ಬಾಗಲಕೋಟೆ: ಮೈಕೈ ನೋವಿಗೆ ಕೊಡಲಿ ಏಟು ನೀಡುತ್ತಿದ್ದ ಪೂಜಾರಿ ಬಂಧನ..!

Published : Jul 14, 2024, 06:30 AM IST
ಬಾಗಲಕೋಟೆ: ಮೈಕೈ ನೋವಿಗೆ ಕೊಡಲಿ ಏಟು ನೀಡುತ್ತಿದ್ದ ಪೂಜಾರಿ ಬಂಧನ..!

ಸಾರಾಂಶ

ಜಕ್ಕಪ್ಪ ಸಿದ್ದಪ್ಪ ಪೂಜಾರಿ ಬಂಧಿತ ಆರೋಪಿ. ಈತನ ಬಳಿ ಮೈ, ಕೈ ನೋವು ಎಂದು ಬರುವ ಭಕ್ತರಿಗೆ ನೋವಾಗುವ ಭಾಗಕ್ಕೆ ಭಂಡಾರ ಹಚ್ಚಿ ಕೊಡಲಿಯಿಂದ ಹೊಡೆಯುತ್ತಿದ್ದ. ಪೂಜಾರಿ ಭಕ್ತನಿಗೆ ಕೊಡಲಿ ಏಟು ನೀಡುವ ದೃಶ್ಯ ವೈರಲ್ ಆಗಿದೆ.   

ಲೋಕಾಪುರ(ಜು.14):  ಮೈ, ಕೈ ನೋವು ಎಂದು ಬರುವ ಭಕ್ತರಿಗೆ ಕೊಡಲಿಯಿಂದ ಹೊಡೆದು ನೋವು ನಿವಾ ರಿಸುವುದಾಗಿ ಮೌಡ್ಯಾಚರಣೆ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಕ್ಕಪ್ಪ ಸಿದ್ದಪ್ಪ ಪೂಜಾರಿ ಬಂಧಿತ ಆರೋಪಿ. ಈತನ ಬಳಿ ಮೈ, ಕೈ ನೋವು ಎಂದು ಬರುವ ಭಕ್ತರಿಗೆ ನೋವಾಗುವ ಭಾಗಕ್ಕೆ ಭಂಡಾರ ಹಚ್ಚಿ ಕೊಡಲಿಯಿಂದ ಹೊಡೆಯುತ್ತಿದ್ದ.ಪೂಜಾರಿಭಕ್ತನಿಗೆಕೊಡಲಿ ಏಟು ನೀಡುವ ದೃಶ್ಯ ವೈರಲ್ ಆಗಿದೆ. 

ಮುಧೋಳ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ, 4 ಲಾಡ್ಜ್‌ಗಳ ಮೇಲೆ ದಾಳಿ, 11 ಯುವತಿಯರ ರಕ್ಷಣೆ

ಹೊಡೆದ ಏಟಿಗೆ ಕೊಡಲಿ ಭಕ್ತನ ದೇಹದೊಳಗೆ ಹೋಗಿದ್ದು, ಹೊರತೆಗೆಯಲು ಪೂಜಾರಿ ಕಷ್ಟ ಪಡುತ್ತಿರುವುದನ್ನು ನೋಡಬಹುದು. ಇದನ್ನು ಅಂತ ಲೋಕಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!