ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಬಲಿ| ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ| ಬೆಳಗ್ಗೆ ಹೆರಿಗೆಗೆಂದು ಜ್ಯೋತಿಬಾಯಿ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು| ಆಸ್ಪತ್ರೆಗೆ ದಾಖಲಾಗಿ ಒಂದು ಗಂಟೆಯ ಬಳಿಕ ಬಂದ ವೈದ್ಯರು| ದ್ಯರು ಬರುವ ವೇಳೆಗೆ ಮೃತಪಟ್ಟಿದ್ದ ಜ್ಯೋತಿಬಾಯಿ|
ಕೊಪ್ಪಳ(ಡಿ.01): ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಇಂದು (ಭಾನುವಾರ) ನಡೆದಿದೆ. ಮೃತ ಗರ್ಭಿಣಿಯನ್ನು ಜ್ಯೋತಿಬಾಯಿ ನಾಯ್ಕ್ (27) ಎಂದು ಗುರುತಿಸಲಾಗಿದೆ.
ಬೆಳಗ್ಗೆ ಹೆರಿಗೆಗೆಂದು ಜ್ಯೋತಿಬಾಯಿ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಜ್ಯೋತಿ ಬಾಯಿ ಮೂಲತಃ ಬಳ್ಳಾರಿ ಜಿಲ್ಲೆ ಕೊಗಳಿ ತಾಂಡಾದವರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಒಂದು ಗಂಟೆಯ ಬಳಿಕ ವೈದ್ಯರು ಬಂದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಅವರು ಮೃತಪಟ್ಟಿದ್ದರು. ರಕ್ತದ ಕೊರತೆಯಿಂದ ರೋಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಜ್ಯೋತಿಬಾಯಿ ರಕ್ತ ಪರೀಕ್ಷೆ ವರದಿಯನ್ನು ವೈದ್ಯರು ತಿದ್ದಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಎಚ್ ಬಿ 11.6 ಇರೋದನ್ನ 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಸಂಬಂಧಿಕರ ಆಕ್ರೋಶ ವೈದ್ಯರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.