ಟ್ರ್ಯಾಕ್ಟರ್‌ ಹರಿಸಿ 2 ಎಕರೆ ಎಲೆಕೋಸು ನಾಶಪಡಿಸಿದ ರೈತ

By Kannadaprabha News  |  First Published Mar 24, 2021, 7:35 AM IST

ಬೆಲೆ ಕುಸಿತದಿಂದ ನೊಂದ ರೈತ ಸುಮಾರು ಎರಡು ಎಕರೆಯಷ್ಟು ಎಲೆಕೋಸನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಬೆಲೆ ಇಲ್ಲದ ಕಾರಣ ಈ ರೀತಿ ಮಾಡಿದ್ದಾರೆ. 


ಚಿಕ್ಕಮಗಳೂರು (ಮಾ.24): ಎಲೆಕೋಸು ಬೆಲೆ ಕುಸಿತದಿಂದ ಕಂಗಲಾಗಿರುವ ರೈತನೋರ್ವ ತನ್ನ ಹೊಲದಲ್ಲಿ ಬೆಳೆದಿದ್ದ ಬೆಳೆಯ ಮೇಲೆ ಟ್ರ್ಯಾಕ್ಟರ್‌ ಹೊಡೆದು ನಾಶಪಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 

ರೈತ ಬಸವರಾಜ್‌ ಅವರು ತಮ್ಮ 2 ಎಕರೆ ಹೊಲದಲ್ಲಿ ಸುಮಾರು .40 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಫಸಲು ಕೈಗೆ ಬಂದಿತಾದರೂ ಒಳ್ಳೆಯ ಬೆಲೆ ಇಲ್ಲದ್ದರಿಂದ ಎಲೆಕೋಸನ್ನು ಕೀಳದೆ ಹೊಲದಲ್ಲೇ ಬಿಟ್ಟು ಅದರ ಮೇಲೆ ಟ್ರ್ಯಾಕ್ಟರ್‌ ಹೊಡೆದು ನಾಶಪಡಿಸಿದರು. 

Tap to resize

Latest Videos

ರೈತರಿಗೆ ಕಹಿಯಾದ ಹುಣಸೆ : ಭಾರೀ ದರ ಕುಸಿತ

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಎಲೆಕೋಸು ಬೆಲೆ ಕೆ.ಜಿ.ಗೆ 45 ರುಪಾಯಿ ಇತ್ತು. ಈಗ 6 ರುಪಾಯಿಗೆ ಕುಸಿದಿದೆ ಹೀಗಾಗಿ ರೈತರು ತಾವು ಬೆಳೆದ ಫಸಲನ್ನು ತಮ್ಮ ಕೈಯಾರೆ ನಾಶಪಡಿಸುವ ಸ್ಥಿತಿಗೆ ಬಂದಿದ್ದಾರೆ.
 

click me!