ರೈತರಿಗೆ ತಹಸೀಲ್ದಾರ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಗ್ರೀನ್ ಲಿಸ್ಟ್‌ನಲ್ಲಿ ಹೆಸರಿದ್ದರೆ ಸಾಲ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಜಗಳೂರು [ಮಾ.08]: ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದಿಂದ ಎಲ್ಲಾ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು. ತಾಲೂಕು ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಹಿರೇಬನ್ನಿಹಟ್ಟಿಯ ರೈತ ಸತೀಶ್ ಸಾಲ ಮನ್ನಾ ಯೋಜನೆಯ ಫಲಾನುಭವಿಯಾಗಿದ್ದರೂ ಬ್ಯಾಂಕ್‌ನವರು ಸಾಲ ಮರುಪಾವತಿಗೆ ಒತ್ತಾಯ ಮಾಡುತ್ತಾರೆಂದು ಸಭೆಯ ಗಮನಕ್ಕೆ ತಂದರು.ಆಗ ಕಡತಗಳನ್ನು ಪರಿಶೀಲಿಸಿದ ತಹಶೀಲ್ದಾರ್ ನಿಮ್ಮದು ಗ್ರೀನ್ ಲಿಸ್ಟ್‌ನಲ್ಲಿ ಇರುವುದರಿಂದ ನೀವು ಸಾಲ ಮನ್ನಾ ಯೋಜನೆಯ ಫಲಾನುಭವಿಯಾಗಿದ್ದೀರಿ. ಹಾಗಾಗಿ ನೀವು ಸಾಲ ಮರುಪಾವತಿ ಮಾಡುವಂತಿಲ್ಲ ಎಂದು ಹೇಳಿ, ಈ ರೈತರಂತೆಯೇ ತಾಲೂಕಿನ ರೈತರು ಗ್ರೀನ್ ಲಿಸ್ಟ್ ನಲ್ಲಿದ್ದರೆ ಸಾಲ ಮರುಪಾವತಿ ಮಾಡುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.
undefined
ಹೊಸಕೆರೆ ಗ್ರಾಮದ ಉಮೇಶಪ್ಪ ಎಂಬುವರು ಬ್ಯಾಂಕ್‌ನವರು ಬೆಳೆ ಸಾಲ ಕೊಡುತ್ತಿಲ್ಲ ಸರ್ ಎಂದರು. ಆಗ ದೂರವಾಣಿ ಮೂಲಕ ಬ್ಯಾಂಕ್ ವ್ಯವಸ್ಥಾಪಕರಿಗೆ ಕರೆ ಮಾಡಿದ ತಹಶೀಲ್ದಾರ್ ಯಾಕೆ ಸಾಲ ನೀಡುವುದಿಲ್ಲ ಎಂದು ಹೇಳುತ್ತಿರಿ ಎಂದು ಕೇಳಿದಾಗ, ಸಾಲ ಕೊಡುತ್ತೇವೆ ಅವರನ್ನು ಬ್ಯಾಂಕ್‌ಗೆ ಕಳುಹಿಸಿ ಎಂದು ಪ್ರತಿಕ್ರಿಯಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಪ್ಪಿಗೆ ಪತ್ರದ ಮೂಲಕ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಕೆಂಚಮ್ಮನಳ್ಳಿ ಮಾನವ ಹಕ್ಕುಗಳ ಸಮಿತಿ ಸದಸ್ಯ ದಾಖಲೆ ಸಹಿತ ತಿಳಿಸಿದಾಗ ಪರೀಶೀಲನೆ ನಡೆಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಓ ಮಲ್ಲಾ ನಾಯ್ಕ, ಎಸ್ಟಿಅಧಿಕಾರಿ ಮಹೇಶ್ವರಪ್ಪ, ಬಿಸಿಎಂ ವಿಸ್ತಿರ್ಣಾಧಿಕಾರಿ ವೆಂಕಟೇಶ್, ಬೆಸ್ಕಾಂ ಎಇಇ ಪ್ರವೀಣ್, ಎಪಿಎಂ ಸಿ ಕಾರ್ಯದರ್ಶಿ ಯೋಗರಾಜ್ , ಶಿಕ್ಷಣ ಇಲಾಖೆಯ ಬಸವನ ಗೌಡ, ರೇಷ್ಮೆ ಇಲಾಖೆಯ ಪತ್ತರ್ ಇತರರು ಇದ್ದರು.