Ballari News: ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕು ಮಂಡನೆ

Published : Oct 16, 2022, 02:58 PM ISTUpdated : Oct 16, 2022, 03:08 PM IST
Ballari News: ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕು ಮಂಡನೆ

ಸಾರಾಂಶ

ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕು ಮಂಡನೆ ಹೊಸಪೇಟೆ ಕಸಾಪ ಅಧ್ಯಕ್ಷ ಡಾ. ನಾಯಕರ ಹುಲುಗಪ್ಪ ವಿಜಯನಗರ ಜಿಲ್ಲಾಮಟ್ಟದ ದಸರಾ ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ/

 ಹೊಸಪೇಟೆ (ಅ.16) : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಿನ ಬಾರಿ ಹೊಸಪೇಟೆಯಲ್ಲಿ ನಡೆಸಲು ಹಕ್ಕು ಮಂಡಿಸಲಾಗುವುದು. ವಿಜಯನಗರ ಜಿಲ್ಲೆ ರಚನೆಯಾಗಿ ಒಂದು ವರ್ಷ ಸಂದಿದೆ. ಹಾಗಾಗಿ ಹಾವೇರಿ ಸಮ್ಮೇಳನದ ಬಳಿಕ ಹೊಸಪೇಟೆಯಲ್ಲಿ ಸಮ್ಮೇಳನಕ್ಕೆ ಆಗ್ರಹಿಸಲಾಗುವುದು ಎಂದು ಕಸಾಪ ಹೊಸಪೇಟೆ ಘಟಕದ ಅಧ್ಯಕ್ಷ ಡಾ. ನಾಯಕರ ಹುಲುಗಪ್ಪ ಹೇಳಿದರು.

ನ.11ಕ್ಕೆ ಹಾವೇರಿ ಸಾಹಿತ್ಯ ಸಮ್ಮೇಳನ ಅಸಾಧ್ಯ: ಮಹೇಶ್‌ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತಿನ ಹೊಸಪೇಟೆ ಘಟಕ ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದಸರಾ ಜಿಲ್ಲಾ ಮಟ್ಟದ ಕಥಾ ಸ್ಪರ್ಧೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಬಳ್ಳಾರಿ ಜಿಲ್ಲಾ ಘಟಕದಿಂದ ಸ್ವತಂತ್ರ ಘಟಕವಾಗುವುದರ ಬಗ್ಗೆ ಮಾತುಕತೆಯೂ ನಡೆದಿದೆ.ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸಂಪನ್ಮೂಲ ಜಿಲ್ಲೆಯಲ್ಲಿದೆ.ಸಮ್ಮೇಳನ ನಡೆಸುವಷ್ಟುಜಿಲ್ಲೆ ಶಕ್ತವಾಗಿದೆ. ಹಾಗಾಗಿ ಮುಂದಿನ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕು ಮಂಡಿಸಲಾಗುವುದು. ಇದಕ್ಕೆ ಜಿಲ್ಲೆ ಎಲ್ಲ ಸಂಘಸಂಸ್ಥೆಗಳು ಸಾಥ್‌ ನೀಡಬೇಕು.ಜತೆಗೆ ಹಿರಿಯ ಹಾಗು ಯುವ ಸಾಹಿತಿಗಳು ಕೂಡ ಬೆಂಬಲ ನೀಡಬೇಕು ಎಂದರು.

ಕನ್ನಡದ ಕಥೆಗಳು ಜನ್ಮ ತಳೆದಿದ್ದೇ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕೋಗಳಿ ಗ್ರಾಮದಲ್ಲಿ, ವಡ್ಡಾರಾಧನೆ ಬರೆದ ಶಿವಕೋಟಾಚಾರ್ಯ ಈ ಗ್ರಾಮದವರು. ಕನ್ನಡ ಭಾಷೆಯಲ್ಲಿ ಕಥಾ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ಇದೆ. ಹಾಗಾಗಿ ನಾವು ಕಥಾಸ್ಪರ್ಧೆ ನಡೆಸಿದ್ದೇವೆ. ಈಗ ಜಿಲ್ಲಾ ಮಟ್ಟದ ಕಥಾಸ್ಪರ್ಧೆ ನಡೆಸಿದ್ದೇವೆ. ಮುಂದೆ, ಕಲ್ಯಾಣ ಕರ್ನಾಟಕ,ಉತ್ತರ ಕರ್ನಾಟಕ ಮತ್ತು ರಾಜ್ಯಮಟ್ಟದ ಕಥಾಸ್ಪರ್ಧೆ ಆಯೋಜಿಸುತ್ತೇವೆ. ಈ ಕಥಾ ಸ್ಪರ್ಧೆಗೆ ಹೆಚ್ಚಿನ ಸ್ಪಂದನೆ ದೊರೆತಿದೆ. 40ಕ್ಕೂ ಅಧಿಕ ಕಥೆಗಳು ಬಂದಿವೆ ಎಂದರು.

ಗ್ರೇಡ್‌-2 ತಹಸೀಲ್ದಾರ್‌ ವೆಂಕಟೇಶ್‌ ಆಶ್ರಿತ್‌ ಮಾತನಾಡಿ, ಮೊಬೈಲ್‌,ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಕಳೆದು ಹೋಗುತ್ತಿರುವ ಯುವಕರನ್ನು,ಮಕ್ಕಳನ್ನು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಉತ್ತೇಜಿಸುವುದು ಅವಶ್ಯವಿದೆ.ವಿಜಯನಗರ ಜಿಲ್ಲೆಗೆ ಭವ್ಯ ಪರಂಪರೆಯಿದೆ,ಕಲೆ, ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ವಿಜಯನಗರ ಜಿಲ್ಲೆ ಕೊಡುಗೆ ಅನುಪಮವಾದುದು ಎಂದರು. ರಾಘವೇಂದ್ರ ಆಚಾರ್‌ ಮಾತನಾಡಿ, ಕನ್ನಡ ಭಾಷೆಯನ್ನು ಬಳಸಿದರೆ ಉಳಿಯುತ್ತದೆ.ಇಂಗ್ಲಿಷ್‌ ವ್ಯಾಮೋಹದಿಂದ ಹೊರಬಂದು ಮಾತೃಭಾಷೆಯನ್ನು ಬಳಸುವುದು ಅವಶ್ಯ.ಭಾಷೆಯ ಉಳಿವಿಗೆ ಸಾಂಘಿಕ ಪ್ರಯತ್ನ ಅಗತ್ಯ ಎಂದರು. ಡಾ. ಸುಲೋಚನಾ ಮಾತನಾಡಿ, ಯುವ ಸಾಹಿತಿಗಳನ್ನು ಬೆಳೆಸುವ ಹಾಗು ಪೋ›ತ್ಸಾಹಿಸುವ ಕೆಲಸ ಮಾಡಬೇಕು. ಇದಕ್ಕೆ ನಾನು ಸದಾ ಬೆಂಬಲ ನೀಡುವೆ ಎಂದರು.

ಪತ್ರಕರ್ತ ಕೃಷ್ಣ ಎನ್‌. ಲಮಾಣಿ ಮಾತನಾಡಿ,ಕಥೆಗಳು ಜೀವನ ಅನುಭವದಿಂದ ಜನ್ಮ ತಳೆಯುತ್ತವೆ.ಮಹಲುಗಳಲ್ಲಿ ಕಥೆಗಳು ಹುಟ್ಟುವುದಿಲ್ಲ.ಗುಡಿಸಲು, ಕೇರಿ, ತಾಂಡಾ, ಕ್ಯಾಂಪ್‌, ಕಾಲನಿಗಳಲ್ಲಿ ಕಥೆಗಳು ಹುಟ್ಟುತ್ತವೆ. ಪ್ರತಿಭಾವಂತರನ್ನು ಗುರುತಿಸಿ,ಬೆಳೆಸುವ ಕಾರ್ಯ ಮಾಡಬೇಕು ಎಂದರು.

ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ

ಸಾಹಿತಿಗಳಾದ ಹಾಲ್ಯಾ ನಾಯ್ಕ, ಆರ್‌.ಹನುಮ ನಾಯ್ಕ ಕಥೆಗಳ ಕುರಿತು ಮಾತನಾಡಿದರು. ಕಥಾ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ಕೃಷ್ಣ ಎನ್‌.ಲಮಾಣಿ (ಪ್ರಥಮ),ಡಾ.ಎರ್ರಿಸ್ವಾಮಿ ಹೊನ್ನಳ್ಳಿ (ದ್ವಿತೀಯ),ನಿಖಿಲ್‌ಕುಮಾರ್‌ ವಿ.ಎಸ್‌. ತೃತೀಯ ಸ್ಥಾನಗಳಿಸಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಬಿ.ಎಸ್‌.ಬಿಂದು (ಪ್ರಥಮ),ಎಸ್‌.ವಿಶಾಲಾಕ್ಷಿ (ದ್ವಿತೀಯ), ಕೆ.ಅಮೃತ (ತೃತೀಯ). ಪದವಿ ಪೂರ್ವ ವಿಭಾಗದಲ್ಲಿ ಎಲ್‌.ಸಹನಾ (ಪ್ರಥಮ),ಕೆ.ಎನ್‌.ವಿಕಾಸ್‌ (ದ್ವಿತೀಯ),ಎಚ್‌.ದಿವ್ಯಾ (ತೃತೀಯ). ಪದವಿ ವಿಭಾಗದಲ್ಲಿ ತ್ರಿವೇಣಿ.ಬಿ. (ಪ್ರಥಮ), ಸುಚಿತ್ರ ವಿ.ಕೆ. (ದ್ವಿತೀಯ). ಜತೆಗೆ ಅಜ್ಜಮ್ಮ, ಕೆ.ಸ್ವಾತಿ, ಸಂತೋಷ್‌ ಗಾಣಿಗಟ್ಟೆ, ಆರ್‌.ಹರೀಶ್‌ ಆಯಾ ವಿಭಾಗದಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದಿದ್ದು, ವಿಜೇತರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಾಲೆಯ ಕಾರ್ಯದರ್ಶಿ ಸರಳಾ ಪಾಂಡುರಂಗಶೆಟ್ಟಿದೊಡ್ಡಮನಿ, ಶಿಕ್ಷಕಿ ಕೆ. ರೇಷ್ಮಾ, ಕಸಾಪ ಕಾರ್ಯದರ್ಶಿ ಪ್ರಕಾಶ್‌, ಶಿಕ್ಷಕ ಬಸವರಾಜ ಮತ್ತಿತರರಿದ್ದರು.

PREV
Read more Articles on
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!