ವರದಕ್ಷಿಣೆ ಕಿರುಕುಳ: ಗಂಡನ ಮನೆಯ ಕಾಟ ತಾಳದೆ ಗರ್ಭಿಣಿ ಗೃಹಿಣಿ ಆತ್ಮಹತ್ಯೆ

Kannadaprabha News   | Asianet News
Published : Mar 08, 2020, 11:51 AM ISTUpdated : Mar 09, 2020, 09:15 AM IST
ವರದಕ್ಷಿಣೆ ಕಿರುಕುಳ: ಗಂಡನ ಮನೆಯ ಕಾಟ ತಾಳದೆ ಗರ್ಭಿಣಿ ಗೃಹಿಣಿ ಆತ್ಮಹತ್ಯೆ

ಸಾರಾಂಶ

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಅತ್ತೆಮನೆಯವರ ಕಾಟ ತಾಳದೇ ಗರ್ಭಿಣಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ಹೌಸಿಂಗ್‌ ಬೋರ್ಡ್‌ ಕಾಲೋನಿಯಲ್ಲಿ ಶನಿವಾರ ನಡೆದಿದೆ.  

ಮೈಸೂರು(ಮಾ.08): ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಅತ್ತೆಮನೆಯವರ ಕಾಟ ತಾಳದೇ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ಹೌಸಿಂಗ್‌ ಬೋರ್ಡ್‌ ಕಾಲೋನಿಯಲ್ಲಿ ಶನಿವಾರ ನಡೆದಿದೆ.

ಕಾಲೋನಿಯ ಸಿ.ಎಂ. ಕಾಳಯ್ಯರ ಪುತ್ರ ಕೆ. ಯೋಗೇಶ್‌ ಎಂಬವರ ಪತ್ನಿ ಬಿ. ಲಕ್ಷ್ಮೀ (23) ಆತ್ಮಹತ್ಯೆಗೆ ಶರಣಾದವರು. ವರ್ಷದ ಹಿಂದಷ್ಟೇ ಬಿ. ಲಕ್ಷ್ಮೀ ಯೋಗೇಶ್‌ರನ್ನು ವರಿಸಿದ್ದರು.

ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

ನಂಜನಗೂಡು ತಾಲೂಕು ಬಂಚಳ್ಳಿಹುಂಡಿ ಗ್ರಾಮದ ಬಿ. ಬಸವಣ್ಣನವರ ಪುತ್ರಿ ಬಿ. ಲಕ್ಷ್ಮೀಯನ್ನು 2019ರ ಏ. 28ರಂದು ಹುಣಸೂರಿನ ಹೌಸಿಂಗ್‌ ಬೋರ್ಡ್‌ ಕಾಲೋನಿಯಲ್ಲಿ ವಾಸವಿರುವ ಸಿ.ಎಂ. ಕಾಳಯ್ಯನವರ ಮೂರನೇ ಪುತ್ರ ಕೆ. ಯೋಗೇಶ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ವರದಕ್ಷಣೆಯಾಗಿ 450 ಗ್ರಾಂ. ಚಿನ್ನಾಭರಣಗಳು ಹಾಗೂ ಮೈಸೂರಿನಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಎರಡೇ ತಿಂಗಳಿಗೆ ಹಣಕ್ಕಾಗಿ ಬಿ. ಲಕ್ಷ್ಮೀಯನ್ನು ಪತಿ, ಮಾವ ಕಾಳಯ್ಯ ಮತ್ತು ಅತ್ತೆ ಚಿಕ್ಕಮ್ಮಣಿ, ಪತಿಯ ಸಹೋದರರಾದ ಕುಮಾರಸ್ವಾಮಿ ಮತ್ತು ಮಹೇಂದ್ರ ಪೀಡಿಸಲು ಆರಂಭಿಸಿದರು ಎಂದು ಮೃತಳ ತಂದೆ ಬಿ. ಬಸವಣ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಾ. 6ರಂದು ಬಿ. ಲಕ್ಷ್ಮೀ ತನ್ನ ತಂದೆಗೆ ಫೋನಾಯಿಸಿ ತಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿರೆಂದು ಅಂಗಲಾಚಿದ್ದಾರೆ. ಅದಕ್ಕೆ ತಾನು ನಾಳೆ ಹುಣಸೂರಿಗೆ ಬಂದು ಮಾತನಾಡುತ್ತೇನೆಂದು ತಂದೆ ಸಮಾಧಾನಿಸಿದ್ದಾರೆ. ಆದರೆ ಶನಿವಾರ ಹುಣಸೂರಿನಿಂದ ಮಾವ ಕಾಳಯ್ಯ ನಿಮ್ಮ ಮಗಳು ನೇಣು ಬಿಗಿದುಕೊಂಡಿದ್ದಾಳೆಂದು ತಿಳಿಸಿ ಫೋನ್‌ ಕಟ್‌ ಮಾಡಿದ್ದಾರೆ.

ಮೂವರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ..!

ಡಿವೈಎಸ್‌ಪಿ ಕೆ.ಎಸ್‌. ಸುಂದರರಾಜ್‌ ಅವರು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ರವಾನಿಸಿದ್ದು, ಪರೀಕ್ಷೆ ಮುಗಿದ ನಂತರ ಸಂಬಂಧಿಗಳಿಗೆ ಮೃತದೇಹವನ್ನು ನೀಡಲಾಗುವುದು. ಪ್ರಕರಣದ ತನಿಖೆ ತಮ್ಮ ನೇತೃತ್ವದಲ್ಲಿ ನಡೆಯಲಿದ್ದು, ದೂರಿನಲ್ಲಿ ತಿಳಿಸಿರುವವರನ್ನು ಕರೆಯಿಸಿ ವಿಚಾರಣೆ ನಡಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌ ಠಾಣೆಯಲ್ಲಿ ಜಮಾವಣೆಗೊಂಡಿದ್ದ ಗೃಹಿಣಿಯ ಸಂಬಂಧಿಗಳನ್ನು ಸಮಾಧಾನಿಸಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಹುಣಸೂರು ಪಟ್ಟಣ ಠಾಣೆ ಎಸ್‌ಐ ಮಹೇಶ್‌ ಪ್ರಕರಣ ದಾಖಲಿಸಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು