ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಡ್ಯಾಂ ಭರ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇರ ಳದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಹರಿವು ಚೆನ್ನಾಗಿದೆ. 2284 ಅಡಿ ಗರಿಷ್ಠಮಟ್ಟದ ಈ ಜಲಾಶಯದ ಮಟ್ಟ ಇದೀಗ 2283.30 ಅಡಿ ತಲುಪಿದ್ದು, 19,181 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಎಚ್.ಡಿ.ಕೋಟೆ(ಜು.14): ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯ ಶನಿವಾರ ಬಹುತೇಕ ಭರ್ತಿಯಾಗಿದೆ.
ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಡ್ಯಾಂ ಭರ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇರ ಳದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಹರಿವು ಚೆನ್ನಾಗಿದೆ.
undefined
ಭಾರೀ ಮಳೆ: ಕರ್ನಾಟಕದ ಡ್ಯಾಂಗಳಲ್ಲಿ ಕಳೆದ ಸಲಕ್ಕಿಂತ ಈ ಬಾರಿ ಶೇ.25 ಹೆಚ್ಚು ನೀರು
2284 ಅಡಿ ಗರಿಷ್ಠಮಟ್ಟದ ಈ ಜಲಾಶಯದ ಮಟ್ಟ ಇದೀಗ 2283.30 ಅಡಿ ತಲುಪಿದ್ದು, 19,181 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ.