Mysur : ಮಹದೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ

By Kannadaprabha News  |  First Published Oct 25, 2022, 5:31 AM IST

ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಸಂದರ್ಭ ನಡೆಯುವ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಕಾರ್ಯಗಳ ತಯಾರಿ ಆರಂಭವಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಸಿದ್ಧತೆ ಭರದಿಂದ ಸಾಗಿದೆ.


 ಬೆಕ್ಕರೆ ಸತೀಶ್‌ ಆರಾಧ್ಯ

 ಪಿರಿಯಾಪಟ್ಟಣ (ಅ.25):  ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಸಂದರ್ಭ ನಡೆಯುವ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಕಾರ್ಯಗಳ ತಯಾರಿ ಆರಂಭವಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಸಿದ್ಧತೆ ಭರದಿಂದ ಸಾಗಿದೆ.

Latest Videos

undefined

Covid)  ಸೋಂಕಿನ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ ಆಚರಿಸಲು ಹಲವು ದಿನಗಳ ಹಿಂದಿನಿಂದಲೇ ಸಕಲ ತಯಾರಿ ಕೈಗೊಳ್ಳಲಾಗಿದೆ.

ಜಾತ್ರಾ ಮಹೋತ್ಸವ ಅಂಗವಾಗಿ (Temple) ಆವರಣ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ತಳಿರು ತೋರಣ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ, ದೇವಾಲಯ ಆವರಣದಲ್ಲಿ ಮಕ್ಕಳ ಆಟಿಕೆ ಹಾಗೂ ಗೃಹೋಪಯೋಗಿ ವಸ್ತು ಮಳಿಗೆ ತೆರೆಯಲಾಗಿದೆ, ರಥೋತ್ಸವ ದಿನ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆ ನಡೆಸಲು ವಿಶೇಷ ಶಾಮಿಯಾನ ಹಾಗೂ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಿದೆ

ಧಾರ್ಮಿಕ ಕಾರ್ಯಕ್ರಮಗಳು: ಅ. 24ರ ಸೋಮವಾರ ಸ್ವಾಮಿಯನ್ನು ಮಠದಿಂದ ಉದ್ಬವಸ್ಥಾನಕ್ಕೆ ಕರೆದೊಯ್ಯಲಾಯಿತು. ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ನಡೆಯಿತು. ಅ. 25 ರ ಮಂಗಳ ವಾರ ಹಾಲು ಹರವಿ ಸೇವೆ, ಮತ್ತು ಸಾಯಂಕಕಾಲ ವಿಶೇಷ ಪೂಜೆ ಜರುಗಲಿದೆ, ಅ. 26ರ ಬುಧವಾರ ಬೆಳಗ್ಗೆ ರಥೋತ್ಸವ ಮತ್ತು ಸಂಜೆ ಅಗ್ನಿಕೊಂಡೋತ್ಸವ ನಡೆಯಲಿದೆ. ಅ. 27ರ ಬುಧವಾರ ಪಾನಕ ಪೂಜೆ ಹಾಗೂ ಸಂಜೆ 5ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ಜರಗಲಿದೆ. ಜಾತ್ರೆ ಯಶಸ್ಸಿಗಾಗಿ ದೇವಾಲಯ ಆವರಣದಲ್ಲಿ ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ಬಂದೋಬಸ್‌್ತಗಾಗಿ ದೇವಾಲಯ ಆವರಣ ಸುತ್ತ ಬ್ಯಾರಿಕೇಡ್‌ಗಳನ್ನು ಇರಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ದರ್ಶನ ಬಂದ್ : 

ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ಗ್ರಹಣದ ಹಿನ್ನೆಲೆ ಅ.25 ಮಂಗಳವಾರ ಮಧ್ಯಾಹ್ನ 3ರ ಬಳಿಕ ಭಕ್ತಾಧಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಎಂದಿನಂತೆ ಬೆಳಿಗ್ಗೆಯಿಂದಲೇ ದೇವರಿಗೆ ವಿವಿಧ ಅಭಿಷೇಕ, ಪೂಜಾ ಪುನಸ್ಕಾರಗಳು ನಡೆಯಲಿವೆ. ಆದರೆ, ಸಂಜೆ 5.5ಕ್ಕೆ ಗ್ರಹಣ ಶುರುವಾಗುವ ಹಿನ್ನೆಲೆಯಲ್ಲಿ ಮಧ್ಯಾಹ್ನ 3ರ ನಂತರ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿದೆ. ಅ.26ರ ಬುಧವಾರ ಬಲಿಪಾಡ್ಯಮಿ ದಿನದಂದು ಬೆಟ್ಟದ ದೇವಿ ಚಿಕ್ಕದೇವಮ್ಮ ದೇವಸ್ಥಾನವನ್ನು ಶುಚಿಗೊಳಿಸಿ, ವಿವಿಧ ಅಭಿಷೇಕ, ಹೋಮ-ಹವನ ಮಾಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇವಸ್ಥಾನ ಆರ್ಚಕ ಸಿದ್ದಲಿಂಗಸ್ವಾಮಿ ತಿಳಿಸಿದ್ದಾರೆ.

ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಅ.25ರಂದು ಅಮಾವಾಸ್ಯೆ ಪೂಜೆ ನಡೆಯಲಿದ್ದು, ಗ್ರಹಣದ ಹಿನ್ನೆಲೆ ಅದೇ ದಿನ ಸಂಜೆ 5ರಿಂದ 6.30ರವರೆಗೆ ಭಕ್ತರು ದರ್ಶನ ನಿಷೇಧಿಸಲಾಗಿದೆ. ಅದೇ ರೀತಿ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿಯೂ ಸಂಜೆ 5ರ ನಂತರ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಚಿಕ್ಕದೇವಮ್ಮನ ಬೆಟ್ಟದಲ್ಲಿ ಗೋಪೂಜೆ: ದೀಪಾವಳಿ ಬಲಿಪಾಡ್ಯಮಿಯ ವಿಶೇಷವಾಗಿ ದೇವಸ್ಥಾನದಲ್ಲಿ ಅ.6ರಂದು ಸಂಜೆ 5.30ರಿಂದ 6.30ರ ಗೋದೊಳಿ ಲಗ್ನದಲ್ಲಿ ಗೋಪೂಜೆ ನಡೆಸಲಾಗುವುದು. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಪ್ರಕಟಣೆ ತಿಳಿಸಿದೆ.

ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಸಂದರ್ಭ ನಡೆಯುವ ಜಾತ್ರಾ ಮಹೋತ್ಸವ

ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಕಾರ್ಯಗಳ ತಯಾರಿ ಆರಂಭವಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ

click me!