲ್ಲಿ 2004 ಕೋಟಿ ರು.ಗಳ ವೆಚ್ಚದಲ್ಲಿ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಶಂಕು ಸ್ಥಾಪನೆ ಹಾಗೂ ಭಾರತ ಮಾಲಾ ಯೋಜನೆಯಡಿಯಲ್ಲಿ ಅಂದಾಜು 2000 ಕೋಟಿ ರು.ಗಳ ವೆಚ್ಚದಲ್ಲಿ ಸೂರತ್‌-ಚೆನ್ನೈ ಹೆದ್ದಾರಿ ನಿರ್ಮಾಣ (ನಿಂಬಾಳ ನಿಂದ ಸಿಂಗನೋಡಿಗೆ) 6 ಪಥ ಗ್ರೀನ್‌ ಫೀಲ್ಡ್‌ ಎಕ್ಸಪ್ರೆಸ್‌ ವೇ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.

ಗಡಿ ವಿಭಾಗದ 3 ಪ್ಯಾಕೇಜ್‌ ಒಳಗೊಂಡಿದ್ದ ಈ ಯೋಜನೆ ಇದಾಗಿದೆ. ಈ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾಗಿದ್ದು, ಈಗಾಗಲೇ ಸರ್ಕಾರದಿಂದ ಕಾರ್ಯಕ್ರಮ ಆಯೋಜನೆಗಾಗಿ ಒಟ್ಟು 10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸುವ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಜನರು ಗುರುವಾರ ಬೆ.10 ಗಂಟೆಯೊಳಗಾಗಿ ಕಾರ್ಯಕ್ರಮದ ವೇದಿಕೆಯ ಸ್ಥಳದಲ್ಲಿ ಹಾಜರಿರಬೇಕು. ಒಟ್ಟು 1 ಲಕ್ಷ 20 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟುಆಸನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

PM Narendra Modi: ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಶಾಸಕ ರಾಜೂಗೌಡ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ

ಈ ಸಂದರ್ಭದಲ್ಲಿ ಯಾದಗಿರಿ ಜಿಪಂ ಕಾರ್ಯನಿರ್ವಾಹಕ ಅಧಿ​ಕಾರಿ ಅಮರೇಶ ಆರ್‌. ನಾಯ್ಕ, ಹುಣಸಗಿ ತಹಸೀಲ್ದಾರ್‌ ಜಗದೀಶ ಚೌರ್‌, ಕೆಬಿಜೆಎನೆಲ್‌ ಸಿಇ ಮಂಜುನಾಥ ಇತರರಿದ್ದರು.

click me!