ಕೋಟೆ ಕೆರೆ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಿ: ವರಸಿದ್ಧಿ

By Kannadaprabha News  |  First Published Oct 1, 2022, 10:25 AM IST
  1. ಕೋಟೆ ಕೆರೆ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಿ: ವರಸಿದ್ಧಿ
  2. ನಗರಸಭೆ, ಪೊಲೀಸ್‌ ಇಲಾಖೆ, ಸಿಡಿಎ, ನೂರಾರು ಕಾರ್ಯಕರ್ತರಿಂದ ಸಾಮೂಹಿಕ ಸ್ವಚ್ವತಾ ಅಭಿಯಾನ

ಚಿಕ್ಕಮಗಳೂರು (ಅ.1) : ಕೋಟೆ ಕೆರೆ ಸುತ್ತಮುತ್ತಲಿರುವ ಜಂಗಲ್‌ಗಳನ್ನು ತೆರವುಗೊಳಿಸಲಾಗಿದ್ದು, ಕೆರೆಯೊಳಗಿನ ಜಂಡು ಮತ್ತು ಹೂಳನ್ನು ತೆರವುಗೊಳಿಸಲು .1.5 ಕೋಟಿ ವೆಚ್ಚವಾಗಲಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಡಿಪಿಆರ್‌ ತಯಾರಿಸುವಂತೆ ಸೂಚಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಹೇಳಿದರು.\ ನಗರಸಭೆ, ಪೊಲೀಸ್‌ ಇಲಾಖೆ, ಸಿಡಿಎ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಕೋಟೆ ಕೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರಿಗೆ ಬೆದರಿಕೆ ಕರೆ

Tap to resize

Latest Videos

ವಾಯುವಿಹಾರಿಗಳಿಗೆ ಕೆರೆ ಸುತ್ತ ವಾಕ್‌ ಮಾಡಲು ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮವಹಿಸಲಾಗಿದೆ. ನಾಗರಿಕರು ವಾಕ್‌ ಮಾಡುವ ಸಂದರ್ಭ ಧೂಮಪಾನ, ಮದ್ಯಪಾನ ಮಾಡುವವರ ಕಂಡುಬಂದರೆ ಪೊಲೀಸ್‌ ಇಲಾಖೆ ಅಥವಾ ನಗರಸಭೆಗೆ ಮಾಹಿತಿ ನೀಡಿ ನೈರ್ಮಲ್ಯ ಕಾಪಾಡುವಲ್ಲಿ ಸಹಕರಿಸಬೇಕು. ನಗರಸಭೆಯಿಂದ ಸಿಸಿ ಕ್ಯಾಮರಾ, ವಿದ್ಯುತ್‌ ದೀಪ ಅಳವಡಿಕೆ ಮಾಡಿ ಸೈಕ್ಲಿಂಗ್‌ಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಅ.1ರಂದು ಹಿಟಾಚಿ ಮತ್ತು ಜೆಸಿಬಿ ಯಂತ್ರದ ಮೂಲಕ ಸಂಪೂರ್ಣ ಸ್ವಚ್ಛತೆ ಮಾಡಲಾಗುವುದು. ಅನಂತರ ಕೆರೆಯೊಳಗಿನ ಜಂಡು ತೆರವುಗೊಳಿಸಿ ಪ್ರವಾಸಿತಾಣವಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನಗರದ ಹೃದಯ ಭಾಗದಲ್ಲಿರುವ ಕೆರೆ- ಕಟ್ಟೆಗಳನ್ನು ಉಳಿಸಿ ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ. ಕೆರೆ ಮುಂದಿರುವ ಕೆ.ಎಂ. ರಸ್ತೆ ಜಾಗದಲ್ಲಿ ಸೆಲ್ಫಿ ಪಾಯಿಂಟ್‌ ಮಾಡಿಕೊಡಲು ಬಿಲ್ಡ​ರ್‍ಸ್ ಅಸೋಸಿಯೇಷನ್‌ ಮುಂದೆ ಬಂದಿದ್ದು, ನಗರಸಭೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಪೌರಾಯುಕ್ತ ಬಿ.ಸಿ.ಬಸವರಾಜ್‌ ಮಾತನಾಡಿ, ಸೆ.26 ರಿಂದ ಅ.1 ರವರೆಗೆ ನಗರದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ವಾಕ್‌ಥಾನ್‌, ಚಿತ್ರಕಲಾ ಸ್ಪರ್ಧೆ, ಸೈಕ್ಲಿಂಗ್‌ ಜಾಥಾ, ಕೆರೆ- ಕಟ್ಟೆಗಳ ಸ್ವಚ್ಛತೆ, ಸಿಗ್ನೇಚರ್‌ ಕ್ಯಾಂಪ್‌ಗಳನ್ನು ಮಾಡಲಾಗಿದೆ. ಅ.1ರಂದು ಸಮುದಾಯದ ಪ್ರತಿನಿಧಿಗಳೊಂದಿಗೆ ಸ್ವಚ್ಛತೆ ಮತ್ತು ಪ್ಲಾಸ್ಟಿಕ್‌ಮುಕ್ತ ನಗರದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಾರ್ವಜನಿಕರು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ತಪ್ಪದೇ ವಿಂಗಡಿಸಿ ಆಟೋ ಟಿಪ್ಪರ್‌ಗೆ ನೀಡುವ ಮೂಲಕ ಸಹಕರಿಸಬೇಕು ಎಂದರು.

World Tourism Day: ಚಿಕ್ಕಮಗಳೂರು ರಾಜ್ಯದ ಪ್ರವಾಸೋದ್ಯಮ ರಾಜಧಾನಿ

ಸ್ವಚ್ಛತಾ ಅಭಿಯಾನದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸದಸ್ಯರಾದ ಕುಮಾರ್‌, ರೂಪಾ, ಅರುಣ್‌ಕುಮಾರ್‌, ಅನು ಮಧುಕರ್‌, ನಗರಸಭೆ ನೌಕರರಾದ ಚಂದನ್‌, ಕುಮಾರ್‌, ರಂಗಪ್ಪ, ಶಶಿರಾಜ್‌ ಅರಸ್‌, ಈಶ್ವರ್‌, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಪೊಲೀಸ್‌ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

click me!