ಮಹಾಮಾರಿ ಕೊರೋನಾಗೆ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಬಲಿ

By Kannadaprabha NewsFirst Published Jul 20, 2020, 2:26 PM IST
Highlights

ಕೊರೋನಾ ಮಹಾಮಾರಿಗೆ ನಂಜನಗೂಡು ತಾಲೂಕಿನಲ್ಲಿ ಮತ್ತೊಂದು ಬಲಿ| ಕಳೆದ ಕೆಲ ದಿನಗಳ ಹಿಂದೆ ಅಧಿಕ ಜ್ವರದಿಂದ ಬಳಲುತ್ತಿದ್ದ ಅರ್ಚಕ| ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಅರ್ಚಕರಿಗೆ ಕೊರೋನಾ ಸೋಂಕು ಇರುವುದು ಪತ್ತೆ| ಅರ್ಚಕರಿಗೆ ಸಕ್ಕರೆ ಕಾಯಿಲೆ ಮತ್ತು ಬಿಪಿ ಇತ್ತು. ಶನಿವಾರ ರಾತ್ರಿ ಸಾವು|

ನಂಜನಗೂಡು(ಜು.20): ಇಲ್ಲಿನ ನೀಲಕಂಠನಗರದ 53 ವರ್ಷದ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಭಾನುವಾರ ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ಇದುವರೆಗೆ 3 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಅಧಿಕ ಜ್ವರದಿಂದ ಬಳಲುತ್ತಿದ್ದ ಇವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗುತ್ತಿದ್ದಂತೆ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಸಕ್ಕರೆ ಕಾಯಿಲೆ ಮತ್ತು ಬಿಪಿ ಇತ್ತು. ಶನಿವಾರ ರಾತ್ರಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

'ಇನ್ಮುಂದೆ ಲಾಕ್‌ಡೌನ್ ಇಲ್ಲ, ಇನ್ನೇನಿದ್ರೂ ಸೀಲ್‌ಡೌನ್ ಮಾತ್ರ'

ಮೃತದೇಹವನ್ನು ಕೋವಿಡ್‌ ನಿಯಮಾನುಸಾರ ಜಿಲ್ಲಾಡಳಿತವೇ ಅಂತ್ಯ ಸಂಸ್ಕಾರ ನೆರವೇರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭಾ ಸಿಬ್ಬಂದಿ ಮೃತರ ನಿವಾಸದ ಸುತ್ತ ಸ್ಯಾನಿಟೈಜ್‌ ಮಾಡಿದರು. ತಾಲೂಕಿನಲ್ಲಿ ಭಾನುವಾರ ಮತ್ತೆರಡು ಹೊಸ ಪ್ರಕರಣಗಳು ಕಂಡು ಬಂದಿದ್ದು, ತಾಲೂಕಿನ ಹಳ್ಳಿಕೆರೆಹುಂಡಿ ಗ್ರಾಮದ 74 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಮೈಸೂರಿನ ರಾಜೀವ್‌ ನಗರದ ಗರ್ಭಿಣಿ ನಗರದ ದೇವಿರಮ್ಮನಹಳ್ಳಿ ಬಡಾವಣೆಯ ತಾಯಿ ಮನೆಗೆ ಆಗಮಿಸಿದ್ದು ಅವರಲ್ಲಿ ಸೋಂಕು ದೃಢಪಟ್ಟಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 

click me!