ಮೈಸೂರು ಸದರಾ : ಅರಮನೆಗೆ ಬೆಳಕು - ಬಣ್ಣದ ಸಿಂಗಾರ ಆರಂಭ

By Kannadaprabha NewsFirst Published Sep 25, 2021, 11:47 AM IST
Highlights
  • ಕೋವಿಡ್ ಮೂರನೇ ಅಲೆಯ ಆತಂಕ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಸರಾ ಮಹೋತ್ಸವಕ್ಕೆ ಸಿದ್ಧತೆ
  • ಕೊರೋನಾ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಣೆ

 ವರದಿ : ಬಿ. ಶೇಖರ್ ಗೋಪಿನಾಥಂ 

ಮೈಸೂರು (ಸೆ.25):  ಕೋವಿಡ್  (covid ) ಮೂರನೇ ಅಲೆಯ ಆತಂಕ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರು (Mysuru) ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲಾಗುತ್ತಿದ್ದು, ಇದಕ್ಕಾಗಿ ದಸರಾ (Dasara) ಕೇಂದ್ರ ಬಿಂದುವಾದ ಮೈಸೂರು ಅರಮನೆಯನ್ನು ವಿದ್ಯುತ್ ಬೆಳಕು, ಬಣ್ಣದಿಂದ ಸಿಂಗಾರಗೊಳಿಸಲಾಗುತ್ತಿದೆ.

 ವಿಶ್ವ ವಿಖ್ಯಾತಿ ಪಡೆದಿರುವ ಮೈಸೂರು ಅರಮನೆಯ ದೀಪಾಲಂಕಾರವು ದಸರಾ ಸಂದರ್ಭದಲ್ಲಿ ಹೆಚ್ಚಿನ ಜನಮನ್ನಣೆ ಪಡೆದಿದೆ. ಅರಮನೆ (palace), ಅರಮನೆ ಆವರಣ, ದೇವಸ್ಥಾನಗಳು ಹಾಗೂ ಪ್ರವೇಶಕ್ಕೆ ದ್ವಾರಕ್ಕೆ ಅಳವಡಿಸಿರುವ ಬಲ್‌ಬ್ಗಳಲ್ಲಿ ಕೆಲವು ಬರ್ನ್ ಆಗಿವೆ. ಇದರಿಂದ ಅರಮನೆಯು ಜಗಮಗಿಸುವಾಗ ಯಾವುದೇ ಕೊರತೆ ಆಗಬಾರ ದೆಂಬ ಕಾರಣಕ್ಕಾಗಿ ಬರ್ನ್ ಆಗಿರುವ ಬಲ್ಬ್ ಗಳ ಬದಲಾವಣೆ, ವಿದ್ಯುತ್ ದೀಪಗಳ ದುರಸ್ತಿ, ವಿದ್ಯುತ್ ಕಂಬಗಳ ದುರಸ್ತಿ, ಪಾರಂಪರಿಕ ವಿದ್ಯುತ್ ಕಂಬಗಳಿಗೆ ಪೇಂಟಿಂಗ್ ಕಾರ್ಯವು ಭರದಿಂದ ಸಾಗುತ್ತಿದೆ. 

ಮೈಸೂರು : ದಸರಾ ಆನೆಗಳಿಗೆ ತಾಲೀಮು

ಅರಮನೆ ಒಳಾವರಣದಲ್ಲಿದ್ದ ವಿದ್ಯುತ್ ದೀ ಪಗಳ ನಿರ್ವಹಣೆ ಕಾರ್ಯ, ದುರಸ್ತಿ ಕಾರ್ಯ ವೂ ನಡೆಯುತ್ತಿದೆ. ಜೊತೆಗೆ ಅಲ್ಲಲ್ಲಿ ಬಣ್ಣ ಬಳಿಯುವ ಕಾರ್ಯವು ಸಾಗುತ್ತಿದೆ. ಇದರೊಂದಿಗೆ ಅರಮನೆ ಆವರಣದಲ್ಲಿ ಹಬ್ಬದ ವಾತಾವರಣ ಪೂರ್ವಭಾವಿ ಲಕ್ಷಣಗಳು ಈಗಲೇ ನಿರ್ಮಾಣವಾಗಿದೆ. ಇದು ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ದಸರಾ ಕುರಿತು ಮತ್ತಷ್ಟು ಕುತೂಹಲ ಮೂಡಿಸುತ್ತಿದೆ.

 ದಸರಾ ಆನೆಗಳ (elephants) ಕುತೂಹಲ: ಇನ್ನೂ ಅರಮನೆ ಆವರಣದ ಆನೆ ಬಿಡಾರದಲ್ಲಿ ದಸರೆಯಲ್ಲಿ ಭಾಗವಹಿಸಲು ಬಂದಿರುವ 8 ಆನೆಗಳನ್ನು ಇರಿಸ ಲಾಗಿದೆ. ಈ ಆನೆಗಳು ಬೆಳಗ್ಗೆ ಮತ್ತು ಸಂಜೆ ಅರ ಮನೆ ಒಳಾವರಣದಲ್ಲೇ ನಡಿಗೆ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಬೆಳಗ್ಗೆ ಅರಮನೆಗೆ ಪ್ರವಾ ಸಿಗರು ಪ್ರವೇಶಿಸುವ ಮುನ್ನವೇ ತಾಲೀಮು ಮುಗಿದಿರುತ್ತದೆ. ಆದರೆ, ಸಂಜೆ ಹೊತ್ತು ಆನೆ ಗಳ ನಡಿಗೆಯನ್ನು ಪ್ರವಾಸಿಗರು ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಕ್ಯಾಮರಾ, ಮೊ ಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ . ಇನ್ನೂ ದಸರಾ ಆನೆಗಳಿಗೆ ನಿತ್ಯ 2 ಹೊತ್ತು ವಿಶೇಷ ಆಹಾರ (Food) ನೀಡಲಾಗುತ್ತಿದೆ. 

ಹೆಸರು ಕಾಳು, ಗೋದಿ, ಕುಸುಬಲಕ್ಕಿ, ಉದ್ದು ಬೇಯಿಸಿ, ಅದರಲ್ಲಿ ಹಸಿ ತರಕಾರಿ ಜೊತೆಗೆ ಬೆಣ್ಣೆ ಮಿಶ್ರಣ ಮಾಡಿ ಆನೆಗಳಿಗೆ ನೀಡಲಾಗುತ್ತಿದೆ. ಜೊತೆಗೆ ಹುಲ್ಲು, ಮರದ ಸೊಪ್ಪನ್ನು ಸಹ ಆನೆಗಳಿಗೆ ನಿತ್ಯ ನೀಡಲಾಗುತ್ತಿದೆ. ಬೆಳಗ್ಗೆ ತಾಲೀಮು ಮುಗಿಸದ ಮೇಲೆ ನೀರಿನ ತೊಟ್ಟಿಯಲ್ಲಿ ಜಳಕ ಮಾಡುವ ಆನೆಗಳು ಆಹಾರ ಸೇವಿಸಿ ಬಿಡಾರದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಒಟ್ಟಿನಲ್ಲಿ ದಸರಾ ಮಹೋತ್ಸವ ಮೊದಲ ಅತಿಥಿಯಾದ ಗಜಪಡೆಯು ಅರಮನೆ ಪ್ರವೇಶಿಸಿದ ಬಳಿಕ ಹಬ್ಬದ ವಾತಾವರಣವು ದಿನದಿಂದ ದಿನಕ್ಕೆ ಹೆಚ್ಚಾಗಿ, ದಸರಾ ಮಹೋತ್ಸವವನ್ನು ಪ್ರವಾಸಿಗರು, ಸಾರ್ವಜನಿಕರು ಎದುರು ನೋಡುವಂತೆ ಮಾಡಿದೆ.  

click me!