ಲಾಕ್ ಡೌನ್ ವಿಸ್ತರಣೆಗೆ ಬೇಸತ್ತು ನೇಣು ಬಿಗಿದು ಅರ್ಚಕ ಆತ್ಮಹತ್ಯೆ..!

By Suvarna NewsFirst Published Apr 15, 2020, 2:04 PM IST
Highlights
ಲಾಕ್‌ ಡೌನ್ ವಿಸ್ತರಣೆಯ ಹಿನ್ನಲೆಯಲ್ಲಿ ಊರಿಗೆ ಅಗಮಿಸಲಾಗದೇ‌‌ ಕಾರ್ಕಳದ ಅರ್ಚಕನೋರ್ವ ನೊಂದು ಮುಂಬೈಯ ಕಾಂದಿವಿಲಿ ದೇವಸ್ಥಾನದ ವಠಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆಯೊಂದು ಮಂಗಳವಾರ ನಡೆದಿದೆ.

 
ಕಾರ್ಕಳ(ಏ.15) : ಲಾಕ್‌ ಡೌನ್ ವಿಸ್ತರಣೆಯ ಹಿನ್ನಲೆಯಲ್ಲಿ ಊರಿಗೆ ಅಗಮಿಸಲಾಗದೇ‌‌ ಕಾರ್ಕಳದ ಅರ್ಚಕನೋರ್ವ ನೊಂದು ಮುಂಬೈಯ ಕಾಂದಿವಿಲಿ ದೇವಸ್ಥಾನದ ವಠಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆಯೊಂದು ಮಂಗಳವಾರ ನಡೆದಿದೆ.

ಮೂಲತ ಕಾರ್ಕಳ ನೀರೆ ಬೈಲೂರು ನಿವಾಸಿ ಕೃಷ್ಣ ಶಾಂತಿ (37) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕಳೆದ ಮಾಚ್: 17ರಂದು ಕಾರ್ಕಳದಿಂದ ಮುಂಬಯಿಯ ಕಾಂಧಿವಲಿ ಏರಿಯಾದಲ್ಲಿರುವ ಮಹಾಕಾಳಿ ದೇವಸ್ಥಾನದಲ್ಲಿ ತಾತ್ಕಾಲಿಕ ವಾಗಿ ಬದಲಿ ಅರ್ಚಕ ರಾಗಿ ಕೆಲಸಕ್ಕೆ‌ ತೆರಳಿದ್ದು ಬಳಿಕ ಲಾಕ್ ಡೌನ್ ವಿಸ್ತರಣೆ ಪರಿಣಾಮ ಅತ್ತ ಕೆಲಸ ಕಾರ್ಯವಿಲ್ಲದೆ, ಇತ್ತ ಊರಿಗೂ ಬಾರಲಾಗದೇ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ

ಅವರು ‌‌ ಈ ಹಿಂದೆ ಕಾರ್ಕಳ ಬೈಲೂರು ವ್ಯಾಪ್ತಿಯಲ್ಲಿ ಸಹೋದರ ಸುಖೇಶ್ ಎಂಬುವರ ಜೊತೆ ಪೂಜಾ ಕೈಂಕರ್ಯ ಕೆಲಸಗಳಿಗೆ ಭಾಗವಹಿಸುತ್ತಿದ್ದು. ಬಳಿಕ ಕಳೆದ ಮಾಚ್ 17ರಂದು ಮಿಯ್ಯಾರು ಗ್ರಾಮದ ಪ್ರಶಾಂತ್ ಎಂಬುವರು ಮುಂಬೈನ ಯಲ್ಲಿನ ದೇವಸ್ಥಾನದ ತಾತ್ಕಾಲಿಕ ಪೂಜೆ ಮಾಡುವಂತೆ ವಿನಂತಿ ಕೊಂಡಿದ್ದರು.

ಅದರಂತೆ ಅವರು ಮುಂಬೈಯಿಗೆ ತೆರಳಿದ್ದಾರೆ. ಅಲ್ಲಿ ದೇವಸ್ಥಾನದ ವತಿಯಿಂದ ನೀಡಿದ ಕೊಠಡಿಯಲ್ಲಿ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಮಂಗಳವಾರ ದೇವಸ್ಥಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಪ್, ಸಿಪ್, ಸಿಪ್.. ಎಣ್ಣೆ ಬೇಕಾ ಎಣ್ಣೆ?ಕಿಲಾಡಿ ಯುವಕನಿಗೆ ಪೊಲೀಸ್ರು ಹಚ್ಚಿದ್ರು ಬೆಣ್ಣೆ!

ಮುಂಬಾಯಿಯ ಕಾಂದಿವಲಿಯ ಭದ್ರಕಾಳಿ ದೇವಸ್ಥಾನದ ‌ಪೂಜೆಗೆ ತೆರಳಿದ್ದರು. ಬಳಿಕ ಆ‌ ಭಾಗದಲ್ಲಿನ ಕೆಲವೊಂದು ಸಣ್ಣ ಪುಟ್ಟ ಪುಜಾ ಕೆಲಸಗಳನ್ನು ನೇರವೇರಿಸಿ ಬಳಿಕ ದೇವಸ್ಥಾನದ ಪೂಜೆಗೆ ಅಗಮಿಸುತ್ತಿದ್ದರು ಎಂದು ಸಹೋದರ ಸುಖೇಶ್ ತಿಳಿಸಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

"
click me!